Abhishek Ambareesh: ತನ್ನ ಭಾವಿಪತ್ನಿಯ ಬರ್ತಡೇಗೆ ಅಭಿಷೇಕ್ ಅಂಬರೀಶ್ ರೋಮ್ಯಾಂಟಿಕ್ ಆಗಿ ವಿಶ್ ಮಾಡಿದ್ದು ಹೇಗೆ ಗೊತ್ತಾ?

Abhishek Ambareesh ರೆಬೆಲ್ ಸ್ಟಾರ್ ಅಂಬರೀಶ್(Rebel Star Amabreesh) ಅವರ ನಂತರ ಕನ್ನಡ ಚಿತ್ರರಂಗಕ್ಕೆ ಅವರ ಉತ್ತರಾಧಿಕಾರಿಯಾಗಿ ಅಭಿಷೇಕ್ ಅಂಬರೀಶ್ ರವರು ಅಮರ್ ಚಿತ್ರದ ಮೂಲಕ ನಾಯಕ ನಟನಾಗಿ ಈಗಾಗಲೇ ಕಾಲಿಟ್ಟಿರುವುದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಸದ್ಯಕ್ಕೆ ಅವರ ಮುಂದಿನ ಸಿನಿಮಾಗಳು ಚಿತ್ರೀಕರಣದ ಹಂತದಲ್ಲಿವೆ. ಅದರಲ್ಲೂ ವಿಶೇಷವಾಗಿ ಅವರ ಮುಂದಿನ ಸಿನಿಮಾ ಬ್ಯಾಡ್ ಮ್ಯಾನರ್ಸ್(Bad Manners Movie) ಚಿತ್ರೀಕರಣವನ್ನು ಮುಗಿಸಿ ಬಿಡುಗಡೆಗೆ ಸಜ್ಜಾಗಿ ನಿಂತಿದೆ.

ಇನ್ನು ಸಿನಿಮಾ ಜೀವನದ ಕುರಿತಂತೆ ಪ್ರತಿಯೊಬ್ಬರಿಗೂ ಕೂಡ ತಿಳಿದಿರುವುದಾಗಿದೆ. ಅವರ ವೈಯಕ್ತಿಕ ಜೀವನದ ಕುರಿತಂತೆ ಮಾತನಾಡುವುದಾದರೆ ಇತ್ತೀಚೆಗಷ್ಟೇ ನಿಮಗೆಲ್ಲರಿಗೂ ತಿಳಿದಿರುವಂತೆ ಅವಿವಾ ಬಿದ್ದಪ್ಪ(Aviva Biddappa) ಎನ್ನುವವರನ್ನು ಅಭಿಷೇಕ್ ಅಂಬರೀಶ್ ರವರು ನಿಶ್ಚಿತಾರ್ಥ ಆಗುವ ಮೂಲಕ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದರು. ಅತಿ ಶೀಘ್ರದಲ್ಲೇ ಇವರಿಬ್ಬರು ಹಸೆಮಣೆ ಏರುವುದು ಗ್ಯಾರಂಟಿ ಎನ್ನುವುದಾಗಿ ಎಲ್ಲಾ ಕಡೆ ಸುದ್ದಿ.

ಇನ್ನು ಇತ್ತೀಚಿಗಷ್ಟೇ ಅಭಿಷೇಕ್ ಅಂಬರೀಶ್(Abhishek Ambareesh) ಅವರ ಭಾವಿ ಪತ್ನಿ ಆಗಿರುವ ಅವಿವಾ ಬಿದ್ದಪ್ಪ ತಮ್ಮ ಜನ್ಮದಿನಾಚರಣೆಯನ್ನು ಆಚರಿಸಿಕೊಂಡಿದ್ದು ಇದಕ್ಕೆ ಅಭಿಷೇಕ್ ಅಂಬರೀಶ್ ಅವರು ಕೂಡ ಅವಿವಾ ಬಿದ್ದಪ್ಪ ಅವರಿಗೆ ವಿಶೇಷವಾದ ಫೋಟೋಗಳನ್ನು ಪೋಸ್ಟ್ ಮಾಡುವ ಮೂಲಕ ರೋಮ್ಯಾಂಟಿಕ್ ಆಗಿ ಜನ್ಮದಿನದ ಶುಭಾಶಯಗಳನ್ನು ಕೋರಿದ್ದಾರೆ.

ನಿನಗೆ ಹುಟ್ಟುಹಬ್ಬದ ಶುಭಾಶಯಗಳು ಮುಂದೆ ಬರುವಂತಹ ಎಲ್ಲದಕ್ಕೂ ನಾನು ಕಾತರನಾಗಿದ್ದೇನೆ ದೇವರು ನಿನಗೆ ಒಳ್ಳೆಯದನ್ನು ಮಾಡಲಿ ಲಿಟಲ್ ಕ್ಯೂಟಿ ಎಂಬುದಾಗಿ ತಮ್ಮ ಮುದ್ದಿನಭಾವಿ ಪತ್ನಿಗೆ ಅಭಿಷೇಕ್ ಅಂಬರೀಶ್ ರವರು ವಿಶೇಷವಾಗಿ ಶುಭಾಶಯಗಳನ್ನು ಕೋರಿದ್ದಾರೆ. ಈ ಜೋಡಿ ಬಗ್ಗೆ ನಿಮಗಿರುವಂತಹ ಅಭಿಪ್ರಾಯಗಳನ್ನು ಕಾಮೆಂಟ್ ನಲ್ಲಿ ಹಂಚಿಕೊಳ್ಳಬಹುದಾಗಿದೆ.

Leave A Reply

Your email address will not be published.