ಅಪ್ಪನನ್ನು ಮನೆಯಿಂದ ಹೊರ ತಳ್ಳಿದ ಮಗ. ಮಗನಿಗೆ ಬುದ್ಧಿ ಕಲಿಸಲು ತಂದೆ ಮಾಡಿದ್ದೇನು ಗೊತ್ತಾ?

Kannada News ಮಕ್ಕಳನ್ನು ಸಾಕಿ ಬೆಳೆಸಿದ ತಂದೆ ತಾಯಿಯನ್ನು ಅವರ ಇಳಿಯ ವಯಸ್ಸಿನಲ್ಲಿ ಮಕ್ಕಳು ನೋಡಿಕೊಳ್ಳದೆ ಇರೋದು ಇತ್ತೀಚಿನ ದಿನಗಳಲ್ಲಿ ಕಾಮನ್ ಆಗಿಬಿಟ್ಟಿದೆ. ಉತ್ತರ ಪ್ರದೇಶದ(Uttar Pradesh) ಮುಜಫರ್ ನಗರದಲ್ಲಿ ಕೂಡ ಇದೇ ರೀತಿಯ ಘಟನೆ ಎಂದು ವರದಿಯಾಗಿದೆ. ಮಗನನ್ನು ಚೆನ್ನಾಗಿ ಓದಿಸಿ ಒಳ್ಳೆಯ ಕೆಲಸಕ್ಕೆ ಸೇರುವಂತೆ ಮಾಡಿ ಆತನಿಗೆ ಮದುವೆಯನ್ನು ಕೂಡ ಮಾಡಿಕೊಟ್ಟಿರುವ ತಂದೆಯನ್ನೇ ಈಗ ಅನಾರೋಗ್ಯ ಎಂಬ ನೆಪವನ್ನು ನೀಡಿ ಮನೆಯಿಂದ ಹೊರಹಾಕಿ ಅನಾಥಾಶ್ರಮಕ್ಕೆ ಸೇರಿಸಿದ್ದಾನೆ. ಆದರೆ ಅದರ ಪ್ರತಿಕಾರವಾಗಿ ತಂದೆ ನಡೆದುಕೊಂಡಿರುವ ನಡೆ ನಿಜಕ್ಕೂ ಕೂಡ ಎಲ್ಲರ ಹುಬ್ಬೇರಿಸುವಂತಿದೆ.

80 ವರ್ಷ ವಯಸ್ಸಿನ ನಾಥು ಸಿಂಗ್(Nathu Singh) ರವರಿಗೆ ವಯೋಸಹಜ ಖಾಯಿಲೆಯಿಂದಾಗಿ ಸಾಕಷ್ಟು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಆ ಕಡೆ ಸೊಸೆ ಕೂಡ ತಂದೆಯ ಆರೋಗ್ಯವನ್ನು ನಾನು ನೋಡಿಕೊಳ್ಳುವುದಿಲ್ಲ ಎಂಬುದಾಗಿ ಹಣ ಖಂಡಿತವಾಗಿ ತನ್ನ ಗಂಡನಿಗೆ ಹೇಳಿದ್ದು ದಿನ ಬೆಳಗಾದರೆ ಮನೆಯಲ್ಲಿ ಜಗಳ ನಡೆಯುತ್ತಿತ್ತು. ಮಗ ಹಾಗೂ ಸೊಸೆಯ ಜಗಳಗಳಿಂದಾಗಿ ಬೇಸತ್ತು ಹೋಗಿರುವ ಮಾತು 80ನೇ ವಯಸ್ಸಿನಲ್ಲಿ ಅನಾಥಾಶ್ರಮ ಸೇರುವಂತಹ ಪರಿಸ್ಥಿತಿ ಎದುರಾಗಿತ್ತು.

ಈ ವೃದ್ಧಾಪ್ಯದಲ್ಲಿ ಮಗ ಹಾಗೂ ಸೊಸೆ ಮಾಡಿರುವ ಕಾರ್ಯಕ್ಕೆ ಪ್ರತಿಕಾರ ಎನ್ನುವಂತೆ ನಾಥು ಸಿಂಗ್ ಮಾಡಿರುವ ಕೆಲಸ ಈಗ ಎಲ್ಲರೂ ಹುಬ್ಬೇಇರುವಂತೆ ಮಾಡಿದೆ ಎಂದರ ತಪ್ಪಾಗಲಾರದು. ಹೌದು ತಮ್ಮ ಹೆಸರಿನಲ್ಲಿರುವ 1.5 ಕೋಟಿ ರೂಪಾಯಿ ಮೌಲ್ಯದ ಜಮೀನು ತೋಟ ಹಾಗೂ ಆಸ್ತಿಯನ್ನು ಉತ್ತರ ಪ್ರದೇಶದ ರಾಜ್ಯಪಾಲರ(Governor Of Uttar Pradesh) ಹೆಸರಿಗೆ ಬರೆದು ನನ್ನ ಮರಣ ನಂತರ ಇದನ್ನು ಶಾಲೆ ಅಥವಾ ಆಸ್ಪತ್ರೆಯನ್ನು ಕಟ್ಟಿಸಿ ಎಂಬುದಾಗಿ ವಿಲ್ ಬರೆಸಿಟ್ಟಿದ್ದಾರೆ.

ಅವಕಾಶ ಕೈತಪ್ಪಿ ಹೋಯಿತಲ್ಲ ಎನ್ನುವ ಕಾರಣದಿಂದಾಗಿ ಮಗ ಹಾಗೂ ಸೊಸೆ ಇಬ್ಬರು ಕೂಡ ಕೈಕೈಹಿಸಿದುಕೊಂಡು ಕೋರ್ಟಿಗೆ ಹೋಗಿ ಇದನ್ನು ಮತ್ತೆ ಮರಳಿ ಪಡೆಯಬಹುದ ಎಂಬುದಾಗಿ ವಕೀಲರಲ್ಲಿ ವಿಚಾರಿಸಿದ್ದಾರೆ ಆದರೆ ಉತ್ತರ ಪ್ರದೇಶದಲ್ಲಿ ಬಂದಿರುವಂತಹ ಹೊಸ ಕಾನೂನಿನ ನಿಯಮದ(Judicial Rules) ಪ್ರಕಾರ ಇದು ಸಿಗುವುದಿಲ್ಲ ಎಂಬುದಾಗಿ ತಿಳಿದು ಬಂದಿದೆ. ತಮ್ಮ ಜೀವನವನ್ನು ರೂಪಿಸಿಕೊಟ್ಟ ತಂದೆ ತಾಯಿಯರನ್ನು ವೃದ್ಧಾಪ್ಯದಲ್ಲಿ ಮನೆಯಿಂದ ಹೊರ ಹಾಕುವ ಹಾಗೂ ಅನಾಥಾಶ್ರಮಕ್ಕೆ ಸೇರಿಸುವ ಪ್ರತಿಯೊಬ್ಬ ಮಕ್ಕಳಿಗೂ ಕೂಡ ಇದೊಂದು ಪಾಠವಾಗಿರಲಿದೆ.

Leave a Comment

error: Content is protected !!