Google Map: ಗೂಗಲ್ ಮ್ಯಾಪ್ ನಲ್ಲಿ ಪತ್ತೆಯಾಗಿದೆ ದೈತ್ಯ ಹಾವಿನ ಮೂಳೆಯ ಚಿತ್ರ. ಏನಿದರೆ ಹಿಂದಿನ ನಿಜವಾದ ರಹಸ್ಯ.

Viral News ಸೋಶಿಯಲ್ ಮೀಡಿಯಾದಲ್ಲಿ ಆಗಾಗ ನಾವು ಕಾಣುವಂತಹ ಕೆಲವೊಂದು ಚಿತ್ರ ವಾದ ವಿಚಾರಗಳು ಕೆಲವೊಮ್ಮೆ ನಮಗೆ ಮನರಂಜನೆಯನ್ನು ನೀಡಿದರೆ ಇನ್ನೂ ಕೆಲವೊಮ್ಮೆ ಕೆಲವೊಂದು ಮಾಹಿತಿಗಳನ್ನು ತಿಳಿಸುತ್ತವೆ. ಈಗ ಗೂಗಲ್ ಮ್ಯಾಪ್(Google Map) ನಲ್ಲಿ ಕಂಡು ಬಂದಿರುವಂತಹ ಒಂದು ವಿಚಿತ್ರ ಫೋಟೋ ಕೂಡ ಅದೇ ರೀತಿಯ ವಿಚಾರವಾಗಿದ್ದು ನಿಜಕ್ಕೂ ಕೂಡ ಪ್ರತಿಯೊಬ್ಬರೂ ಆಶ್ಚರ್ಯ ಪಡುವಂತೆ ಮಾಡಿದೆ.

ಯಾಕೆಂದರೆ ಗೂಗಲ್ ಮ್ಯಾಪ್ ನಲ್ಲಿ ಕಂಡು ಬಂದಿರುವ ಈ ಫೋಟೋದಲ್ಲಿ ದೊಡ್ಡ ಗಾತ್ರದ ಅಂದರೆ ಸರಿ ಸುಮಾರು 30 ಮೀಟರ್ ಉದ್ದದ ಹಾವಿನ ಗಾತ್ರದ ಅಸ್ತಿಪಂಜರದ(Skeleton Of snake) ಫೋಟೋ ಕಂಡು ಬಂದಿದೆ. ಇದನ್ನು ಟಿಕ್ ಟಾಕ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು ಎಲ್ಲರೂ ಕೂಡ ಇಷ್ಟೊಂದು ದೊಡ್ಡ ಹಾವು ಎಲ್ಲಿದೆ ಎಂಬುದಾಗಿ ಎಲ್ಲರೂ ಕೂಡ ಆಶ್ಚರ್ಯ ಚಕಿತರಾಗಿದ್ದಾರೆ. ಇನ್ನು ಗೂಗಲ್ ಮ್ಯಾಪ್ ನಲ್ಲಿ ಇದು ಫ್ರಾನ್ಸ್ ನಲ್ಲಿ ಇದೆ ಎಂಬುದಾಗಿ ತಿಳಿದು ಬಂದಿದೆ.

ಮೊದಲಿಗೆ ಇಷ್ಟೊಂದು ದೊಡ್ಡ ಗಾತ್ರದಲ್ಲಿ ಇರುವಂತಹ ಹಾವಿನ ಅಸ್ತಿಪಂಜರವನ್ನು ನೋಡಿ ಅಳಿವಿನಂಚಿನಲ್ಲಿರುವ ಟೈಟಾನೋಬೋವಾ(Titanobova) ಹಾವಿರಬಹುದು ಎಂಬುದಾಗಿ ಎಲ್ಲರೂ ಕೂಡ ಅಂದುಕೊಂಡಿದ್ದರು ಆದರೆ ಇದರ ಹಿಂದಿನ ನಿಜವಾದ ಅಸಲಿ ಎಂದು ಬೇರೇನೇ ಇದೆ. ಅಷ್ಟಕ್ಕೂ ಹಾಗಿದ್ದರೆ ಇದರ ಹಿಂದಿನ ನಿಜವಾದ ಅಸಲಿಯತ್ತೇನು ಎಂಬುದನ್ನು ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ.

ಹೌದು ಗೆಳೆಯರೆ ಗೂಗಲ್ ಮ್ಯಾಪ್ ನಲ್ಲಿ ಹಾವಿನ ಅಸ್ಥಿಪಂಜರದಂತೆ ಕಾಣುವಂತಹ ಇದು ಒಂದು ಶಿಲ್ಪ ಕಲೆಯಾಗಿದ್ದು ಇದರ ಹೆಸರು ಲೆ ಸರ್ಪೆಂಟ್ ಡಿ ಆಪ್ಷನ್( Me Serpant De Option) ಎಂಬುದಾಗಿದೆ ಎಂದು ತಿಳಿದು ಬಂದಿದೆ. ಫ್ರೆಂಚ್ ಕಲಾವಿದ ಮಾಡಿರುವಂತಹ ಶಿಲ್ಪ ಕಲಾಕೃತಿ ಇದಾಗಿದ್ದು ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ಇದು ನಿಜವಾಗಲೂ ಹಾವಿನ ಅಸ್ತಿಪಂಜರ ಎನ್ನುವಂತೆ ಸುದ್ದಿ ಹಬ್ಬಿಸಲಾಗಿದೆ. ಅದಕ್ಕೆ ತಾನೇ ಹೇಳೋದು ಇದನ್ನು ಸೋಶಿಯಲ್ ಮೀಡಿಯಾ ಅಂತ.

Leave a Comment

error: Content is protected !!