Weekend With Ramesh: ಈ ವಾರದ ವೀಕೆಂಡ್ ವಿತ್ ರಮೇಶ್ ಗೆ ಬರ್ತಿದ್ದಾರಾ ಈ ಖ್ಯಾತ ರಾಜಕಾರಣಿ?

Weekend With Ramesh ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಎನ್ನುವುದು ಕನ್ನಡ ಕಿರುತೆರೆಯ(Television) ಪ್ರೇಕ್ಷಕರಿಗೆ ಒಂದು ಎಮೋಷನಲ್ ಕಾರ್ಯಕ್ರಮ ಎಂದರೆ ತಪ್ಪಾಗಲಾರದು. ಈ ಕಾರ್ಯಕ್ರಮದ ಮೂಲಕ ಕರುನಾಡಿನ ಸಾಕಷ್ಟು ಸಾಧಕರ ಪರಿಚಯವನ್ನು ಕನ್ನಡದ ಯುವ ಪ್ರೇಕ್ಷಕರಿಗೆ ಮಾಡಲಾಗಿದೆ.

ಈಗಾಗಲೇ ಸಾಕಷ್ಟು ಎಪಿಸೋಡ್ಗಳು ಈ ಬಾರಿ ನಡೆದಿದ್ದು ಪ್ರತಿಯೊಂದು ಎಪಿಸೋಡ್ಗಳು ಕೂಡ ಪ್ರೇಕ್ಷಕರಿಗೆ ಆ ಸೆಲೆಬ್ರಿಟಿಗಳ ಜೀವನದ ಗೊತ್ತಿಲ್ಲದ ವಿಚಾರಗಳನ್ನು ತಿಳಿಸುವಂತಹ ಸಂಪೂರ್ಣ ಪ್ರಾಮಾಣಿಕ ಪ್ರಯತ್ನವನ್ನು ಮಾಡಿದ್ದು ಪ್ರತಿಯೊಬ್ಬರೂ ಕೂಡ ಪ್ರತಿಯೊಂದು ಎಪಿಸೋಡ್ ಗಳನ್ನು ಇಷ್ಟಪಟ್ಟಿದ್ದಾರೆ.

ಇನ್ನು ಈ ವಾರದ ಎಪಿಸೋಡಿನಲ್ಲಿ ಕರ್ನಾಟಕದ ಒಬ್ಬ ಮುಖ್ಯ ರಾಜಕಾರಣಿ ಒಬ್ಬರು ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿಗಳು ಕೇಳಿ ಬರುತ್ತಿವೆ. ಹಾಗಿದ್ದರೆ ಮೂಲಗಳ ಪ್ರಕಾರ ಈ ಬಾರಿ ವೀಕೆಂಡ್ ವಿತ್ ರಮೇಶ್(Weekend With Ramesh) ಕಾರ್ಯಕ್ರಮದಲ್ಲಿ ಸಾಧಕರ ಸೀಟಿನ ಮೇಲೆ ಕುಳಿತುಕೊಳ್ಳಲು ಕರ್ನಾಟಕದ ಆ ಖ್ಯಾತ ರಾಜಕಾರಣಿ ಯಾರು ಎಂಬುದನ್ನು ತಿಳಿಯೋಣ ಬನ್ನಿ.

ಹೌದು ಕರ್ನಾಟಕದ ನೂತನ ಉಪಮುಖ್ಯಮಂತ್ರಿಯಾಗಿರುವಂತಹ ಕನಕಪುರದ ಬಂಡೆ ಖ್ಯಾತಿಯ ಡಿಕೆ ಶಿವಕುಮಾರ್(DK Shivakumar) ಅವರು ಈ ಬಾರಿಯ ವೀಕೆಂಡ್ ವಿತ್ ರಮೇಶ್ ವೇದಿಕೆ ಮೇಲೆ ಸಾಧಕರ ಸೀಟಿನಲ್ಲಿ ಕುಳಿತುಕೊಳ್ಳಲಿದ್ದಾರೆ ಎಂಬುದಾಗಿ ಮೂಲಗಳು ತಿಳಿಸಿದ್ದು ವಾಹಿನಿ ಪ್ರೋಮೋ ಪೋಸ್ಟ್ ಮಾಡಿದ ನಂತರವಷ್ಟೇ ಇದು ಅಧಿಕೃತವಾಗಿ ತಿಳಿದು ಬರಬೇಕಾಗಿದೆ.

Leave A Reply

Your email address will not be published.