Puneeth Rajkumar ದಾಖಲೆ ಮಾಡಲು ಹೊರಟ ಅಪ್ಪು ಅಭಿಮಾನಿಗಳು! ಅಪ್ಪುನೇ ಇನ್ಮೇಲೆ ನಂಬರ್ ಒನ್.

Puneeth Rajkumar: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಮ್ಮನ್ನೆಲ್ಲ ಅಗಲಿ ಈಗಾಗಲೇ ವರ್ಷಗಳು ಕಳೆದರೂ ಕೂಡ ನಿಜಕ್ಕೂ ಇಂದಿಗೂ ಪ್ರತಿಯೊಬ್ಬ ಕನ್ನಡಿಗನ ಮನಸ್ಸಿನಲ್ಲಿ ಅಜರಾಮರನಾಗಿ(Immortal) ಉಳಿದುಕೊಂಡಿದ್ದಾರೆ. ಅವರು ಮಾಡಿರುವ ಕೆಲಸದಿಂದ ಸೂರ್ಯ ಚಂದ್ರ ಇರುವ ತನಕ ಕನ್ನಡಿಗರ ಮನಸ್ಸಿನ ಆಳದಲ್ಲಿ ಸದಾ ಕಾಲ ಜೀವಂತವಾಗಿರುತ್ತಾರೆ. ಪರದೆಯ ಮೇಲೆ ನಟಿಸಿರುವ ಹಲವಾರು ಹೀರೋಗಳನ್ನು ನಾವು ನೋಡಿರಬಹುದು ಆದರೆ ನಿಜ ಜೀವನದಲ್ಲಿ ಕೂಡ ಸಮಾಜ ಮುಖಿ(Social Welfare) ಕೆಲಸ ಮಾಡುವ ಮೂಲಕ ಹೀರೋ ಆದವರು ನಮ್ಮೆಲ್ಲರ ನೆಚ್ಚಿನ ಅಪ್ಪು ಒಬ್ಬರೇ.

ಇನ್ನು ಇದೇ ಅಪ್ಪು ಅವರ ಸಮಾಜಮುಖಿ ಕೆಲಸವನ್ನು ಗುರುತಿಸಿ ಕರ್ನಾಟಕ ರಾಜ್ಯ ಸರ್ಕಾರ ಕೊಡ ಮಾಡುವ ಅತ್ಯುನ್ನತ ಗೌರವ ಆಗಿರುವ ಕರ್ನಾಟಕ ರತ್ನ ಪ್ರಶಸ್ತಿಯನ್ನು ಕೂಡ ಪ್ರಧಾನ ಮಾಡಲಾಗಿದೆ. ಈಗಾಗಲೇ ಅಪ್ಪು ಅವರ ಹೆಸರನ್ನು ಹಲವಾರು ಸರ್ಕಲ್ ಹಾಗೂ ರಸ್ತೆಗಳ ಹೆಸರನ್ನಾಗಿ ಕೂಡ ಇಡಲಾಗಿದ್ದು ಅವರಿಗೆ ಗೌರವವನ್ನು ಸಲ್ಲಿಸಲಾಗಿದೆ. ಇನ್ನು ಹೊಂಬಾಳೆ ಫಿಲಂ ಸಂಸ್ಥೆಗಳು ಸೇರಿದಂತೆ ಇನ್ನೂ ಹಲವಾರು ಸಿನಿಮಾ ಸಂಸ್ಥೆಗಳು ಪ್ರತಿಯೊಂದು ಸಿನಿಮಾ ಆರಂಭವಾಗುವ ಮುನ್ನ ಅಪ್ಪು ಅವರಿಗೆ ಗೌರವ(Tribute) ಸಲ್ಲಿಸುವ ಕೆಲಸವನ್ನು ಮಾಡುತ್ತಿವೆ.

puneeth Rajkumar Statue At bellary

ಅಪ್ಪು ಅವರು ನಮ್ಮ ನಡುವೆ ಇಲ್ಲದಿದ್ದರೂ ಕೂಡ ಅವರ ಅಭಿಮಾನಿಗಳು ಅವರ ಹೆಸರಿನಲ್ಲಿ ಮಾಡುತ್ತಿರುವ ಕಾರ್ಯಗಳು ನಿಜಕ್ಕೂ ಕೂಡ ಪ್ರಶಂಸಾರ್ಹ(Appreciable). ಬಳ್ಳಾರಿಯಲಿ ಅಪ್ಪು ಅವರಿಗೆ ಇರುವಷ್ಟು ಅಭಿಮಾನಿಗಳು ಕನ್ನಡದಲ್ಲಿ ಬೇರೆ ಯಾವ ನಟರಿಗೂ ಕೂಡ ಇರುವುದು ಸಾಧ್ಯವೇ ಇಲ್ಲ ಎಂದು ಹೇಳುವಷ್ಟರ ಮಟ್ಟಿಗೆ ಬಳ್ಳಾರಿಯ ಜನತೆ ಅಪ್ಪು ಅವರಿಗೆ ಪ್ರೀತಿ ಹಾಗೂ ಗೌರವವನ್ನು ನೀಡುತ್ತಾರೆ. ಇನ್ನು ಇಲ್ಲೇ ಅಪ್ಪು ಅವರ ಅಭಿಮಾನಿಗಳು ಅಪ್ಪು ಅವರ ಹೆಸರಿನಲ್ಲಿ ಯಾರೂ ಮಾಡದ ದಾಖಲೆಯೊಂದನ್ನು ಮಾಡಲು ಹೊರಟಿದ್ದಾರೆ.

ಹೌದು ಗೆಳೆಯರೇ, ಬಳ್ಳಾರಿಯಲ್ಲಿ ಇರುವಂತಹ 14 ಎಕ್ಕರೆಯ ಕೆರೆಯ ಮುಂದೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ 23 ಅಡಿಯ ಪ್ರತಿಮೆಯನ್ನು ಇದೇ ಶನಿವಾರ ಲೋಕಾರ್ಪಣೆ ಮಾಡಲಿದ್ದಾರೆ. ಇಷ್ಟು ಮಾತ್ರವಲ್ಲದೆ ಆ ಕರೆಗೆ ಕೂಡ ಅಪ್ಪು ಅವರ ಹೆಸರನ್ನೇ ಇಡಲಾಗುವುದು ಎಂಬುದಾಗಿ ಕೂಡ ತಿಳಿದು ಬಂದಿದೆ. ಒಬ್ಬ ನಟನ ಹೆಸರಿನಲ್ಲಿ ಇಷ್ಟೊಂದು ದೊಡ್ಡ ಮಟ್ಟದ ಪ್ರತಿಮೆಯನ್ನು(Statue) ಮಾಡಿರುವುದು ಇಡೀ ಚಿತ್ರ ಜಗತ್ತಿನ ಇತಿಹಾಸದಲ್ಲಿಯೇ ಇಲ್ಲ ಎಂದು ಹೇಳಬಹುದಾಗಿದೆ. ಈ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Leave A Reply

Your email address will not be published.