DBOSS ಅಭಿಮಾನಿಯ ಮುಂದೆ ಕಾಲು ಅಗಲಿಸಿ ನಿಂತ ಡಿ ಬಾಸ್. ಸೋಶಿಯಲ್ ಮೀಡಿಯಾದಲ್ಲಿ ಫುಲ್ ಟ್ರೋಲ್.

Challenging Star Darshan ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಕ್ರಾಂತಿ ಸಿನಿಮಾ ಈಗಾಗಲೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಇದೇ ಜನವರಿ 26ರ ಗಣರಾಜ್ಯೋತ್ಸವದ ದಿನದಂದು ಬಹು ಭಾಷೆಗಳಲ್ಲಿ ದೇಶಾದ್ಯಂತ ಚಿತ್ರಮಂದಿರಗಳಲ್ಲಿ(Theatres) ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಅಭಿಮಾನಿಗಳಲ್ಲಿ ಕೂಡ ಈ ಸಿನಿಮಾದ ಕುರಿತಂತೆ ಸಾಕಷ್ಟು ಕುತೂಹಲ ಹಾಗೂ ನಿರೀಕ್ಷೆಗಳು(Expectations) ಗರಿಗದರಿ ನಿಂತಿವೆ. ಒಟ್ಟಾರೆಯಾಗಿ ಇಡೀ ಕರ್ನಾಟಕ ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಅತ್ಯಂತ ಹೆಚ್ಚು ಪ್ರಚಾರದಲ್ಲಿರುವ ಏಕೈಕ ಸಿನಿಮಾ ಕ್ರಾಂತಿ ಎಂದು ಹೇಳಬಹುದಾಗಿದೆ.

ದರ್ಶನ್ ಅವರ ಸಿನಿಮಾಗಳಿಗೆ ಯಾವುದೇ ಮೀಡಿಯಾ(Media) ಪ್ರಚಾರಗಳಿಲ್ಲ ಎಂಬುದಾಗಿ ಕನ್ನಡದ ಮೀಡಿಯಾಗಳು ಅಘೋಷಿತವಾಗಿಯೇ ನಿಯಮವನ್ನು ಹಾಕಿಕೊಂಡಿವೆ. ಇದನ್ನು ಮೀರಿ ಯುಟ್ಯೂಬ್ ಹಾಗೂ ಇನ್ನಿತರೆ ಮಾಧ್ಯಮಗಳ ಮೂಲಕ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸಂದರ್ಶನವನ್ನು ನೀಡುವ ಮೂಲಕ ಕ್ರಾಂತಿ ಸಿನಿಮಾಗೆ ಒಳ್ಳೆಯ ರೀತಿಯ ಪ್ರಚಾರ ಸಿಗುವಂತೆ ಮಾಡುತ್ತಿದ್ದಾರೆ. ಒಟ್ಟಾರೆಯಾಗಿ ದರ್ಶನ್ ಅವರ ಸಿನಿಮಾ ಬರುತ್ತದೆ ಎಂದು ಚಿಕ್ಕ ಮಗು ಕೂಡ ಹೇಳುವಷ್ಟರ ಮಟ್ಟಿಗೆ ರಾಜ್ಯಾದ್ಯಂತ ಪ್ರಚಾರವನ್ನು ಪಡೆದುಕೊಂಡಿದೆ.

dboss with fan

ಹೀಗಿದ್ದರೂ ಕೂಡ ಹೊಸಪೇಟೆಯಲ್ಲಿ ನಡೆದಿರುವಂತಹ ಘಟನೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿಗಳ ಮನಸ್ಸಿನಲ್ಲಿ ಸಾಕಷ್ಟು ಬೇಸರವನ್ನುಂಟು ಮಾಡಿದೆ ಹಾಗೂ ಸಿನಿಮಾಗೆ ಕೂಡ ಇದು ಬೇರೆ ನಟರ ಅಭಿಮಾನಿಗಳ ಮನಸ್ಸಿನಲ್ಲಿ ನೋಡಬಾರದು ಎನ್ನುವ ಮನೋಭಾವನೆಯನ್ನು ಕೂಡ ಮಾಡಿ ಮಿಶ್ರ ಪ್ರತಿಕ್ರಿಯೆಯನ್ನು ಕೂಡ ಪಡೆದುಕೊಳ್ಳುತ್ತಿದೆ. ಇದರ ನಡುವೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಟೀಕೆ ಮಾಡುವಂತಹ ಇನ್ನೊಂದು ವಿಚಾರ ಸೋಶಿಯಲ್ ಮೀಡಿಯಾದಲ್ಲಿ(Social media) ಜೋರಾಗಿ ಓಡಾಡುತ್ತಿದೆ.

ಹೌದು ಗೆಳೆಯರೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಮ್ಮ ಅಭಿಮಾನಿಗಳನ್ನು ಸೆಲೆಬ್ರಿಟಿಗಳು ಎಂಬುದಾಗಿ ಪ್ರೀತಿಯಿಂದ ಕರೆಯುತ್ತಾರೆ. ಒಬ್ಬ ಅಭಿಮಾನಿಯ ಜೊತೆಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕಾಲನ್ನು ಅಗಲಿಸಿ ಫೋಟೋ(Photo) ತೆಗೆದುಕೊಂಡಿರುವುದು ಈಗ ಸೋಶಿಯಲ್ ಮೀಡಿಯಾದಲ್ಲಿ ಎಲ್ಲಾ ಕಡೆ ಬೇರೆ ನಟರ ಅಭಿಮಾನಿಗಳಿಂದ ಟೀಕೆಗೆ ಒಳಗಾಗಿದೆ. ಆದರೆ ನಿಜವಾಗಿ ನೋಡಿದರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗಿಂತ ಫೋಟೋ ತೆಗೆದುಕೊಂಡಿರುವ ಅಭಿಮಾನಿ, ಎತ್ತರದಲ್ಲಿ ಕುಳ್ಳ ಆಗಿದ್ದಾನೆ. ಹೀಗಾಗಿ ಕಾಲನ್ನು ಅಗಲಿಸಿ, ಆತನ ಎತ್ತರಕ್ಕೆ ಸಮವಾಗಿ ನಿಲ್ಲುವ ಪ್ರಯತ್ನವನ್ನು ಈ ಫೋಟೋದಲ್ಲಿ ದರ್ಶನ್ ಅವರು ಮಾಡಿದ್ದಾರೆ. ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Leave a Comment

error: Content is protected !!