ನಟಿ ಸಾಯಿ ಪಲ್ಲವಿ ಮನೆ ಹಾಗೂ ಲೈಫ್ ಸ್ಟೈಲ್ ಹೇಗಿದೆ ನೋಡಿ

ನಟಿ ಸಾಯಿ ಪಲ್ಲವಿ ಬಗ್ಗೆ ಸಿನಿಪ್ರಿಯರಿಗೆ ಹೊಸದಾಗಿ ಪರಿಚಯ ಮಾಡಿಕೊಡಬೇಕಾದ ಅಗತ್ಯವೇ ಇಲ್ಲ. ಇಡೀ ದಕ್ಷಿಣ ಭಾರತದಲ್ಲಿ ಅವರ ಖ್ಯಾತಿ ಅಷ್ಟರಮಟ್ಟಿಗೆ ಹಬ್ಬಿದೆ. ಈವರೆಗೂ ಅವರು ಮಾಡಿರುವುದು ಬೆರಳೆಣಿಕೆಯಷ್ಟು ಸಿನಿಮಾ ಮಾತ್ರ. ಹಾಗಿದ್ದರೂ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿ ಆಗಿದ್ದಾರೆ. ಹಲವು ಪ್ರಶಸ್ತಿಗಳು ಅವರ ಮುಡಿಗೆ ಏರಿವೆ. ಚಿತ್ರರಂಗದಲ್ಲಿ ಯಾರನ್ನೂ ಕಾಪಿ ಮಾಡದೇ, ತಮ್ಮದೇ ಆದ ಹೊಸ ಶೈಲಿ ಮೂಲಕ ಅಭಿನಯ ಸಾಮರ್ಥ್ಯವನ್ನು ಅವರು ಪ್ರದರ್ಶಿಸಿದ್ದಾರೆ.

ಸಾಯಿ ಪಲ್ಲವಿ ಎಂದು ಸಾಮಾನ್ಯವಾಗಿ ಕರೆಯಲ್ಪಡುವ ಸಾಯಿ ಪಲ್ಲವಿ ಸೆಂತಮರಾಯಿಯವರು ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಯ ಚಲನಚಿತ್ರಗಳಲ್ಲಿ ನಟಿಸುತ್ತಿರುವ ಭಾರತೀಯ ನಟಿ. ಪ್ರೇಮಂ ಮತ್ತು ಫಿದಾ ಚಲನಚಿತ್ರದಲ್ಲಿ ಇವರ ಅಭಿನಯಕ್ಕಾಗಿ ಎರಡು ಫಿಲ್ಮ್ಫೇರ್ ಪ್ರಶಸ್ತಿಗಳು ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಇವರು ಪಡೆದಿದ್ದಾರೆ. ಸಾಯಿ ಪಲ್ಲವಿ ಅವರು ೨೦೧೫ ರ ಮಲಯಾಳಂ ಚಿತ್ರ ಪ್ರೇಮಂನಲ್ಲಿ ಮಲಾರ್ ಪಾತ್ರಕ್ಕಾಗಿ ಸಾರ್ವಜನಿಕರ ಗಮನ ಸೆಳೆದರು. ನಂತರ ಅವರು ಕಾಳಿ ಚಿತ್ರದಲ್ಲಿ ದುಲ್ಕರ್ ಸಲ್ಮಾನ್ ಅವರೊಂದಿಗೆ ನಟಿಸಿದರು ಹಾಗೂ ವರುಣ್ ತೇಜ್ ಅವರೊಂದಿಗೆ ನಟಿಸಿರುವ ೨೦೧೭ ರ ರೊಮ್ಯಾಂಟಿಕ್ ಚಿತ್ರ ಫಿದಾ ಚಿತ್ರದಲ್ಲಿ ಭಾನುಮತಿ ಪಾತ್ರದಲ್ಲಿ ನಟಿಸುವ ಮೂಲಕ ತೆಲುಗು ಚಿತ್ರರಂಗಕ್ಕೆ ಕೂಡಾ ಪಾದಾರ್ಪಣೆ ಮಾಡಿದರು. ಫಿದಾವನ್ನು ದೂರದರ್ಶನದಲ್ಲಿ ತೋರಿಸಿದಾಗ , ಐದನೇ ಬಾರಿಗೆ ಸಹ ಇದು ಗರಿಷ್ಠ ಟಿಆರ್ಪಿ ರೇಟಿಂಗ್ ಪಡೆಯಿತು. ೨೦೧೮ ರಲ್ಲಿ ವಿಜಯ್ ನಿರ್ದೇಶನದ ದಿಯಾ ಹೆಸರಿನ ಚಿತ್ರದ ಮೂಲಕ ಅವರು ತಮಿಳು ಚಿತ್ರರಂಗಕ್ಕೆ ಪ್ರವೇಶ ಮಾಡಿದರು.

ನಮಗೆಲ್ಲ ತಿಳಿದಿರುವಂತೆ ಸಾಯಿ ಪಲ್ಲವಿ ಒಬ್ಬ ನಟಿ ಎಂದಷ್ಟೇ ಆದರೆ ಆಕೆ ವೃತ್ತಿ ಜೀವನದಲ್ಲಿ ವೈದ್ಯರಾಗಿದ್ದಾರೆ. ಅವರು ಜಾರ್ಜಿಯಾದ ಟಿಬಿಲಿಸ್ ಸ್ಟೇಟ್ ಮೆಡಿಕಲ್ ಯುನಿವರ್ಸಿಟಿಯಿಂದ ೨೦೧೬ ರಲ್ಲಿ ವೈದ್ಯಕೀಯ ಪದವಿಯನ್ನು ಪಡೆದರು. ಅಷ್ಟೇ ಅಲ್ಲದೆ ಈಗೆ ಒಬ್ಬ ಉತ್ತಮ ನೃತ್ಯಗಾರ್ತಿ ಕೂಡಾ ಹೌದು. ತಮ್ಮ ನೃತ್ಯದ ಕುರಿತಾಗಿ ಸಾಯಿ ಪಲ್ಲವಿ ಸಂದರ್ಶನವೊಂದರಲ್ಲಿ ಹೀಗೆ ಹೇಳಿದ್ದರು, ತಾನು ತರಬೇತಿ ಪಡೆದ ನರ್ತಕಿಯಾಗಿಲ್ಲದಿದ್ದರು ಆಕೆಯು ಯಾವಾಗಲೂ ತನ್ನ ತಾಯಿಯಂತೆ ನೃತ್ಯ ಮಾಡಬೇಕೆಂದು ಬಯಸುತ್ತಿದ್ದವರು. ಅವರು ಶಾಲೆಯಲ್ಲಿ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಮತ್ತು ನರ್ತಕಿಯಾಗಿ ಜನಪ್ರಿಯತೆ ಗಳಿಸಿದರು. ಆಕೆಯ ತಾಯಿಯು ಬೆಂಬಲಿಸಿದ ಕಾರಣದಿಂದಾಗಿ ಅವರು ೨೦೦೬ರಲ್ಲಿ ವಿಜಯ್ ಟಿವಿಯಲ್ಲಿ ಬರುತ್ತಿದ್ದ ನೃತ್ಯ ರಿಯಲಿಟಿ ಶೋ ಆದ ಯಾರ್ ಅದುತ ಪ್ರಭುದೇವ ದಲ್ಲಿ ಭಾಗವಹಿಸಿದರು ಮತ್ತು ೨೦೦೯ರಲ್ಲಿ ಇಟಿವಿ ತೆಲುಗು ಭಾಷೆಯಲ್ಲಿ ದೀ ಅಲ್ಟಿಮೇಟ್ ಡಾನ್ಸ್ ಷೋ ನಲ್ಲಿ ಕಾಣಿಸಿಕೊಂಡರು ಎಂದು ಹೇಳಿದ್ದಾರೆ.

ಭಾರಿ ಬೇಡಿಕೆ ಹೊಂದಿರುವ ನಟಿಯರಲ್ಲಿ ಸಾಯಿ ಪಲ್ಲವಿ ಕೂಡ ಒಬ್ಬರು. ಇದೀಗ ಸಾಯಿ ಪಲ್ಲವಿ ಸಂಭಾವನೆ ವಿಚಾರ ಸದ್ದು ಮಾಡುತ್ತಿದೆ. ಪ್ರೇಮಂ ಚಿತ್ರದ ಸುಂದರಿ ಮುಂದಿನ ಸಿನಿಮಾಗೆ ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ತೆಲುಗು ಸ್ಟಾರ್ ನಾನಿ ಜೊತೆ ಅಭಿನಯಿಸಲು ಸಾಯಿ ಪಲ್ಲವಿ ಹೆಚ್ಚಿನ ಸಂಭಾವನೆ ಬೇಡಿಕೆ ಇಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ನಟನೆಗೆ 2 ಕೋಟಿ ಸಂಭಾವನೆ ಬೇಡಿಕೆ ಇಟ್ಟಿದ್ದಾರಂತೆ. ಬೇಡಿಕೆ ಹೆಚ್ಚಾಗುತ್ತಿದ್ದಂತೆ ನಟಿಮಣಿಯರು ಸಂಭಾವನೆ ಹೆಚ್ಚಿಸಿಕೊಳ್ಳುವುದು ಸಾಮಾನ್ಯ. ಈ ವಿಚಾರದಲ್ಲಿ ಸಾಯಿ ಪಲ್ಲವಿ ಏನು ಹೊರತಾಗಿಲ್ಲ. ಅಭಿಮಾನಿ ಬಳಗ, ಆಕೆಯ ಅಭಿನಯ, ನೃತ್ಯ ಎಲ್ಲವನ್ನು ಆಧರಿಸಿ ನಿರ್ಮಾಪಕರು 2 ಕೋಟಿ ಸಂಭಾವನೆ ನೀಡಲು ಮುಂದಾಗಿದ್ದಾರಂತೆ.

Leave A Reply

Your email address will not be published.