ರಾಜ್ಯ ಸರ್ಕಾರ ರೈತರ ಅಲ್ಪಾವದಿ ಸಾಲ ಮನ್ನಾ ಮಾಡಿದೆಯಾ?
ಅಲ್ಪಾವಧಿ ಬೆಳೆ ಸಾಲ ಪಡೆದ ರೈತರಿಗೆ ರಾಜ್ಯ ಸರಕಾರದಿಂದ ಸಿಹಿ ಸುದ್ದಿ, 1 ಲಕ್ಷ ರೂಪಾಯಿ ವರೆಗಿನ ಸಾಲ ಮನ್ನಾ. ರಾಜ್ಯ ರೈತ ಸಹಕಾರ ಸಂಘ ಮತ್ತು ಸಹಕಾರಿ ಬ್ಯಾಂಕ್‌ಗಳಲ್ಲಿ ಅಲ್ಪಾವಧಿ ಬೆಳೆ ಸಾಲ ಪಡೆದು, 2018ರ ಜುಲೈ 7ರೊಳಗೆ ಹೊರ ಬಾಕಿಯಲ್ಲಿ ಗರಿಷ್ಠ 1 ಲಕ್ಷ ರೂ.ವರೆಗಿನ ಅಲ್ಪಾವಧಿ ಸಾಲದ ಮೊತ್ತವನ್ನು ಮನ್ನಾ ಮಾಡಲು ರಾಜ್ಯ ಸರಕಾರ ತೀರ್ಮಾನಿಸಿದೆ. ಈ ಮೂಲಕ ಅಲ್ಪಾವಧಿ ಬೆಳೆ ಸಾಲ ಪಡೆದ ರಾಜ್ಯದ ರೈತರಿಗೆ ಬಿಎಸ್ ಯಡಿಯೂರಪ್ಪ ಸರಕಾರ ಸಿಹಿ ಸುದ್ದಿ ನೀಡಿದೆ. ಮಾರ್ಚ್ ಹನ್ನೆರಡಕ್ಕೆ ಅಷ್ಟೇ ಬಂದ ಹೊಸ ಅಪ್ಡೇಟ್ ಇದಾಗಿರುವುದರಿಂದ ಇದರ ಕುರಿತಾಗಿ ಯಾವೆಲ್ಲ ರೈತರ ಸಾಲ ಮನ್ನಾ ಆಗುವುದು ಹಾಗೇ ಎಷ್ಟು ಸಾಲ ಮನ್ನ ಮಾಡಲಾಗುವುದು ಎಂದು ಹೆಚ್ಚಿನ ಮಾಹಿತಿಯನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ರಾಜ್ಯ ರೈತ ಸಹಕಾರ ಸಂಘ ಮತ್ತು ಸಹಕಾರಿ ಬ್ಯಾಂಕ್‌ಗಳಲ್ಲಿ ಅಲ್ಪಾವಧಿ ಬೆಳೆ ಸಾಲ ಪಡೆದು 2018ರ ಜುಲೈ 7ರ ಒಳಗೆ ಹೊರ ಬಾಕಿಯಲ್ಲಿ ಗರಿಷ್ಠ 1 ಲಕ್ಷ ರೂಪಾಯಿ ವರೆಗಿನ ಅಲ್ಪಾವಧಿ ಸಾಲದ ಮೊತ್ತವನ್ನು ಮನ್ನಾ ಮಾಡಲು ಸರಕಾರ ತೀರ್ಮಾನಿಸಿದೆ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದ್ದಾರೆ. ಸಾಲ ಮನ್ನಾ ಕುರಿತು ಶುಕ್ರವಾರ ಆದೇಶಿಸಿರುವ ಅವರು 295.15 ಕೋಟಿ ರೂಪಾಯಿ ಮೊತ್ತವನ್ನು ನೆಫ್ಟ್ ಮೂಲಕ ಅರ್ಹ 57,229 ರೈತರ ಉಳಿತಾಯ ಖಾತೆಗಳಿಗೆ ವರ್ಗಾವಣೆ ಮಾಡಲು ಸಂಬಂಧಪಟ್ಟ ಇಲಾಖೆಗೆ ಸೂಚಿಸಿದ್ದಾರೆ.
ಅಲ್ಪಾವಧಿ ಬೆಳೆ ಸಾಲ ಮನ್ನಾ ಮಾಡಲು ಪ್ರಸಕ್ತ ಆಯವ್ಯಯದಲ್ಲಿ 260.41 ಕೋಟಿ ರೂ. ಸರಕಾರ ಮೀಸಲಿಟ್ಟಿತ್ತು. ಜತೆಗೆ ಅಪೆಕ್ಸ್ ಬ್ಯಾಂಕಿನಲ್ಲಿ ಲಭ್ಯವಿರುವ 34.73 ಕೋಟಿ ರೂ.ಗಳನ್ನೂ ಉಪಯೋಗಿಸಿಕೊಳ್ಳಲು ಇಲಾಖೆಗೆ ಅನುಮತಿ ನೀಡಿದೆ. ಮಾರ್ಚ್ ಅಂತ್ಯದೊಳಗೆ ಸಾಲ ಮನ್ನಾ ಪ್ರಕ್ರಿಯೆ ಮುಕ್ತಾಯಗೊಳಿಸಲು ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಚಿಸಲಾಗಿದೆ. ಮಾರ್ಚ್ ಅಂತ್ಯದ ವೇಳೆಗೆ ಬೆಳೆ ಸಾಲ ಮನ್ನಾ ಯೋಜನೆಯನ್ನು ಮುಕ್ತಾಯ ಮಾಡಬೇಕು ಎನ್ನುವ ಸೂಚನೆಯನ್ನು ಬ್ಯಾಂಕ್ ಅಧಿಕಾರಿಗಳಿಗೆ ನೀಡಲಾಗಿದೆ. ಇದು ನಮ್ಮ ರಾಜ್ಯದ ಮುಖ್ಯಮಂತ್ರಿ ಆದ ಬಿ ಎಸ್ ಯಡಿಯೂರಪ್ಪ ಅವರು ರೈತರಿಗೆ ನೀಡಿದ ಸಿಹಿ ಸುದ್ದಿ ಎಂದೇ ಹೇಳಬಹುದು. ಇನ್ನು ಯಾವ ಬ್ಯಾಂಕ್ ಗಳಲ್ಲಿ ಹಾಗೂ ಯಾವ ವರ್ಷಗಳಲ್ಲಿ ಪಡೆದ ಸಾಲ ಮನ್ನಾ ಆಗುವುದು ಎನ್ನುವುದರ ಬಗ್ಗೆ ನೋಡುವುದಾದರೆ , 2018 ಜುಲೈ 7 ರ ಒಳಗೆ ಯಾರೆಲ್ಲ ರೈತರು ಈ ಬ್ಯಾಂಕುಗಳಲ್ಲಿ ಅಲ್ಪಾವಧಿಯ ಸಾಲ ಪಡೆದಿರುತ್ತಾರೆ ಅವರ ಸಾಲವನ್ನು ಮನ್ನಾ ಮಾಡಲಾಗುವುದು.