Kabzaa 2: ಕಬ್ಜಾ2 ನ ಚಂದ್ರು ಎಷ್ಟು ದೇಶದಲ್ಲಿ ರಿಲೀಸ್ ಮಾಡ್ತಾರಂತೆ ಗೊತ್ತಾ?

Kabzaa 2 ಆರ್ ಚಂದ್ರು(R Chandru) ಅವರ ಕನಸಾಗಿರುವಂತಹ ಕಬ್ಜಾ ಸಿನಿಮಾ(Kabzaa Film) ಕೆಲವು ದಿನಗಳ ಹಿಂದಷ್ಟೇ ಬಿಡುಗಡೆಯಾಗಿ ಯಾವ ರೀತಿಯಲ್ಲಿ ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡಿತ್ತು ಎನ್ನುವುದು ನಿಮ್ಮೆಲ್ಲರಿಗೂ ತಿಳಿದಿರುವಂತಹ ವಿಚಾರವಾಗಿದೆ. ಬಹು ಕೋಟಿ ವೆಚ್ಚದಲ್ಲಿ ಮೂಡಿ ಬಂದಂತಹ ಈ ಸಿನಿಮಾ ಪ್ರೇಕ್ಷಕರಿಂದ ಮಾತ್ರ ಮಿಶ್ರ ಪ್ರತಿಕ್ರಿಯೆಯನ್ನು ಪಡೆದುಕೊಂಡಿತ್ತು. ಕಲೆಕ್ಷನ್ ವಿಚಾರದಲ್ಲಿ ಮಾತ್ರ ಸಾಕಷ್ಟು ದೊಡ್ಡ ಮಟ್ಟದ ಸದ್ದನ್ನೇ ಮಾಡಿದ್ದ ಈ ಸಿನಿಮಾ ಕೆಲವೊಂದು ಟೀಕೆಗಳಿಗೂ ಕೂಡ ಕಾರಣವಾಗಿತ್ತು.

ಟೀಕೆಗೆ ಕಾರಣವಾಗುವುದಕ್ಕೆ ಒಂದು ಪ್ರಮುಖ ಕಾರಣ ಕೂಡ ಇದೆ ಯಾಕೆಂದರೆ ಚಿತ್ರದಲ್ಲಿ ಕಿಚ್ಚ ಸುದೀಪ್(Kiccha Sudeep) ಉಪೇಂದ್ರ(Upendra) ಶಿವಣ್ಣ(Shivanna) ಅವರಂತಹ ಕನ್ನಡ ಚಿತ್ರರಂಗದ ಮೂರು ದಿಗ್ಗಜರು ನಟಿಸಿದ್ದರು ಕೂಡ ಅದನ್ನು ಸಮರ್ಪಕವಾಗಿ ತೆರೆಯ ಮೇಲೆ ತರಲು ಕೊಂಚಮಟ್ಟಿಗೆ ಆರ್ ಚಂದ್ರು ವಿಫಲರಾದರೇ ಎಂದು ಹೇಳಬಹುದಾಗಿದೆ.

ಇನ್ನೇನು ಇತ್ತೀಚಿಗಷ್ಟೇ ಅಮೆಜಾನ್ ಪ್ರೈಮ್(Amazon Prime) ನಲ್ಲಿ ಪ್ರಸಾರ ಕಾಣಲು ಪ್ರಾರಂಭವಾದ ಕಬ್ಜಾ ಚಿತ್ರ ಓ ಟಿ ಟಿ ನಲ್ಲಿ ಕೂಡ ಪ್ರೇಕ್ಷಕರ ಮನೋರಂಜನೆಗೆ ಕಾರಣವಾಗುತ್ತಿರುವ ಬೆನ್ನಲ್ಲೇ ಕಬ್ಜಾ ಸಿನಿಮಾದ ಎರಡನೇ ಪಾರ್ಟ್ ಅನ್ನು ಕೂಡ ಆರ್ ಚಂದ್ರು ರವರು ಅಧಿಕೃತವಾಗಿ ಘೋಷಣೆ ಮಾಡುವ ಮೂಲಕ ಎರಡನೇ ಭಾಗ ಅದ್ದೂರಿಯಾಗಿ ಮೂಡಿಬರಲಿದೆ ಎನ್ನುವಂತಹ ಚಿಕ್ಕ ಸುಳಿವನ್ನು ನೀಡಿದ್ದಾರೆ. ಅದರಲ್ಲೂ ಎರಡನೇ ಭಾಗ ಎಷ್ಟು ದೇಶಗಳಲ್ಲಿ ಬಿಡುಗಡೆ ಮಾಡುತ್ತೀನಿ ಎಂಬುದಾಗಿ ಅವರೇ ಸ್ವತಃ ಹೇಳಿದ್ದಾರೆ.

ಹೌದು ಮಿತ್ರರೇ ಕಬ್ಜಾ ಸಿನಿಮಾದ ಎರಡನೇ ಭಾಗವನ್ನು ಚಂದ್ರು ರವರು ಭರ್ಜರಿ 30 ದೇಶಗಳಿಗೂ ಅಧಿಕ ದೇಶಗಳಲ್ಲಿ ಬಿಡುಗಡೆ ಮಾಡುತ್ತೇನೆ ಎಂಬುದಾಗಿ ಅಧಿಕೃತವಾಗಿಯೇ ಸವಾಲ್ ಎಸೆದಿದ್ದಾರೆ. ಚಂದ್ರು ಅವರ ಈ ಕಾನ್ಫಿಡೆನ್ಸ್ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Leave A Reply

Your email address will not be published.