ಬಿಗ್ ಬಾಸ್ ಸೀಸನ್ 9 ವಿಜೇತ ರೂಪೇಶ್ ಶೆಟ್ಟಿಗೆ ಸಿಕ್ಕ ಒಟ್ಟಾರೆ ಬಹುಮಾನ ಕೇಳಿದ್ರೇ ಬೆರಗಾಗ್ತೀರ.

Bigg Boss Season 9 Winner Rupesh Shetty’s Overall Prize ಕನ್ನಡ ಕಿರುತೆರೆಯ ಅತ್ಯಂತ ದೊಡ್ಡ ಹಾಗು ಶ್ರೀಮಂತ ರಿಯಾಲಿಟಿ ಶೋ ಕಾರ್ಯಕ್ರಮ ಆಗಿರುವ ಬಿಗ್ ಬಾಸ್ ನ ಈ ಬಾರಿಯ 9ನೇ ಅವತರಿಣಿಕೆ ಯಶಸ್ವಿಯಾಗಿ ಮುಗಿದಿದೆ. ಯಾರು ಗೆಲ್ಲುತ್ತಾರೆ ಎನ್ನುವ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದೆ. ಮಂಗಳೂರು ಮೂಲದ ಆರ್ ಜೆ ಹಾಗೂ ನಟ ಆಗಿರುವ ರೂಪೇಶ್ ಶೆಟ್ಟಿ ಅವರು ಈ ಬಾರಿಯ ಬಿಗ್ ಬಾಸ್ ಅನ್ನು ಗೆದ್ದು ಬೀಗಿದ್ದಾರೆ. ಓ ಟಿ ಟಿ (OTT) ಹಾಗೂ ರಿಯಲ್ (Real Bigg Boss) ಬಿಗ್ ಬಾಸ್ ಎರಡನ್ನು ಕೂಡ ರೂಪೇಶ್ ಶೆಟ್ಟಿ ಅವರೇ ಗೆದ್ದಿದ್ದಾರೆ.

Bigg Boss Season 9 Winner

ಮೊದಲನೇ ಸ್ಥಾನವನ್ನು ರೂಪ ಶೆಟ್ಟಿ (Rupesh Shetty) ಅವರು ಪಡೆದುಕೊಂಡರೆ ಎರಡನೇ ಸ್ಥಾನವನ್ನು ರಾಕೇಶ್ ಅಡಿಗ (Rakesh Adiga) ಅವರು ಪಡೆದುಕೊಂಡಿದ್ದಾರೆ. ನವೀನರು ಹಾಗೂ ಪ್ರವೀಣರ ನಡುವೆ ನಡೆದಿರುವಂತಹ ಈ ಬಾರಿಯ ಬಿಗ್ ಬಾಸ್ ದಿನದಿಂದ ದಿನಕ್ಕೆ ಸಾಕಷ್ಟು ರೋಚಕತೆಗಳನ್ನು ಹೊಂದುವಲ್ಲಿ ಯಶಸ್ವಿಯಾಗಿತ್ತು. ಕೇವಲ ಇವರಿಬ್ಬರೇ ಮಾತ್ರವಲ್ಲದೆ ಗೆಲ್ಲುವ ವಿಶ್ವಾಸವನ್ನು ಇನ್ನೂ ಹಲವಾರು ಸ್ಪರ್ಧಿಗಳು ತೋರ್ಪಡಿಸಿದ್ದರು. ಆದರೆ ಕೊನೆಗೆ ಜನರ ಮೆಚ್ಚುಗೆಯನ್ನು ಅತೀ ಹೆಚ್ಚಾಗಿ ಪಡೆದಂತಹ ಸ್ಪರ್ಧಿಗಳಾಗಿ ರೂಪೇಶ್ ಶೆಟ್ಟಿ ಹಾಗೂ ರಾಕೇಶ್ ಅಡಿಗ ಕಾಣಿಸಿಕೊಳ್ಳುತ್ತಾರೆ.

Bigg Boss Season 9 Winner Rupesh Shetty's

ಇನ್ನು ರೂಪೇಶ್ ಶೆಟ್ಟಿ ಅವರು ಪಡೆದುಕೊಂಡಿರುವ ಒಟ್ಟಾರೆ ಬಹುಮಾನ ಅಂದರೆ ನಗದು ಬಹುಮಾನ ಎಷ್ಟು ಎಂಬುದಾಗಿ ನೋಡುವುದಾದರೆ ಬಿಗ್ ಬಾಸ್ ವಿಜೇತರಾಗಿರುವ ಹಿನ್ನೆಲೆಯಲ್ಲಿ ಕಲರ್ಸ್ ಕನ್ನಡ ವಾಹಿನಿಯಿಂದ ರೂಪೇಶ್ ಶೆಟ್ಟಿ ಅವರಿಗೆ 50 ಲಕ್ಷ ರೂಪಾಯಿ ಹಾಗೂ ಸ್ಪಾನ್ಸರ್ ಗಳಿಂದ 10 ಲಕ್ಷ ರೂಪಾಯಿ ಒಟ್ಟಾರೆಯಾಗಿ 60ಲಕ್ಷ ರೂಪಾಯಿಗಳು ನಗದು ಬಹುಮಾನವಾಗಿ ಸಿಕ್ಕಿದೆ. ಇದರಲ್ಲಿ 30 ಪ್ರತಿಶತ ಟ್ಯಾಕ್ಸ್ ಅನ್ನು ಕಡಿತಗೊಳಿಸಿದರೆ ರೂಪೇಶ್ ಶೆಟ್ಟಿ ಅವರ ಕೈಗೆ ಭರ್ಜರಿ 42 ಲಕ್ಷ ರೂಪಾಯಿಗಳು ಸಿಗುತ್ತವೆ. ಅಂದರೆ ಟ್ಯಾಕ್ಸ್ ರೂಪದಲ್ಲಿ 18 ಲಕ್ಷ ರೂಪಾಯಿ ಕಡಿತಗೊಳ್ಳುತ್ತದೆ.

ಇದನೊಮ್ಮೆ ಓದಿ..ಕೊನೆಗೂ ಲೀಕ್ ಆಯ್ತು ನೋಡಿ ಈ ಬಾರಿಯ ಬಿಗ್ ಬಾಸ್ ವಿನ್ನರ್ ಹಾಗೂ ರನ್ನರ್ ಯಾರೆಂದು.

ನಗದು ಬಹುಮಾನ ಅದೇನೇ ಇರಲಿ ಬಿಗ್ ಬಾಸ್ ವಿಜೇತರಾದ ಮೇಲೆ ರೂಪೇಶ್ ಶೆಟ್ಟಿ ಅವರಿಗೆ ಖಂಡಿತವಾಗಿ ಚಿತ್ರರಂಗ ಹಾಗೂ ಬೇರೆ ಬೇರೆ ಕಡೆಗಳಿಂದ ಇನ್ನಷ್ಟು ಮತ್ತಷ್ಟು ಅವಕಾಶಗಳು ಹುಡುಕಿಕೊಂಡು ಬರುವುದರಲ್ಲಿ ಯಾವುದೇ ಅನುಮಾನವಿಲ್ಲ. ಮುಂದಿನ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಭರವಸೆಯ ನಾಯಕನಟನಾಗಿ ಕಾಣಿಸಿಕೊಂಡರು ಕೂಡ ಆಶ್ಚರ್ಯ ಪಡಬೇಕಾಗಿಲ್ಲ. ನಿಮ್ಮ ಪ್ರಕಾರ ಈ ಬಾರಿಯ ಬಿಗ್ ಬಾಸ್ ಅನ್ನು ಯಾರು ಗೆಲ್ಲ ಬೇಕಾಗಿತ್ತು ಎಂಬುದನ್ನು ತಪ್ಪದೇ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Leave a Comment

error: Content is protected !!