ಕೊನೆಗೂ ಲೀಕ್ ಆಯ್ತು ನೋಡಿ ಈ ಬಾರಿಯ ಬಿಗ್ ಬಾಸ್ ವಿನ್ನರ್ ಹಾಗೂ ರನ್ನರ್ ಯಾರೆಂದು.

biggboss kannada season 9 winnerಈ ಬಾರಿ ಬಿಗ್ ಬಾಸ್ ಓಟಿಟಿ ಕಾರ್ಯಕ್ರಮ ಪ್ರಸಾರ ಆದ ನಂತರ ಅದರ ಯಶಸ್ಸಿನ ಮೇರೆಗೆ ಬಿಗ್ ಬಾಸ್ ಕನ್ನಡ ಸೀಸನ್ 9 ಅನ್ನು ಪ್ರಾರಂಭಿಸಲಾಗಿತ್ತು. ಈ ಬಿಗ್ ಬಾಸ್ ಸೀಸನ್ ಅನ್ನು ನವೀನರು ಹಾಗೂ ಪ್ರವೀಣರ ನಡುವಿನ ಸ್ಪರ್ಧೆ ಎಂಬುದಾಗಿ ಬಿಂಬಿಸಲಾಗಿತ್ತು. ಎಂದಿನಂತೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ನಿರೂಪಕನಾಗಿ ತಮ್ಮ ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಿಕೊಂಡು ಬಂದಿದ್ದಾರೆ. ವಾರಾಂತ್ಯದಲ್ಲಿ ತಮ್ಮ ವಿಭಿನ್ನ ಶೈಲಿಯ ಉಡುಪಿನ ಜೊತೆಗೆ ಎಲ್ಲರ ಮನವನ್ನು ಗೆದ್ದಿದ್ದಾರೆ.

ಇನ್ನು ಆರಂಭದಿಂದ ಕೊನೆಯವರೆಗೂ ಕೂಡ ಒಂದೊಂದು ಹಂತದಲ್ಲಿ ಪ್ರೇಕ್ಷಕರಿಗೆ ಒಬ್ಬೊಬ್ಬ ಸ್ಪರ್ಧಿ ಇಷ್ಟ ಆಗುತ್ತಾ ಬಂದಿದ್ದಾರೆ. ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಬಿಗ್ ಬಾಸ್ 100 ದಿನವನ್ನು ಮುಗಿಸಿ ಫಿನಾಲೆ ಹಂತವನ್ನು ತಲುಪಿದ್ದು ಟಾಪ್ 5 ಕಂಟೆಸ್ಟೆಂಟ್ ಗಳಾಗಿ ದಿವ್ಯ ದೀಪಿಕಾ ದಾಸ್ ರಾಕೇಶ್ ಅಡಿಗ ರೂಪೇಶ್ ರಾಜಣ್ಣ ಹಾಗೂ ರೂಪೇಶ್ ಶೆಟ್ಟಿ ಆಯ್ಕೆ ಆಗಿದ್ದಾರೆ. ಕಾರ್ಯಕ್ರಮದ ಉದ್ದಕ್ಕೂ ಕೂಡ ಇವರೆಲ್ಲರೂ ಜನರ ನೆಚ್ಚಿನ ಸ್ಪರ್ಧಿಗಳಾಗಿ ಕಾಣಿಸಿಕೊಂಡು ಇಲ್ಲಿಯವರೆಗೆ ಬಂದಿದ್ದಾರೆ.

biggboss kannada season 9 winner
biggboss kannada season 9 winner

ಈಗ ಕೊನೆಗೂ ಈ ಬಾರಿಯ ಬಿಗ್ ಬಾಸ್ ವಿನ್ನರ್ ಯಾರು ಎಂಬುದು ಕೆಲವೊಂದು ಆಪ್ತ ಮೂಲಗಳಿಂದ ಹೊರಬಂದಿದ್ದು ಕೆಲವರ ನಿರೀಕ್ಷೆ ಹುಸಿಯಾಗಿದ್ದು ಇನ್ನೂ ಕೆಲವರ ನಿರೀಕ್ಷೆ ಸತ್ಯವಾಗಿದೆ ಎಂದು ಹೇಳಬಹುದಾಗಿದೆ. ಹಾಗಿದ್ದರೆ ಈ ಬಾರಿಯ ಅತ್ಯಂತ ದೊಡ್ಡ ಹಾಗೂ ಶ್ರೀಮಂತ ರಿಯಾಲಿಟಿ ಶೋ ಬಿಗ್ ಬಾಸ್ ನ ವಿನ್ನರ್ ಹಾಗೂ ಎರಡನೇ ಸ್ಥಾನವನ್ನು ಪಡೆದುಕೊಂಡಿರುವ ಸ್ಪರ್ಧಿ ಯಾರು ಎಂಬುದನ್ನು ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ.

ಮೂಲಗಳ ಪ್ರಕಾರ ಮೊದಲನೇ ಸ್ಥಾನವನ್ನು ರೂಪೇಶ್ ಶೆಟ್ಟಿ ಪಡೆದುಕೊಂಡಿದ್ದಾರೆ ಹಾಗೂ ಎರಡನೇ ಸ್ಥಾನವನ್ನು ಕನ್ನಡ ಪರ ಹೋರಾಟಗಾರ ಆಗಿರುವ ರೂಪೇಶ್ ರಾಜಣ್ಣ ಪಡೆದುಕೊಂಡಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಇವರಿಬ್ಬರೂ ಮೊದಲ ಹಾಗೂ ಎರಡನೇ ಸ್ಥಾನ ಪಡೆದಿರುವ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Leave a Comment

error: Content is protected !!