2016 ರಿಂದ ಇಲ್ಲಿಯವರೆಗೆ ಅಪ್ಪು ಆ ಶಾಲೆಗೆ ಎಷ್ಟು ಲಕ್ಷ ಫೀಸ್ ಕಟ್ಟಿದ್ದಾರೆ ಗೊತ್ತಾ, ನಿಜಕ್ಕೂ ಗ್ರೇಟ್

Do you know how many lakhs of fees Appu has paid for that school since 2016 till now, really great ಅಣ್ಣಾವ್ರನ್ನು ಅವರ ಅಭಿಮಾನಿಗಳು ದೇವತಾ ಮನುಷ್ಯ ಎಂಬುದಾಗಿ ಕರೆಯುತ್ತಿದ್ದರು. ಅವರ ನಂತರ ಆ ಸ್ಥಾನವನ್ನು ಹಾಗೂ ಆ ಹೆಸರಿಗೆ ತಕ್ಕದಾದ ಕೆಲಸವನ್ನು ಮಾಡಿರುವ ಮತ್ತೊಬ್ಬ ವ್ಯಕ್ತಿ ಎಂದರೆ ಅವರ ಕಿರಿಯ ಮಗ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಎನ್ನುವುದನ್ನು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ. ಯಾರಿಗೂ ಗೊತ್ತಿಲ್ಲದ ಅಪ್ಪು ಅವರ ಜನಪದ ರಹಸ್ಯವನ್ನು ಅವರ ಆಪ್ತ ವರ್ಗದ ಅಭಿಮಾನಿ ಒಬ್ಬರು ಈಗ ತಿಳಿಸಿದ್ದಾರೆ. ಹಾಗಿದ್ದರೆ ಅಪ್ಪು ಅವರು ಮಾಡಿರುವ ಆ ರಹಸ್ಯ ಕಾರ್ಯ ಏನು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಅಪ್ಪು ಅವರ ಆಪ್ತ ವರ್ಗದ ಅಭಿಮಾನಿ ಒಬ್ಬರ ಮನೆಯ ಬಳಿ ಇದ್ದಂತಹ Govt School ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದ ಮಕ್ಕಳಿಗೆ ಆ ಶಾಲೆಯ ಫೀಸ್ ಕಟ್ಟಲು ಕೂಡ ಹಣವಿರಲಿಲ್ಲ ಅಂತಹ ಬಡವರ್ಗದ ಕುಟುಂಬದಿಂದ ಬಂದವರು. ಯಾರಿಗೂ ಕೂಡ ಅಲ್ಲಿನ ಸಮವಸ್ತ್ರದಿಂದ ಹಿಡಿದು ಸೇರಿದಂತೆ ಇನ್ನಿತರ ಮೂಲಭೂತ ಸೌಕರ್ಯಗಳನ್ನು ಪಡೆದುಕೊಳ್ಳುವಷ್ಟರ ಮಟ್ಟಿಗೆ ಆರ್ಥಿಕ ಸೌಲಭ್ಯ ಇರಲಿಲ್ಲ.

ಈ ವಿಚಾರ ಅಪ್ಪುಗೆ ಮುಟ್ಟಿದ ನಂತರ ಯಾರಿಗೂ ತಿಳಿಯದಂತೆ ಕಾರಿನಲ್ಲಿ ಹೆಲ್ಮೆಟ್ ಹಾಕಿಕೊಂಡು ಬಂದು ಶಾಲೆಯನ್ನು ನೋಡುತ್ತಾರೆ. Power Star Puneeth ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಶಾಲೆಗೆ ಬಂದ ವಿಚಾರ ಅಲ್ಲಿನ ಮುಖ್ಯ ಶಿಕ್ಷಕರಿಗೆ ತಿಳಿದಿರಲಿಲ್ಲ.

ಯಾಕೆಂದರೆ ಅಪ್ಪು ಯಾರಿಗೂ ತಿಳಿಯಬಾರದು ಎನ್ನುವ ಕಾರಣಕ್ಕೆ ಮುಖಕ್ಕೆ ಹೆಲ್ಮೆಟ್ ಹಾಕಿಕೊಂಡು ಕಾರಿನಿಂದ ಇಳಿದು ಶಾಲೆಯನ್ನು ಪರಿಶೀಲಿಸಿದರು. ನಂತರ ಎಲ್ಲಾ ಖರ್ಚುಗಳನ್ನು ಸೇರಿಸಿ ವರ್ಷಕ್ಕೆ ಎಷ್ಟು ಬೇಕಾಗುತ್ತದೆ ಎಂದು ಕೇಳಿದಾಗ ಲೆಕ್ಕಾಚಾರದ ಪ್ರಕಾರ 23 ಲಕ್ಷ ರೂಪಾಯಿಗಳು ಬೇಕಾಗುತ್ತವೆ ಎಂಬುದಾಗಿ ತಿಳಿದು ಬರುತ್ತದೆ. ಇದನ್ನು ತಿಳಿದ ಕೂಡಲೇ ಸಹಾಯಕ್ಕೆ ಮುಂದಾದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಆ ಶಾಲೆಗೆ 2016ನೇ ಇಸ್ವಿಯಿಂದ ಪ್ರತಿವರ್ಷ 23 ಲಕ್ಷ ರೂಪಾಯಿ ಖರ್ಚನ್ನು ತಾವೇ ನೋಡಿಕೊಂಡು ಬರುತ್ತಿದ್ದಾರಂತೆ.

ಕೇವಲ ಎಷ್ಟು ಮಾತ್ರವಲ್ಲದೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಮಗುವಿಗೆ ಕೂಡ ತಾವೇ ಖುದ್ದಾಗಿ ಮುತುವರ್ಜಿ ವಹಿಸಿ ಚಿಕಿತ್ಸೆಯನ್ನು ಮಾಡಿಸಿ ಅದರ ಸಂಪೂರ್ಣ ವೆಚ್ಚವನ್ನು ತಾವೇ ಭರಿಸಿ ಆ ಮಗುವಿನ ಮನೆಯವರಿಗೆ ವೈಯಕ್ತಿಕ ಆರ್ಥಿಕ ಸಹಾಯವನ್ನು ಕೂಡ ನೀಡಿದ್ದಾರೆ ಎಂಬುದಾಗಿ ಅಪ್ಪು ಅವರ ಆಪ್ತ ವರ್ಗದ ಅಭಿಮಾನಿ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ದೊಡ್ಮನೆ ಸೊಸೆ ಅಶ್ವಿನಿ ಪುನೀತ್ ರಾಜಕುಮಾರ್ ಅವರ ಸರಳತೆಯ ಮತ್ತೊಂದು ವಿಡಿಯೋ ವೈರಲ್

ಇದೇ ರೀತಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಮಾಡಿರುವಂತಹ ಎಷ್ಟೋ ಒಳ್ಳೆಯ ಕಾರ್ಯಗಳು ಇನ್ನೂ ಕೂಡ ಜನರಲ್ಲಿ ಅಡಗಿ ಕುಳಿತಿದೆ. ಅಪ್ಪು ಯಾವತ್ತೂ ಕೂಡ ಪ್ರಚಾರಕ್ಕಾಗಿ ಬೇರೆಯವರಿಗೆ ಪರೋಪಕಾರ ಮಾಡಿದವರಲ್ಲ. ಅದಕ್ಕಾಗಿಯೇ ತಾನೆ ಅವರಿಗೆ ವಿಶ್ವಮಾನವ ಅನ್ನೋದು.

Leave a Comment

error: Content is protected !!