ದೊಡ್ಮನೆ ಸೊಸೆ ಅಶ್ವಿನಿ ಪುನೀತ್ ರಾಜಕುಮಾರ್ ಅವರ ಸರಳತೆಯ ಮತ್ತೊಂದು ವಿಡಿಯೋ ವೈರಲ್

Ashwini Puneeth Rajkumar’s simplicity ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ನಂತರ ಅವರು ನಡೆಸಿಕೊಂಡು ಹೋಗುತ್ತಿದ್ದಂತಹ ಎಲ್ಲಾ ಕಾರ್ಯಗಳನ್ನು ಮುನ್ನಡೆಸಿಕೊಂಡು ಹೋಗುವ ಜವಾಬ್ದಾರಿ ಅವರ ಪತ್ನಿ ಹಾಗೂ ದೊಡ್ಡಮನೆಯ ಸೊಸೆ ಆಗಿರುವ ಅಶ್ವಿನಿ ಪುನೀತ್ ರಾಜಕುಮಾರ್ ಅವರ ಮೇಲೆ ಬಿದ್ದಿದೆ. ಅಶ್ವಿನಿ ಅವರು ಕೂಡ ಪ್ರತಿಯೊಂದು ಜವಾಬ್ದಾರಿಗಳನ್ನು ಸಾಕಷ್ಟು ನಾಜೂಕಾಗಿ ಹಾಗೂ ಜವಾಬ್ದಾರಿಯುತವಾಗಿ ನಿರ್ವಹಿಸಿಕೊಂಡು ಹೋಗುತ್ತಿದ್ದಾರೆ.

Ashwini Puneeth Rajkumar’s simplicity

ಎಲ್ಲಕ್ಕಿಂತ ಪ್ರಮುಖವಾಗಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಕನಸಾಗಿರುವ ಪಿಆರ್ ಕೆ ಪ್ರೊಡಕ್ಷನ್ ಹಾಗೂ ಆಡಿಯೋ ಸಂಸ್ಥೆಯನ್ನು ಹೊಸ ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವ ಸಲುವಾಗಿ ಕೂಡ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಎಲ್ಲರಿಗೂ ಅವಕಾಶ ನೀಡಿ ಅವರ ಪ್ರತಿಭೆ ಕನ್ನಡಿಗರ ಮುಂದೆ ತಲುಪುವಂತೆ ಮಾಡುತ್ತಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಎಲ್ಲ ಸಾಮಾಜಿಕ ಕಳಕಳಿ ಇರುವಂತಹ ಕಾರ್ಯಗಳನ್ನು ಕೂಡ ಅಶ್ವಿನಿ ಪುನೀತ್ ರಾಜಕುಮಾರ್ ಅವರು ತಾವೇ ಮುತುವರ್ಜಿ ವಹಿಸಿ ಮಾಡುತ್ತಿದ್ದಾರೆ.

ಇಷ್ಟೇ ಯಾಕೆ ಶಕ್ತಿಧಾಮ ಸೇರಿದಂತೆ ಗೋಶಾಲೆ ಅನಾಥಾಶ್ರಮ ವೃದ್ಧಾಶ್ರಮಗಳನ್ನು ಕೂಡ ಅಶ್ವಿನಿ ಪುನೀತ್ ರಾಜಕುಮಾರ್ ಅವರು ನೋಡಿಕೊಂಡು ಹೋಗುತ್ತಿದ್ದಾರೆ. ಅಪ್ಪು ಅವರ ಎಲ್ಲಾ ಆದರ್ಶಗಳನ್ನು ಸಮಾಜಕ್ಕೆ ತಲುಪುವ ಕೆಲಸವನ್ನು ಅಶ್ವಿನಿ ಅವರು ಚೆನ್ನಾಗಿ ನಿರ್ವಹಿಸುತ್ತಿದ್ದಾರೆ ಎಂದರೆ ತಪ್ಪಾಗಲಾರದು. ಇನ್ನು ಇತ್ತೀಚಿಗಷ್ಟೇ ಅಶ್ವಿನಿ ಪುನೀತ್ ರಾಜಕುಮಾರ್ ಅವರ ಸರಳತೆಗೆ ಸಾಕ್ಷಿ ಎನ್ನುವಂತೆ ವಿಡಿಯೋ ಒಂದು ವೈರಲ್ ಆಗಿದೆ.

Appu Movies : ಅಪ್ಪು ಬದುಕಿದ್ದರೆ ಮಾಡಬೇಕಾಗಿದ್ದ ಸಿನಿಮಾಗಳು ಯಾವುವು ಗೊತ್ತಾ?

ಅಶ್ವಿನಿ ಪುನೀತ್ ರಾಜಕುಮಾರ್ ಅವರ ಮನೆಗೆ ಬಂದಂತಹ ಅಭಿಮಾನಿಯ ಮಗುವಿಗೆ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಊಟ ಮಾಡಿಸುತ್ತಿರುವ ದೃಶ್ಯ ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿದ್ದು ಸೋಶಿಯಲ್ ಮೀಡಿಯಾದಲ್ಲಿ ಎಲ್ಲಾ ಕಡೆ ದೊಡ್ಡ ಮಟ್ಟದಲ್ಲಿ ಓಡಾಡುತ್ತಿದೆ. ಅಭಿಮಾನಿಗಳಿಗೂ ಕೂಡ ಅತಿಥಿಗಳ ಹಾಗೆ ಆದರ ಸತ್ಕಾರಗಳನ್ನು ಮಾಡುವ ಅಶ್ವಿನಿ ಪುನೀತ್ ರಾಜಕುಮಾರ್ ಅವರ ಸರಳತೆಯ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ.

Leave a Comment

error: Content is protected !!