ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ಯಶ್ ಅಭಿಮಾನಿಗಳಿಗೆ ಶಾಕ್ ಕೊಟ್ಟ ರಾಕಿ ಭಾಯ್. ಯಶ್ ಬರೆದ್ರು ಭಾವುಕ ಪತ್ರ.

Rocking star Yash’s birthday: ರಾಕಿಂಗ್ ಸ್ಟಾರ್ ಯಶ್ ಅವರ ಜನ್ಮದಿನ ( Birthday ) ಜನವರಿ 8ರಂದು ಅದ್ದೂರಿಯಾಗಿ ಆಚರಿಸಲು ಅವರ ಅಭಿಮಾನಿಗಳು ಸಜ್ಜಾಗಿ ನಿಂತಿದ್ದಾರೆ. ಆದರೆ ರಾಕಿಂಗ್ ಸ್ಟಾರ್ ಯಶ್ ಅವರು ಇದೇ ಸಂದರ್ಭದಲ್ಲಿ ತಮ್ಮ ಅಭಿಮಾನಿಗಳಿಗೆ ಬೇಸರವನ್ನು ತರಿಸಿದ್ದಾರೆ ಎಂದು ಹೇಳಬಹುದಾಗಿದೆ. ಅಭಿಮಾನಿಗಳನ್ನೇ ತನ್ನ ಗರ್ವ ಹೆಮ್ಮೆ ಎಂದು ಹೇಳಿಕೊಳ್ಳುವ ರಾಕಿಂಗ್ ಸ್ಟಾರ್ ಯಶ್ ಹೀಗ್ಯಾಕೆ ಮಾಡಿದ್ದಾರೆ ಎಂದು ನೀವು ಕೇಳಬಹುದಾಗಿದೆ. ಬನ್ನಿ ಅದಕ್ಕೂ ಒಂದು ಕಾರಣ ಇದೆ ನಿಮಗೆ ಅದನ್ನು ವಿವರವಾಗಿ ಹೇಳುತ್ತೇವೆ.

ಸಾಮಾನ್ಯವಾಗಿ ಜನವರಿ 8ರಂದು ರಾಕಿಂಗ್ ಸ್ಟಾರ್ ಯಶ್ ಅವರು ತಮ್ಮ ಜನ್ಮದಿನಾಚರಣೆಯನ್ನು ಅಭಿಮಾನಿಗಳ ಸಮ್ಮುಖದಲ್ಲಿಯೇ ಅವರಿಗೆ ಇಷ್ಟ ಆಗುವ ರೀತಿಯಲ್ಲಿ ಅದ್ದೂರಿಯಾಗಿ ಸಂಭ್ರಮದಿಂದ ಆಚರಿಸಿಕೊಳ್ಳುತ್ತಾರೆ. ಆದರೆ ಈ ಬಾರಿ ಮಾತ್ರ ರಾಕಿಂಗ್ ಸ್ಟಾರ್ ಯಶ್ ಅವರು ಸೋಶಿಯಲ್ ಮೀಡಿಯಾದಲ್ಲಿ ( Social Media ) ನಿಮ್ಮ ಜೊತೆಗೆ ಜನ್ಮದಿನವನ್ನು ಆಚರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ನನ್ನನ್ನು ಕ್ಷಮಿಸಿ ಎಂದು ಹೇಳುವ ಮೂಲಕ ಅಭಿಮಾನಿಗಳಿಗೆ ಬೇಸರವನ್ನು ತರಿಸುವಂತಹ ಕೆಲಸ ಮಾಡಿದ್ದಾರೆ.

ಇದಕ್ಕೆ ಅವರು ಸೋಶಿಯಲ್ ಮೀಡಿಯಾದಲ್ಲಿ ( Social Media ) ಕಾರಣವನ್ನು ಕೂಡ ತಿಳಿಸಿದ್ದಾರೆ. ಹೌದು ಮಿತ್ರರೇ ತಮ್ಮ ಅಭಿಮಾನಿಗಳಿಗಾಗಿ ಏನೋ ಒಂದು ದೊಡ್ಡ ರೀತಿಯ ವಿಚಾರವನ್ನು ಯೋಜಿಸುತ್ತಿದ್ದೇನೆ ಇದಕ್ಕಾಗಿಯೇ ಈ ಬಾರಿ ನನ್ನ ಜನ್ಮ ದಿನಾಚರಣೆಯನ್ನು ನಿಮ್ಮೊಂದಿಗೆ ಆಚರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬುದಾಗಿ ಅಭಿಮಾನಿಗಳಲ್ಲಿ ಯಶ್ ಅವರು ಕ್ಷಮೆ ಕೋರಿದ್ದಾರೆ ಎಂದು ಹೇಳಬಹುದಾಗಿದೆ.

ಶಿವಣ್ಣನನ್ನು ನೋಡಿ ಕಲಿ ಎಂದು ಡಿ ಬಾಸ್ ಗೆ ಮತ್ತೆ ಚಾಟಿ ಬೀಸಿದ ಅಹೋರಾತ್ರ. ಕಾರಣ ಇಲ್ಲಿದೆ

ಹಲವಾರು ಮೂಲಗಳ ಪ್ರಕಾರ ರಾಕಿಂಗ್ ಸ್ಟಾರ್ ಯಶ್ ಅವರು ತಮ್ಮ ಮುಂದಿನ ಸಿನಿಮಾಗಾಗಿ ಹಲವಾರು ಯೋಜನೆಗಳನ್ನು ಸಿದ್ಧಪಡಿಸಿಕೊಂಡಿದ್ದು ಇದನ್ನು ಅಭಿಮಾನಿಗಳ ಸಮ್ಮುಖದಲ್ಲಿ ತರುವಂತಹ ಪ್ರಯತ್ನವನ್ನು ಮಾಡುತ್ತಿದ್ದಾರೆ ಎಂಬುದಾಗಿ ಕೇಳಿ ಬರುತ್ತಿದೆ. ರಾಕಿಂಗ್ ಸ್ಟಾರ್ ಯಶ್ ಅವರ ಈ ಪತ್ರದ ( Letter ) ಬಗ್ಗೆ ನಿಮಗಿರುವ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ನಮ್ಮೊಂದಿಗೆ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Leave a Comment

error: Content is protected !!