ಕ್ರಾಂತಿ ಸಿನಿಮಾದ ರಿಲೀಸ್ ದಿನಾನೇ ಡಿ ಬಾಸ್ ಗೆ ಶಾಕ್ ಕೊಡೋಕೆ ಸಜ್ಜಾದ್ರು ಕನ್ನಡದ ಜೋಡಿಗಳು.

vasista simha Haripriya marriage ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ಕ್ರಾಂತಿ ಸಿನಿಮಾ ಇದೇ ಜನವರಿ 26ರ ಗಣರಾಜ್ಯೋತ್ಸವದ ದಿನದಂದು ಪಂಚ ಭಾಷೆಗಳಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಲು ಸಜ್ಜಾಗಿ ನಿಂತಿದೆ. ಸಿನಿಮಾದ ಅದ್ಭುತ ಹಾಡುಗಳು ಈಗಾಗಲೇ ಪ್ರೇಕ್ಷಕರ ಮನಸ್ಸನ್ನು ರಂಜಿಸಿವೆ. ಇದೇ ಜನವರಿ 7 ರಂದು ಚಿತ್ರದ ಟ್ರೈಲರ್ (Trailer ) ಕೂಡ ಅದ್ದೂರಿಯಾಗಿ ಬಿಡುಗಡೆಯಾಗುವುದಕ್ಕೆ ಸಜ್ಜಾಗಿ ನಿಂತಿದೆ. ಒಟ್ಟಾರೆಯಾಗಿ ನಮ್ಮ ಕನ್ನಡ ಚಿತ್ರರಂಗದಲ್ಲಿ ಹಾಗೂ ಕರ್ನಾಟಕದಲ್ಲಿ ಕೇವಲ ಕ್ರಾಂತಿಯದ್ದೆ ಸದ್ದು ಎಂದರೆ ತಪ್ಪಾಗಲಾರದು.

ನೆಗೆಟಿವ್ ಹಾಗೂ ಪಾಸಿಟಿವ್ ವಿಚಾರಗಳ ನಡುವೆ ಕೂಡ ಕ್ರಾಂತಿ ಸಿನಿಮಾ ರಾಜ್ಯದಾದ್ಯಂತ ಸಿನಿಮಾ ಪ್ರೇಕ್ಷಕರಲ್ಲಿ ನಿರೀಕ್ಷೆಯನ್ನು ದೊಡ್ಡ ಮಟ್ಟದಲ್ಲಿ ಹುಟ್ಟು ಹಾಕಿರೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಹೀಗಿದ್ರೂ ಕೂಡ ಕ್ರಾಂತಿ ರಿಲೀಸ್ (Release) ದಿನಾನೇ ದರ್ಶನ್ ಅವರಿಗೆ ಸರ್ಪ್ರೈಸ್ ಕೊಡೋಕೆ ಕನ್ನಡ ಚಿತ್ರರಂಗದ ಖ್ಯಾತ ಸ್ಟಾರ್ ಜೋಡಿಗಳಿಬ್ಬರು ಸಜ್ಜಾಗಿ ನಿಂತಿದ್ದಾರೆ ಎಂಬ ಸುದ್ದಿ ಅಧಿಕೃತವಾಗಿ ಹೇಳಿ ಬರುತ್ತಿದೆ. ಅಷ್ಟಕ್ಕೂ ನಿಜವಾದ ವಿಚಾರ ಏನೆಂದು ತಿಳಿದುಕೊಳ್ಳೋಣ ಬನ್ನಿ.

ಹೌದು ಮಿತ್ರರೇ, ಇತ್ತೀಚಿಗಷ್ಟೇ ನಿಮಗೆಲ್ಲರಿಗೂ ಗೊತ್ತಿರೋ ಹಾಗೆ ಕನ್ನಡ ಚಿತ್ರರಂಗದ ಖ್ಯಾತ ನಟ ಹಾಗೂ ನಟಿ ಆಗಿರುವ ವಶಿಷ್ಠ ಸಿಂಹ ಹಾಗೂ ಹರಿಪ್ರಿಯಾ ಇಬ್ಬರೂ ಕೂಡ ಸದ್ದಿಲ್ಲದೆ ನಿಶ್ಚಿತಾರ್ಥವನ್ನು (Engagement) ಪೂರೈಸಿದ್ದಾರೆ. ಇವರಿಬ್ಬರೂ ಅತಿ ಶೀಘ್ರದಲ್ಲೇ ಹಸೆಮಣೆ ಏರಲಿದ್ದಾರೆ, ಎನ್ನುವ ಸುದ್ದಿಗಳು ಕೂಡ ಆ ಸಂದರ್ಭದಲ್ಲಿ ಓಡಾಡಿದ್ದವು. ಈಗ ಈ ವಿಚಾರ ನಿಜವಾಗುವ ಪರಿಸ್ಥಿತಿ ಸನ್ನಿಹಿತವಾಗಿದೆ.

ದೊಡ್ಮನೆ ಅವರು ಮಾಡಿರುವ ಕೆಲಸದ ಬಗ್ಗೆ ದರ್ಶನ್ ಅವರ ತಾಯಿ ಇದ್ದಕ್ಕಿದ್ದಂತೆ ಹೇಳಿದ್ದೇನು ಗೊತ್ತಾ?

ಇದೇ ಜನವರಿ 26ರಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಕ್ರಾಂತಿ ಸಿನಿಮಾ ಬಿಡುಗಡೆ (Release) ಆಗುತ್ತಿರುವ ದಿನದಂದೇ ವಸಿಷ್ಟ ಸಿಂಹ ಹಾಗೂ ಹರಿಪ್ರಿಯಾ ಇಬ್ಬರು ಕೂಡ ಗುರು ಹಿರಿಯರು ಹಾಗೂ ಗಣ್ಯಾತಿ ಗಣ್ಯರ ಸಮ್ಮುಖದಲ್ಲಿ ನವದಂಪತಿಗಳಾಗಿ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಎರಡು ಶುಭ ಕಾರ್ಯಗಳು ಒಂದೇ ದಿನ ಆಗುತ್ತಿರುವ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೇ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Leave a Comment

error: Content is protected !!