ರೆಕಾರ್ಡ್ಗಳನ್ನು ಕ್ರಿಯೇಟ್ ಮಾಡಿದ್ದರೂ ಕೂಡ ಕ್ರಾಂತಿ ಟ್ರೈಲರ್ ಗೆ ವ್ಯಕ್ತವಾಗುತ್ತಿದೆ ವ್ಯಾಪಕ ಟೀಕೆ. ಸಿನಿಮಾ ಕಾಪೀನಾ?

Kranti Movie trailer Record: ಚಾಲೆಂಜಿಂಗ್ ಸ್ಟಾರ್ ದರ್ಶನ್ (Challenging Star Darshan) ನಟನೆಯ ಕ್ರಾಂತಿ ಸಿನಿಮಾದ ಟ್ರೈಲರ್ ಈಗಾಗಲೇ ಬಿಡುಗಡೆಯಾಗಿ ಯೂಟ್ಯೂಬ್ ನಲ್ಲಿ ರೆಕಾರ್ಡ್ಗಳ ಮೇಲೆ ರೆಕಾರ್ಡ್(Record) ಮಾಡುತ್ತಿರುವುದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಸಾಕಷ್ಟು ವರ್ಷಗಳಿಂದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿಗಳು ಕಾತರರಾಗಿ ಕಾಯುತ್ತಿರುವಂತಹ ಸಿನಿಮಾ ಇದು. ಹೀಗಾಗಿ ಸಿನಿಮಾದ ಟ್ರೈಲರ್ ಮೇಲೆ ಹೈಪ್(Hype) ನಿಜವಾಗಿ ದೊಡ್ಡಮಟ್ಟದಲ್ಲಿ ವ್ಯಕ್ತವಾಗಿದೆ ಎಂದು ಹೇಳಬಹುದಾಗಿದೆ.

ಈಗಾಗಲೇ ಕನ್ನಡ ಚಿತ್ರರಂಗದ ಹೆಮ್ಮೆಯ ಸಿನಿಮಾ ಆಗಿರುವ ಕೆಜಿಎಫ್ ಚಿತ್ರದ ಟ್ರೈಲರ್ ರೆಕಾರ್ಡ್ ಕೂಡ ಕ್ರಾಂತಿ ಸಿನಿಮಾದ ಟ್ರೈಲರ್ ಮುಂದೆ ಮಂಕಾಗಿ ಕುಳಿತಿದೆ ಎಂದು ಹೇಳಬಹುದಾಗಿದೆ. ಅಷ್ಟರಮಟ್ಟಿಗೆ ವೀಕ್ಷಣೆ(Views) ಹಾಗೂ ಲೈಕ್ಸ್ ವಿಚಾರದಲ್ಲಿ (youtube) ನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕ ನಟನಾಗಿ ನಟಿಸಿರುವ ಕ್ರಾಂತಿ ಸಿನಿಮಾದ ಟ್ರೈಲರ್ ಹೆಸರು ಮಾಡಿದೆ. ಆದರೆ ಇಷ್ಟೊಂದು ದಾಖಲೆಗಳ ನಡುವೆಯೂ ಕೂಡ ಕ್ರಾಂತಿ (Kranti Movie) ಸಿನಿಮಾದ ಟ್ರೈಲರ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸಾಕಷ್ಟು ಟೀಕೆಗೆ ಒಳಗಾಗಿದ್ದಾರೆ.

Actor Darshan
Actor Darshan

ಹೌದು ಮಿತ್ರರೇ ಡಿ ಬಾಸ್ ಅವರು ಡಿಂಪಲ್ ಕ್ವೀನ್ ರಚಿತಾ ರಾಮ್ ಅವರ ಹಿಂದೆ ನಡೆದುಕೊಂಡು ಹೋಗುತ್ತಿರುವಂತಹ ದೃಶ್ಯದಲ್ಲಿ ಅವರು ಶರ್ಟ್ ಲೆಸ್(ಶರ್ಟ್ ಲೆಸ್) ಆಗಿ ಕಾಣಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಅವರ ದೈಹಿಕ ಮೈಕಟ್ಟು ಕೊಂಚ ಇರಿಸುಮುರಿಸಾಗುವಂತೆ ಕಾಣಿಸುತ್ತದೆ ಎಂಬುದಾಗಿ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಟೀಕಿಸುತ್ತಿದ್ದಾರೆ. ಕೇವಲ ಇದೊಂದು ವಿಚಾರ ಮಾತ್ರವಲ್ಲದೆ ಇನ್ನೊಂದು ವಿಚಾರವೂ ಕೂಡ ಈಗ ಬಹಳಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.

ಇದನೊಮ್ಮೆ ಓದಿ..ಹತ್ತು ವರ್ಷಗಳಿಂದ ಚಿತ್ರರಂಗದಲ್ಲಿ ಟಾಪ್ ನಾಯಕಿಯಾಗಿ ಕಾಣಿಸಿಕೊಂಡಿರುವ ರಚಿತಾರಾಮ್ ಮದುವೆ ಆಗದೆ ಇರಲು ಕಾರಣವೇನು ಗೊತ್ತಾ?

ಹೌದು ಕ್ರಾಂತಿ ಸಿನಿಮಾದಲ್ಲಿ ತೋರಿಸಿರುವ ಎರಡು ವಿಚಾರಗಳು ಬೇರೆ ಎರಡು ಸಿನಿಮಾಗಳ ರೀತಿಯಲ್ಲಿ ಕಾಣಿಸುತ್ತದೆ. ಮೊದಲನೇದಾಗಿ ಶಾಲೆಯನ್ನು ಉಳಿಸುವ ವಿಚಾರ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಾಯಕನಟನಾಗಿ ಕಾಣಿಸಿಕೊಂಡಿರುವ ಯುವರತ್ನ ಚಿತ್ರದ ಸ್ಟೋರಿ ಲೈನ್ ಗೆ (StoryLine) ಹೋಲಿಕೆ ಆಗುತ್ತದೆ. ಇನ್ನು ಶ್ರೀಮಂತ ವ್ಯಕ್ತಿ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರುವ ನಿಟ್ಟಿನಲ್ಲಿ ಸಾಮಾನ್ಯ ನಾಗುವಂತಹ ವಿಚಾರ ತೆಲುಗಿನ ಮಹೇಶ್ ಬಾಬು ನಟನೆಯ ಮಹರ್ಷಿ ಸಿನಿಮಾದಲ್ಲಿ ಕೂಡ ಕಂಡು ಬಂದಿದೆ. ಈ ಎರಡು ವಿಚಾರಗಳು ಬೇರೆ ಸಿನಿಮಾಗಳಿಂದ ಅಂಶಗಳನ್ನು ಕದಿಯಲಾಗಿದೆ ಎಂಬುದಾಗಿ ಟೀಕಿಸುವಂತೆ ಮಾಡಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ.

Leave a Comment

error: Content is protected !!