ಡಾಲಿ ಧನಂಜಯ್ ನಟನೆಯ ಜಮಾಲಿ ಗುಡ್ಡ ಸಿನಿಮಾದಲ್ಲಿ ಭಾವನ ಅವರ ವಿಡಿಯೋ ನೋಡಿ ತಬ್ಬಿಬ್ಬಾದ ಪ್ರೇಕ್ಷಕರು.

Dolly Dananjay New Movie : ಡಾಲಿ ಧನಂಜಯ್ ನಾಯಕ ನಟನಾಗಿ ನಟಿಸುತ್ತಿರುವ ಹಾಗೂ ಅದಿತಿ ಪ್ರಭುದೇವ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿರುವ ಮತ್ತು ಭಾವನಾ ಪ್ರಕಾಶ್ ಬೆಳವಾಡಿ ಸೇರಿದಂತೆ ಹಲವಾರು ಪ್ರಮುಖ ಕಲಾವಿದರು ಕಾಣಿಸಿಕೊಂಡಿರುವ ಒನ್ಸ್ ಅಪಾನ್ ಅ ಟೈಮ್ ಇನ್ ಜಮಾಲಿ ಗುಡ್ಡ ಸಿನಿಮಾದ ಚಿತ್ರೀಕರಣ ಈಗಾಗಲೇ ಮುಗಿದಿದ್ದು ಚಿತ್ರ ಅತಿ ಶೀಘ್ರದಲ್ಲೇ ಬಿಡುಗಡೆ ಕಾಣಲಿದ್ದು ಚಿತ್ರದ ಪ್ರಮೋಷನ್ ಕಾರ್ಯ ಭರ್ಜರಿಯಾಗಿ ನಡೆಯುತ್ತಿದೆ.

Dolly Dananjay New Movie ಜಮಾಲಿ ಗುಡ್ಡ

ಡಾಲಿ ಧನಂಜಯ್ ಕೇವಲ ನಾಯಕನಟನಾಗಿ ಮಾತ್ರವಲ್ಲದೆ ಇತ್ತೀಚಿನ ದಿನಗಳಲ್ಲಿ Producer ಆಗಿ ಕೂಡ ಚಿತ್ರರಂಗದಲ್ಲಿ ಒಳ್ಳೊಳ್ಳೆ ಸಿನಿಮಾಗಳನ್ನು ನೀಡುತ್ತಿದ್ದಾರೆ. ಡಾಲಿ ಧನಂಜಯ್ ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ ಜಮಾಲಿಗುಡ್ಡ ಸಿನಿಮಾ ವಿಶೇಷ ಕಥಾಂದರವನ್ನು ಹೊಂದಿರಲಿದೆ ಎನ್ನುವುದನ್ನು ಈಗಾಗಲೇ ಅದರ ವಿಡಿಯೋ ತುಣುಕುಗಳ ಮೂಲಕವೇ ನಾವು ತಿಳಿದುಕೊಂಡಿದ್ದೇವೆ ಎಂದು ಹೇಳಬಹುದಾಗಿದೆ. ಇನ್ನು ಡಾಲಿ ಧನಂಜಯ್ ಅವರ ಜಮಾಲಿ ಗುಡ್ಡ ಸಿನಿಮಾದಲ್ಲಿ ಕನ್ನಡ ಚಿತ್ರರಂಗದ ಖ್ಯಾತ ನಟಿ ಆಗಿರುವ ಭಾವನ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

Actor Dolly Dhananjay New Movie Jamaligudda  about Updates
Actor Dolly Dhananjay New Movie Jamaligudda

ನಟಿ ಭಾವನ ಭರತನಾಟ್ಯ ನೃತ್ಯಗಾರ್ತಿ ಕೂಡ ಆಗಿದ್ದು ಕನ್ನಡ ಚಿತ್ರರಂಗದ ಹಲವಾರು ಸೂಪರ್ ಹಿಟ್ ಯಶಸ್ವಿ ಸಿನಿಮಾಗಳಲ್ಲಿ ನಾಯಕ ನಟಿಯಾಗಿ ಹಾಗೂ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ತಮ್ಮ ಅಚ್ಚ ಕನ್ನಡದ ಭಾಷೆಯ ಬಳಸುವಿಕೆಯ ಮೂಲಕವೂ ಕೂಡ ಕನ್ನಡಿಗರಲ್ಲಿ ಸಾಕಷ್ಟು ಜನಪ್ರಿಯರಾಗಿದ್ದಾರೆ. ಇನ್ನು ಜಮಾಲಿ ಗುಡ್ಡ ಸಿನಿಮಾದ ಮೇಕಿಂಗ್ ವಿಡಿಯೋ ಕೂಡ ಹೊರಬಂದಿದ್ದು ಇದರಲ್ಲಿ ಭಾವನ ಕಾಣಿಸಿಕೊಂಡಿರುವ ರೀತಿ ಎಲ್ಲರ ಆಶ್ಚರ್ಯಕ್ಕೆ ಕಾರಣವಾಗಿದೆ ಎಂದರೆ ತಪ್ಪಾಗಲಾರದು.

ನಟ ವಿನೋದ್ ರಾಜ್ ಮನೆಯಲ್ಲಿ ಮದುವೆಯ ಸಂಭ್ರಮ

ಸಾಮಾನ್ಯವಾಗಿ ನಟಿ ಭಾವನ ಅವರು ಸಾಂಪ್ರದಾಯಿಕ ಪಾತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ. ಇನ್ನು ಜಮಾಲಿ ಗುಡ್ಡ ಸಿನಿಮಾದಲ್ಲಿ ಕೂಡ ಬಹುತೇಕ ಇದೇ ರೀತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು ಕೂಡ ಕೆಲವೊಂದು ದೃಶ್ಯಗಳಲ್ಲಿ ಅತ್ಯಂತ ಹೆಚ್ಚು Glamorous ಆಗಿ ಕಾಣಿಸಿಕೊಂಡಿರುವ ಮೇಕಿಂಗ್ ವಿಡಿಯೋಗಳು ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ Viral ಆಗುತ್ತಿದ್ದು ಈ ವಿಡಿಯೋಗಳನ್ನು ನೋಡಿರುವ ಪ್ರತಿಯೊಬ್ಬ ಪ್ರೇಕ್ಷಕ ಕೂಡ ಮೂಗಿನ ಮೇಲೆ ಬೆರಳಿಟ್ಟಿದ್ದು ಚಿತ್ರದ ಬಿಡುಗಡೆಗೆ ಕಾಯುತ್ತಿದ್ದಾರೆ ಎಂದು ಹೇಳಬಹುದಾಗಿದೆ. ಜಮಾಲಿಗುಡ್ಡ ಸಿನಿಮಾದ ಬಗ್ಗೆ ನಿಮ್ಮ ನಿರೀಕ್ಷೆಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Leave a Comment

error: Content is protected !!