ಖ್ಯಾತ ನಟಿ ಭಾವನ ಅವರು ಇನ್ನು ಮದುವೆಯಾಗದೆ ಇರಲು ಕಾರಣ ಕೊನೆಗೂ ಸಿಕ್ತು ನೋಡಿ..

Actress Bhavana: ಕನ್ನಡ ಚಿತ್ರರಂಗದ ಖ್ಯಾತ ನಟಿ ಮಣಿಯರಲ್ಲಿ ( Actress) ಒಬ್ಬರಾಗಿರುವಂತಹ ಭಾವನ ಅವರ ಕುರಿತಂತೆ ಒಂದು ವಿಚಾರವನ್ನು ಇಂದಿನ ಲೇಖನಿಯಲ್ಲಿ ಚರ್ಚಿಸಲು ಹೊರಟಿದ್ದೇವೆ. ಹೌದು ಮಿತ್ರರೇ ನಟಿ ಭಾವನ ಅವರು ಕನ್ನಡ ಚಿತ್ರರಂಗದ ಅತ್ಯಂತ ಬಹು ಬೇಡಿಕೆಯ ( Most Demanding ) ನಟಿಯರಲ್ಲಿ ಒಬ್ಬರಾಗಿ ಒಂದು ಕಾಲದಲ್ಲಿ ಕಾಣಿಸಿಕೊಂಡಿದ್ದರು. ಆದರೆ ಈಗ ಚಿತ್ರರಂಗದಲ್ಲಿ ಆಗೊಮ್ಮೆ ಈಗೊಮ್ಮೆ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದರೆ ತಪ್ಪಾಗಲಾರದು. ಇತ್ತೀಚಿಗಷ್ಟೇ ಡಾಲಿ ಧನಂಜಯ್ ನಟನೆಯ ಸಿನಿಮಾದಲ್ಲಿ ಕೂಡ ಕಾಣಿಸಿಕೊಂಡಿದ್ದರು.

ಹೌದು ಮಿತ್ರರೇ, ಡಾಲಿ ಧನಂಜಯ್ ನಾಯಕ ನಟನಾಗಿ ಹಾಗೂ ಅದಿತಿ ಪ್ರಭುದೇವ ನಾಯಕಿಯಾಗಿ ಕಾಣಿಸಿಕೊಂಡಿರುವ ವನ್ಸ್ ಅಪಾನ್ ಅ ಟೈಮ್ ಇನ್ ಜಮಾಲಿ ಗುಡ್ಡ ಸಿನಿಮಾದಲ್ಲಿ ಭಾವನ ಅವರು ಪ್ರಮುಖ ಪಾತ್ರ ಒಂದರಲ್ಲಿ ಕಾಣಿಸಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಎಲ್ಲರಿಗೂ ಅವರ ಪಾತ್ರದ ಮೇಲೆ ಕುತೂಹಲ ( Curiosity ) ಹುಟ್ಟಿಕೊಂಡಿತ್ತು. ಇನ್ನು ವಯಸ್ಸು 45 ದಾಟಿದ್ದರೂ ಕೂಡ ಭಾವನ ಅವರು ಇಂದು ಕೂಡ ಮಾವತರಹೊರೆಯದ ನಟಿಯಂತೆ ಕಾಣಿಸಿಕೊಳ್ಳುತ್ತಾರೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.

ಎಲ್ಲಕ್ಕಿಂತ ಪ್ರಮುಖವಾಗಿ ಭಾವನಾ ಅವರು ಇದುವರೆಗೂ ಮದುವೆಯಾಗದೆ ಒಬ್ಬಂಟಿ ಆಗಿಯೇ ಉಳಿದುಕೊಂಡಿದ್ದಾರೆ. ನಟಿ ಭಾವನವರು ಯಾಕೆ ಮದುವೆ ಆಗಿಲ್ಲ ಎನ್ನುವ ಬಗ್ಗೆ ಹಲವಾರು ಪ್ರಶ್ನೆಗಳು ಇದ್ದರೂ ಕೂಡ ಅದಕ್ಕೆ ಸಮರ್ಪಕವಾದ ( Proper ) ಉತ್ತರ ಸಿಕ್ಕಿರಲಿಲ್ಲ. ಇತ್ತೀಚಿಗಷ್ಟೇ ನಡೆದಿರುವಂತಹ ಒಂದು ಸಂದರ್ಶನದಲ್ಲಿ ಖುದ್ದಾಗಿ ಭಾವನ ಅವರಿಗೆ ಸಂದರ್ಶಕರು ( Interviewer ) ಈ ಪ್ರಶ್ನೆ ಕೇಳಿದ್ದು ಅವರು ಯಾವ ರೀತಿಯಲ್ಲಿ ಉತ್ತರ ನೀಡಿದ್ದಾರೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಕರ್ನಾಟಕದಲ್ಲಿ ಅತ್ಯಂತ ದುಬಾರಿ ಸಿಂಗರ್ ಆಗಿದ್ದ ಪುನೀತ್ ರಾಜಕುಮಾರ್ ಒಂದು ಹಾಡಿಗಾಗಿ ಪಡೆಯುತ್ತಿದ್ದ ಸಂಭಾವನೆ ಎಷ್ಟು ಗೊತ್ತಾ?

ಹೌದು ಮಿತ್ರರೇ ಈ ಪ್ರಶ್ನೆಗೆ ಭಾವನ ಅವರು ನಾನು ಸ್ವಲ್ಪಮಟ್ಟಿಗೆ ಚಂಚಲವಾದ ಮನಸ್ಸನ್ನು ಹೊಂದಿರುವ ಹಾಗೂ ಕೋಪವನ್ನು ಹೊಂದಿರುವಂತಹ ವ್ಯಕ್ತಿ. ನನ್ನ ಮನೋಭಾವಕ್ಕೆ ಅನುಗುಣವಾಗಿ ಇರುವಂತಹ ವ್ಯಕ್ತಿಯನ್ನು ನಾನು ಮದುವೆಯಾಗಬೇಕು ಇಲ್ಲದಿದ್ದರೆ ದಾಂಪತ್ಯ ಜೀವನ ( Marriage Life ) ಹಾಳಾಗಿ ಬಿಡುತ್ತದೆ ಹಾಗೂ ಇದೇ ರೀತಿ ಹಾಳು ಮಾಡಿಕೊಂಡವರನ್ನು ನಾನು ತುಂಬಾ ಜನರನ್ನು ನೋಡಿದ್ದೇನೆ ಹಾಗಾಗಿ ನಾನು ಸೇಫ್ ಎನ್ನುವುದಾಗಿ ಹೇಳಿದ್ದಾರೆ. ಮದುವೆ ಕುರಿತಂತೆ ಭಾವನಾ ಅವರು ನೀಡಿರುವ ಹೇಳಿಕೆಯ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Leave a Comment

error: Content is protected !!