ಕರ್ನಾಟಕದಲ್ಲಿ ಅತ್ಯಂತ ದುಬಾರಿ ಸಿಂಗರ್ ಆಗಿದ್ದ ಪುನೀತ್ ರಾಜಕುಮಾರ್ ಒಂದು ಹಾಡಿಗಾಗಿ ಪಡೆಯುತ್ತಿದ್ದ ಸಂಭಾವನೆ ಎಷ್ಟು ಗೊತ್ತಾ?

Puneeth Rajkumar singing: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಕನ್ನಡ ಚಿತ್ರರಂಗದ ನಿಜವಾದ ಆಲ್ರೌಂಡರ್ (All Rounder ) ಆಗಿದ್ದರು ಎಂದರೆ ತಪ್ಪಾಗಲಾರದು. ಯಾಕೆಂದರೆ ಅಪ್ಪು ಅವರು ಒಬ್ಬ ನಿರ್ಮಾಪಕನಾಗಿ ನಾಯಕ ನಟನಾಗಿ ಕಿರುತೆರೆಯ ನಿರೂಪಕನಾಗಿ ಹಾಗೂ ಗಾಯಕನಾಗಿಯೂ ಕೂಡ ಕನ್ನಡ ಚಿತ್ರರಂಗದಲ್ಲಿ ಮಿಂಚು ಹರಿಸಿದ್ದಾರೆ. ಇಂದು ಅವರು ನಮ್ಮೊಂದಿಗೆ ಇಲ್ಲದಿರಬಹುದು ಆದರೆ ಅವರು ಕನ್ನಡ ಚಿತ್ರರಂಗದಲ್ಲಿ ಹರಡಿರುವ ಆದರ್ಶಗಳು ಇನ್ನು ಹಲವಾರು ವರ್ಷಗಳ ಕಾಲ ಕೂಡ ಜೀವಂತ ಇರುತ್ತದೆ.

ಒಬ್ಬ ನಿರ್ಮಾಪಕರಾಗಿ ಅವರು ತಮ್ಮ ಸಿನಿಮಾಗಳನ್ನು ತಾವೇ ನಿರ್ಮಾಣ ಮಾಡಿ ದುಡ್ಡನ್ನು ಮಾಡಿಕೊಳ್ಳಬಹುದಿತ್ತು ಆದರೆ ಆ ರೀತಿ ಮಾಡಲು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಹೋಗಲಿಲ್ಲ. ಬದಲಾಗಿ ಕನ್ನಡ ಚಿತ್ರರಂಗದ ಹೊಸ ಯುವ ಪ್ರತಿಭೆಗಳಿಗೆ ( Emerging Talents ) ಸಿನಿಮಾ ನಿರ್ಮಾಣ ಮಾಡಿ ಅವರ ಪ್ರತಿಭೆಯನ್ನು ಕರ್ನಾಟಕ ರಾಜ್ಯದ ಪ್ರೇಕ್ಷಕರು ನೋಡುವಂತೆ ಮಾಡಿ ಅವರಿಗೊಂದು ಒಳ್ಳೆಯ ಉತ್ತಮ ವೇದಿಕೆಯನ್ನು ನಿರ್ಮಾಣ ಮಾಡಿಕೊಡುತ್ತಾರೆ ನಮ್ಮೆಲ್ಲರ ನೆಚ್ಚಿನ ಅಪ್ಪು.

ಇನ್ನು ಇಷ್ಟು ಮಾತ್ರವಲ್ಲದೆ ಹಲವಾರು ಸಾಮಾಜಿಕ ಕಾರ್ಯಗಳಿಗಾಗಿ ಅಪ್ಪು ಅವರು ವರ್ಷಾದ್ಯಂತ ಕೋಟ್ಯಾಂತರ ( Crores ) ಹಣವನ್ನು ಖರ್ಚು ಮಾಡುತ್ತಿದ್ದರು. ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವಂತೆ ಅವರು ನಡೆಸುತ್ತಿದ್ದ ಸಾಕಷ್ಟು ವೃದ್ಧಾಶ್ರಮ ಅನಾಥಾಶ್ರಮ ಹಾಗೂ ಗೋಶಾಲೆ ಸೇರಿದಂತೆ ಅನೇಕ ಸರ್ಕಾರಿ ಶಾಲೆಗಳು ಕೂಡ ಇದ್ದವು. ಇನ್ನು ಅವರು ತಾವು ಹಾಡಿದ ಹಾಡಿಗಾಗಿ ಸಿಕ್ಕಂತಹ ಸಂಭಾವನೆಯನ್ನು ಸಂಪೂರ್ಣವಾಗಿ ಅನಾಥಾಶ್ರಮ ಹಾಗೂ ವೃದ್ಧಾಶ್ರಮಗಳಿಗಾಗಿ ಬಳಸಿಕೊಳ್ಳುತ್ತಿದ್ದರು. ಇದಕ್ಕಾಗಿ ಹಾಡನ್ನು ಹಾಡಲು ದುಬಾರಿ ಸಂಭಾವನೆಯನ್ನು ಕೂಡ ಅವರು ಚಾರ್ಜ್ ಮಾಡುತ್ತಿದ್ದರು.

D Boss ಇಂದಿನ ಪರಿಸ್ಥಿತಿಗೆ ಅವರೇ ಕಾರಣ ಎಂದು ಶಾ’ಕಿಂಗ್ ಹೇಳಿಕೆ ನೀಡಿದ ದರ್ಶನ್ ರವರ ತಾಯಿ ಮೀನಾ ತೂಗುದೀಪ್.

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಒಂದು ಹಾಡನ್ನು ಹಾಡಲು ಐದರಿಂದ ಏಳು ಲಕ್ಷ ರೂಪಾಯಿ ಸಂಭಾವನೆಯನ್ನು (Remuneration ) ಪಡೆಯುತ್ತಿದ್ದರು. ಇಷ್ಟೊಂದು ದುಬಾರಿ ಸಂಭಾವನೆಯನ್ನು ಪಡೆದುಕೊಳ್ಳುತ್ತಿದ್ದರು ಕೂಡ ಅದನ್ನು ಸಂಪೂರ್ಣವಾಗಿ ಅನಾಥಾಶ್ರಮ ಹಾಗೂ ವೃದ್ಧಾಶ್ರಮ ಕುರಿತಂತಹ ಕಾರ್ಯಗಳಿಗೆ ಸಂಪೂರ್ಣವಾಗಿ ವಿನಿಯೋಗಿಸುತ್ತಿದ್ದರು. ಹಣವನ್ನು ಸಮಾಜಕ್ಕಾಗಿ ಯಾವ ರೀತಿ ಅರ್ಥಪೂರ್ಣವಾಗಿ ವಿನಿಯೋಗಿಸಿಕೊಳ್ಳಬೇಕು ಎಂಬುದು ಅಪ್ಪು ಅವರನ್ನು ನೋಡಿ ಪ್ರತಿಯೊಬ್ಬರೂ ಕಲಿಯಬೇಕು.

Leave a Comment

error: Content is protected !!