ಬೇರೆ ಗಂಡಸರ ಜೋತೆ ಸೇರುವಂತೆ ಅತ್ತಿಗೆಗೆ ಒತ್ತಾಯ ಮಾಡುತ್ತಿದ್ದ ಖ್ಯಾತ ಕನ್ನಡ ನಟಿ ಅಭಿನಯ ಜೈಲಿಗೆ

Actress abhinaya : ಸೆಲೆಬ್ರಿಟಿಗಳು ಎಂದ ಮೇಲೆ ಒಂದಲ್ಲ ಒಂದು ವಿಚಾರಕ್ಕಾಗಿ ಸುದ್ದಿ ಆಗುತ್ತಲೇ ಇರುತ್ತಾರೆ ಆದರೆ ಇಂದು ನಾವು ಮಾತನಾಡಲು ಹೊರಟಿರುವುದು ಕನ್ನಡ ಕಿರುತೆರೆಯಲ್ಲಿ ಹಲವಾರು ವರ್ಷಗಳಿಂದ ಧಾರವಾಹಿಗಳಲ್ಲಿ ಹಾಗೂ ಸಿನಿಮಾಗಳಲ್ಲಿ ನಟಿಸಿಕೊಂಡು ಬರುತ್ತಿರುವ ಅಭಿನಯ ಅವರ ಕುರಿತ. ವರದಕ್ಷಿಣೆ ವಿಚಾರವಾಗಿ ಈಗ ಅವರು ಎರಡು ವರ್ಷ ಜೈಲು ಶಿಕ್ಷೆಯನ್ನು ಅನುಭವಿಸಬೇಕಾಗಿರುವ ಪರಿಸ್ಥಿತಿಗೆ ಸಿಲುಕಿದ್ದಾರೆ. ನಿಜಕ್ಕೂ ಒಬ್ಬ ಸಮಾಜ ಗುರುತಿಸುವಂತಹ ಸೆಲೆಬ್ರಿಟಿಯಾಗಿ ಇದ್ದುಕೊಂಡು ಕೂಡ ಅವರು ಹೀಗೆ ಮಾಡುತ್ತಾರೆ ಎಂಬುದನ್ನು ನಿಜಕ್ಕೂ ಕೂಡ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ಈ ಪ್ರಕರಣದ ಹಿಂದಿನ ಸಂಪೂರ್ಣ ವಿವರವನ್ನು ತಿಳಿದುಕೊಳ್ಳೋಣ ಬನ್ನಿ. 2002ನೇ ಇಸವಿಯಲ್ಲಿ ಚಂದ್ರ ಲೇಔಟ್ ಪೊಲೀಸ್ ಠಾಣೆಯಲ್ಲಿ ಈ ವರದಕ್ಷಿಣೆ ಕಿ’ರುಕುಳದ ಪ್ರಕರಣ ದಾಖಲಾಗಿತ್ತು. 1998 ನೇ ಇಸವಿಯಲ್ಲಿ ಅಭಿನಯ ಅವರ ಸಹೋದರ ಆಗಿರುವ ಶ್ರೀನಿವಾಸ್ ಅವರು ಲಕ್ಷ್ಮೀದೇವಿ ಎನ್ನುವವರ ಜೊತೆಗೆ ಮದುವೆ ಆಗಿದ್ದರು. ಈ ಸಂದರ್ಭದಲ್ಲಿ ಶ್ರೀನಿವಾಸ ಹಾಗೂ ಅವರ ಕುಟುಂಬದವರು ಲಕ್ಷ್ಮೀದೇವಿ ಅವರ ಕುಟುಂಬದಿಂದ ಆ ಕಾಲದಲ್ಲಿಯೇ 80,000 ನಗದು ಹಾಗೂ 250 ಗ್ರಾಂ ಚಿನ್ನಾಭರಣಗಳನ್ನು ವರದಕ್ಷಿಣೆ ರೂಪದಲ್ಲಿ ಪಡೆದುಕೊಂಡಿದ್ದರು.

Actress abhinaya
Actress abhinaya

ಇಷ್ಟೆಲ್ಲಾ ಪಡೆದ ನಂತರವೂ ಕೂಡ ಮತ್ತೆ ಮದುವೆಯಾದ ನಂತರವೂ ಒಂದು ಲಕ್ಷ ರೂಪಾಯಿ ಹಣವನ್ನು ತರುವಂತೆ ಲಕ್ಷ್ಮಿ ದೇವಿ ಅವರಿಗೆ ಹಾಗೂ ಅವರ ತವರು ಮನೆಯವರಿಗೆ ಪೀಡಿಸಲಾಗುತ್ತಿತ್ತು. ಇದಕ್ಕಾಗಿ ಅವರನ್ನು ತವರು ಮನೆಗೆ ಕೂಡ ಕಳುಹಿಸಲಾಯಿತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಲಕ್ಷ್ಮಿ ದೇವಿ ಅವರು ಚಂದ್ರ ಲೇಔಟ್ ಪೊಲೀಸ್ ಠಾಣೆಯಲ್ಲಿ ಶ್ರೀನಿವಾಸ್ ಅವರ ಕುಟುಂಬಸ್ಥರ ವಿರುದ್ಧ ಪ್ರಕರಣವನ್ನು ದಾಖಲಿಸುತ್ತಾರೆ.

ಅಪ್ಪು ಖುಷಿಯಾದಾಗ ಹಾಡುತ್ತಿದ್ದ ಹಿಂದಿ ಹಾಡು ಯಾವುದು ಗೊತ್ತಾ? ಚಿಂದಿ ವಿಡಿಯೋ ಇಲ್ಲಿದೆ ನೋಡಿ!

ಮ್ಯಾಜಿಸ್ಟ್ರೇಟರು ಈ ಪ್ರಕರಣವನ್ನು ವಿಚಾರಣೆ ನಡೆಸಿ 2012ರಲ್ಲಿ ಈ ಪ್ರಕರಣದಲ್ಲಿ ಐದು ಆರೋಪಿಗಳಿಗೆ ಐದು ವರ್ಷಗಳ ತಲಾ ಶಿಕ್ಷೆಯನ್ನು ಪ್ರಕಟಿಸಿದ್ದರು. ಆದರೆ ಜಿಲ್ಲಾ ನ್ಯಾಯಾಲಯ ಈ ಪ್ರಕರಣವನ್ನು ಖುಲಾಸೆಗೊಳಿಸಿತ್ತು. ಜಿಲ್ಲಾ ನ್ಯಾಯಾಲಯ ಖುಲಾಸೆಗೋಳಿಸಿರುವ ತೀರ್ಪಿನ ವಿರುದ್ಧ ಪ್ರಶ್ನಿಸಿ ಲಕ್ಷ್ಮೀದೇವಿ ಅವರು ಮತ್ತೆ ಕೋರ್ಟಿನ ಮೆಟ್ಟಿಲೇರಿದರು.

ಈಗ ಶ್ರೀನಿವಾಸ್ ಅವರ ಸಹೋದರಿಯಾಗಿರುವ ಅಭಿನಯ ಅವರಿಗೆ ಎರಡು ವರ್ಷ ಜೈಲು ಶಿಕ್ಷೆ ಹಾಗೂ ಅವರ ತಾಯಿ ಜಯಮ್ಮ ಹಾಗೂ ಸಹೋದರ ಚೆಲುವರಾಜ ಅವರಿಗೆ ಐದು ವರ್ಷದ ಶಿಕ್ಷೆಯನ್ನು ಕೋರ್ಟ್ ಪ್ರಕಟಿಸಿದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ನಟಿ ಯಾವ ಹಂತವನ್ನು ತಲುಪುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ. ಈ ಪ್ರಕರಣ ಹಾಗೂ ತೀರ್ಪಿನ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ.

Leave a Comment

error: Content is protected !!