ಅಪ್ಪು ಖುಷಿಯಾದಾಗ ಹಾಡುತ್ತಿದ್ದ ಹಿಂದಿ ಹಾಡು ಯಾವುದು ಗೊತ್ತಾ? ಚಿಂದಿ ವಿಡಿಯೋ ಇಲ್ಲಿದೆ ನೋಡಿ!

Appu singing video : ಕನ್ನಡ ಚಿತ್ರರಂಗದಲ್ಲಿ ನಾಯಕ ನಿರ್ಮಾಪಕ ಹಾಗೂ ರಿಯಾಲಿಟಿ ಶೋ ಕಾರ್ಯಕ್ರಮಗಳ ನಿರೂಪಕನಾಗಿ ಕೂಡ ಸವ್ಯಸಾಚಿಯಾಗಿ ಕಾಣಿಸಿಕೊಂಡಿದ್ದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಕಳೆದ ವರ್ಷದ ಅಕ್ಟೋಬರ್ 29 ರಂದು ನಮ್ಮನ್ನೆಲ್ಲಾ ಕೇವಲ 46 ವರ್ಷ ವಯಸ್ಸಿನಲ್ಲಿ ಅಕಾಲಿಕವಾಗಿ ಅಗಲಿದ್ದಾರೆ. ಕೇವಲ ನಟನಾಗಿ ಮಾತ್ರವಲ್ಲದೆ ಫಿಟ್ನೆಸ್ ಐಕಾನ್ ಕೂಡ ಆಗಿದ್ದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಮ್ಮನ್ನೆಲ್ಲಾ ಇಷ್ಟೊಂದು ಚಿಕ್ಕವಯಸ್ಸಿಗೆ ಬಿಟ್ಟು ಹೋಗುತ್ತಾರೆ ಎಂಬುದನ್ನು ಯಾರು ಕೂಡ ನಂಬಲು ಸಾಧ್ಯವಿಲ್ಲ.

ಪವರ್ ಸ್ಟಾರ್ ಪುನೀತ್ ರಾಜಕುಮಾರ್ (Puneet rajkumar) ಒಬ್ಬ ನಾಯಕನಟನಾಗಿ ಉತ್ತಮ ನಟನೆಯನ್ನು ತೋರ್ಪಡಿಸುವುದು ಮಾತ್ರವಲ್ಲದೆ ತಮ್ಮ ಪಿ ಆರ್ ಕೆ ಪ್ರೊಡಕ್ಷನ್ ಸಂಸ್ಥೆಯ ಮೂಲಕ ಹೊಸ ಪ್ರತಿಭೆಗಳಿಗೆ ತಮ್ಮದೇ ನಿರ್ಮಾಣದ ಮೂಲಕ ವಿಭಿನ್ನ ಕಥಹಂದರವುಳ್ಳ ಸದಭಿ ರುಚಿ ಸಿನಿಮಾದಲ್ಲಿ ತಮ್ಮ ಪ್ರತಿಭೆಯನ್ನು ತೋರ್ಪಡಿಸುವ ಅವಕಾಶವನ್ನು ಕೂಡ ನೀಡುತ್ತಿದ್ದರು. ಇಂತಹ ಅವಕಾಶವನ್ನು ನೀಡುತ್ತಿದ್ದ ಮತ್ತೊಬ್ಬ ಕನ್ನಡ ಸ್ಟಾರ್ ನಟನನ್ನು ನೀವು ಹುಡುಕಲು ಸಾಧ್ಯವೇ ಇಲ್ಲ ಎಂದು ಹೇಳಬಹುದಾಗಿದೆ.

ಒಂದು ಪ್ರತಿಭೆಯನ್ನು ಗುರುತಿಸುವುದು ಕೇವಲ ಮತ್ತೊಂದು ಪ್ರತಿಭೆಗೆ ಮಾತ್ರ ಸಾಧ್ಯ ಎಂದು ಹೇಳುವಂತೆ ಇಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ಕೂಡ ಪ್ರತಿಭೆಗಳನ್ನು ತಾವೇ ಗುರುತಿಸಿ ಅವರಿಗೆ ಬೇಕಾಗಿರುವಂತಹ ಎಲ್ಲಾ ಸಹಾಯಗಳನ್ನು ನೀಡುತ್ತಿದ್ದರು.

Appu singing video
Appu singing video

ಇನ್ನು ಒಬ್ಬ ಗಾಯಕನಾಗಿ ಕೂಡ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ತಾವು ಹಾಡುತ್ತಿದ್ದ ಎಲ್ಲಾ ಹಾಡಿನಿಂದ ಬರುತ್ತಿದ್ದ ಹಣವನ್ನು ಸಂಪೂರ್ಣವಾಗಿ ವೃದ್ಧಾಶ್ರಮ ಹಾಗೂ ಅನಾಥಾಶ್ರಮಗಳನ್ನು ನಡೆಸಲು ಬಳಸಿಕೊಳ್ಳುತ್ತಿದ್ದರು ಎಂಬುದು ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಇನ್ನು ಪುನೀತ್ ರಾಜಕುಮಾರ್ ಅವರು ಕೇವಲ ಕನ್ನಡ ಹಾಡು ಮಾತ್ರವಲ್ಲದೆ ಹಳೆಯ ಹಿಂದಿ ಹಾಡುಗಳ ಪ್ರಿಯರು ಕೂಡ ಆಗಿದ್ದರಂತೆ. ತಾವೇ ಬಿಡುವಿನ ಸಮಯದಲ್ಲಿ ಹಲವಾರು ಹಾಡುಗಳನ್ನು ಹಾಡುವ ಪ್ರಯತ್ನವನ್ನು ಮಾಡುತ್ತಿದ್ದರು ಎಂಬುದನ್ನು ನೀವೆಲ್ಲರೂ ತಿಳಿದೇ ಇರುತ್ತೀರಿ.

ಬೇರೆ ಗಂಡಸರ ಜೋತೆ ಸೇರುವಂತೆ ಅತ್ತಿಗೆಗೆ ಒತ್ತಾಯ ಮಾಡುತ್ತಿದ್ದ ಖ್ಯಾತ ಕನ್ನಡ ನಟಿ ಅಭಿನಯ ಜೈಲಿಗೆ

ಇನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಹಳೆಯ ಹಿಂದಿ ಹಾಡನ್ನು ಹಾಡುತ್ತಿದ್ದ ಅಪರೂಪದ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಿದ್ದು ಅಭಿಮಾನಿಗಳು ಈ ಹಾಡಿನ ತುಣುಕನ್ನು ನೋಡಿ ಭಾವುಕರಾಗಿ ಕಣ್ಣೀರು ಹಾಕುತ್ತಿದ್ದಾರೆ.

ನೀವು ಕೂಡ ಅಪ್ಪು ಹಾಡಿರುವ ಈ ಅಪರೂಪದ ವಿಡಿಯೋವನ್ನು ಕೂಡ ನೋಡಬಹುದಾಗಿದ್ದು ಒಂದು ಕಾಲದಲ್ಲಿ ಅಪ್ಪು ಇಷ್ಟೊಂದು ಚೆನ್ನಾಗಿ ಹಾಡುತ್ತಿದ್ದರು ಎಂಬ ನೆನಪನ್ನು ಮರು ಮೆಲಕು ಹಾಕಬಹುದಾಗಿದೆ. ಈ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೇ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Leave a Comment

error: Content is protected !!