ಬಿಳಿ ತೊನ್ನಿಗೆ ಒಂದಿಷ್ಟು ಸೂಕ್ತ ಮನೆಮದ್ದುಗಳಿವು

ತ್ವಚೆಯಲ್ಲಿರುವ ಪಿಗ್ ಮಿಟೇಷನ್ ಕೋಶಗಳ ನಾಶದಿಂದ ಈ ಬಿಳಿ ತೊನ್ನಿನ ಸಮಸ್ಯೆ ಕಾಡುತ್ತೆ. ಕೆಲವರಿಗೆ ಇದು ರೋಗ ನಿರೋಧಕ ಕುಂಠಿತ ವಾಗುವ ಮೂಲಕ ಬರುತ್ತದೆ. ಇನ್ನೂ ಕೆಲವರಿಗೆ ತಮ್ಮ ಪೂರ್ವಜರಿಂದ ಬಳುವಳಿಯಾಗಿ ಬರುತ್ತವೆ.

ಕಲುಷಿತ ವಾತಾವರಣ, ಇತರ ಸೋಂಕು ಗಳು, ಚರ್ಮ ರೋಗಗಳಲ್ಲಿ ಈ ಪರಿಸ್ಥಿತಿ ಉಂಟಾಗಬಹುದು. ಆದ್ದರಿಂದ ಹೆಚ್ಚು ಕಾಲ ಬಿಸಿಲಿಕೆ ಮೈಯೊಡ್ಡಿದರೆ ಉರಿಯುತ್ತದೆ. ಇನ್ನು ಇದಕ್ಕೆ ಪರಿಹಾರ ಅಂದ್ರೆ ಮೊದಲನೆಯದು ನಿಮ್ಮ ಚರ್ಮದ ಮೇಲೆ ಬಿಳಿ ಮಚ್ಚೆಗಳನ್ನು ತಡೆಯಲು ಪ್ರತಿದಿನ ಮೂರು ವಿಳ್ಯದೆಲೆ, ಸೌತೆ ಕಾಯಿ ಸೇವಿಸಿ.

ಇದದಷ್ಟೇ ಅಲ್ಲದೆ ಕೆಮ್ಮಣ್ಣುನನ್ನು ಶುಂಠಿಯ ರಸದೊಂದಿಗೆ ಮಿಶ್ರಣ ಮಾಡಿ ಹಾನಿಯಾದ ಜಾಗಕ್ಕೆ ಹಚ್ಚಿಕೊಂಡು ನಂತರ 30 ನಿಮಿಷ ಬಿಟ್ಟು ಸ್ನಾನ ಮಾಡಬೇಕು. ಈ ರೀತಿ ಮಾಡೋದರಿಂದ ಬಿಳಿ ತೊನ್ನಿನ ಸಮಸ್ಯೆ ನಿವಾರಣೆ ಯಾಗುತ್ತದೆ.

ಅರಿಶಿನ ಮತ್ತು ಸಾಸಿವೆ ತೈಲವನ್ನು 6 ತಿಂಗಳಿನಿಂದ 1 ವರ್ಷದ ವರೆಗೆ ಹಾನಿಯಾದ ಜಾಗಕ್ಕೆ ಹಚ್ಚಬೇಕು. ಇನ್ನು ತುಳಸಿ ಎಲೆಗಳು ಹಾಗೂ ನಿಂಬೆರಸವನ್ನ ಹಚ್ಚಿಕೊಳ್ಳುವುದರಿಂದ ಬಿಳಿ ತೊನ್ನಿನ ಸಮಸ್ಯೆಗೆ ಉತ್ತಮ ಫಲಿತಾಂಶ ಪಡೆಯಬಹುದು.

ಹುಣಸೆ ಬೀಜದ ರಸವನ್ನು ಹಚ್ಚುವುದರಿಂದ ಚರ್ಮಕ್ಕೆ ಉಪಶಮನ ದೊರೆಯುತ್ತದೆ. ಇನ್ನು ಬೇವಿನ ರಸವನ್ನು ಹಚ್ಚುವುದರಿದಲೂ ಬಿಳಿ ತೊನ್ನು ದೂರವಾಗುತ್ತದೆ. ಈ ರೀತಿಯ ಹಲವಾರು ನೈಸರ್ಗಿಕ ಮನೆಮದ್ದನ್ನು ಬಳಸುವುದರಿಂದ ಬಿಳಿ ತೊನ್ನು ಸಮಸ್ಯೆಯು ಕ್ರಮೇಣ ವಾಸಿಯಾಗುತ್ತದೆ.

Leave a Comment

error: Content is protected !!