ನಿಮ್ಮ ಜೀವನದಲ್ಲಿ ಒಳ್ಳೆಯ ದಿನಗಳು ಬರುವ ಮುನ್ನ ಸೀಗುವ 7 ಸಂಕೇತಗಳಿವು.!

ಜೀವನ ಎಂದಮೇಲೆ ಸುಖ, ದುಃಖ ಸಾಮಾನ್ಯ. ಕೇವಲ ಸುಖ, ಕೇವಲ ದುಃಖ ಯಾರಿಗೂ ಇರುವುದಿಲ್ಲ. ಜೀವನದಲ್ಲಿ ಖುಷಿಯ ಸಮಯ ಬರುವಾಗ ಕೆಲವು ಸಂಕೇತಗಳು ಕಂಡುಬರುತ್ತವೆ. ಈ ಸಂಕೇತಗಳು ಯಾವುವು, ಹೇಗೆ ಗೋಚರವಾಗುತ್ತವೆ ಎಂಬುದನ್ನು ಈ ಲೇಖನದ ಮೂಲಕ ತಿಳಿಯೋಣ.

ಜೀವನದಲ್ಲಿ ಬರುವ ಸುಖ, ದುಃಖ ನೋವು-ನಲಿವು ಇವೆಲ್ಲವೂ ಜೀವನದ ಪ್ರಮುಖ ಅಂಗಗಳಾಗಿವೆ. ಪ್ರತಿಯೊಬ್ಬರ ಜೀವನದಲ್ಲೂ ಕಷ್ಟ-ಸುಖ ಇದ್ದಿದ್ದೆ, ಇವೆಲ್ಲವೂ ಸಮಯ ಚಕ್ರದ ಕಾರಣದಿಂದ ನಡೆಯುತ್ತದೆ. ಸಮಯಕ್ಕೆ ಎಲ್ಲರೂ ತಲೆಬಾಗಲೇಬೇಕು. ಕೆಲವು ಸೂಚನೆಗಳ ಮೂಲಕ ಮುಂದಿನ ಸಮಯ ನಮಗಾಗಿ ಒಳ್ಳೆಯದನ್ನು ಮಾಡುತ್ತದೆಯೋ, ಕೆಟ್ಟದ್ದನ್ನು ಮಾಡುತ್ತದೆಯೋ ಎನ್ನುವುದನ್ನು ತಿಳಿಯಬಹುದು. ನಾರದರು ವೈಕುಂಠ ಧಾಮಕ್ಕೆ ಹೋಗಿ ಭಗವಂತನಾದ ಶ್ರೀ ವಿಷ್ಣುವಿನ ಬಳಿ ಕೆಲವು ಸಂಕೇತಗಳ ಬಗ್ಗೆ ಕೇಳಿಕೊಂಡಿದ್ದರು ಆಗ ಶ್ರೀ ವಿಷ್ಣು ಕೆಲವು ಸಂಕೇತಗಳನ್ನು ತಾವೇ ತಲುಪಿಸುತ್ತಾರೆ ಇದರಿಂದ ಮುಂಬರುವ ಸಮಯದ ಬಗ್ಗೆ ತಿಳಿದುಕೊಳ್ಳಬಹುದು. ಕಣ್ಣುಗಳು ಬ್ರಾಹ್ಮೀ ಮುಹೂರ್ತದಲ್ಲಿ ತೆರೆದರೆ ಆಗ ಈಶ್ವರನ ಸ್ಮರಣೆಯಾದರೆ ಅಥವಾ ನೀವು ಯಾವುದೋ ಒಂದು ದಿಕ್ಕಿನಲ್ಲಿ ಹೋಗುವಂತೆ ಕಂಡುಬಂದರೆ ಯಶಸ್ಸಿನ ದಾರಿ ನಿಮಗಾಗಿ ತೆರೆಯಲಿದೆ ಎಂದು ಅರ್ಥ. ಈ ದಾರಿಯಲ್ಲಿ ಈಶ್ವರನೇ ಸ್ವತಃ ಸಹಾಯ ಮಾಡುತ್ತಾನೆ. ಯಾವುದೇ ಕಾರಣವಿಲ್ಲದೆ ಮನಸ್ಸು ಖುಷಿಯಾಗಿದ್ದರೆ, ಮುಖ ಸಂತೋಷದಿಂದ ಅರಳಿರುತ್ತದೆ ಈ ಸಂಕೇತಗಳು ನಿಮ್ಮ ಜೀವನದಲ್ಲಿ ಖುಷಿ, ಸಂತೋಷ ಬರುವ ಸಮಯವಾಗಿರುತ್ತದೆ. ಈ ಸ್ಥಿತಿಯಲ್ಲಿ ಈಶ್ವರನು ಮನಸ್ಸಿನಲ್ಲಿ ನೆಲೆಸುತ್ತಾನೆ.

ಗೋಮಾತೆ ಏನಾದರೂ ತಿನ್ನಲು ನಿಮ್ಮ ಮನೆಯ ದ್ವಾರದ ಬಳಿ ಬರುತ್ತಿದ್ದರೆ, ಮಂಗ ನಿಮ್ಮ ಮನೆಯಲ್ಲಿನ ಯಾವುದಾದರೂ ಒಂದು ವಸ್ತುವನ್ನು ತಾನೇ ಬಂದು ತೆಗೆದುಕೊಂಡು ಹೋದರೆ, ಬೆಕ್ಕು ನಿಮ್ಮ ಮನೆಯಲ್ಲಿ ಮರಿ ಹಾಕಿದರೆ, ಪಕ್ಷಿ ನಿಮ್ಮ ಮನೆ ಹತ್ತಿರ ಗೂಡು ಕಟ್ಟಿದರೆ ಇವು ಶುಭ ಸಂಕೇತಗಳಾಗಿವೆ. ಇವು ಮುಂಬರುವ ಸಮಯ ನಿಮ್ಮನ್ನು ಶಕ್ತಿಶಾಲಿಯಾಗಿ ಮಾಡುತ್ತದೆ ಎಂದು ಅರ್ಥ. ಇದರಿಂದ ಜೀವನದಲ್ಲಿ ಯೋಗ್ಯವಾದ ಪದವಿಯನ್ನು ಪಡೆಯುತ್ತಾರೆ. ಚಿಕ್ಕಮಕ್ಕಳಲ್ಲಿ ಈಶ್ವರ ನೆಲೆಸುತ್ತಾನೆ ಎಂಬ ನಂಬಿಕೆ ಇದೆ. ಯಾವುದೇ ಮಗು ನಿಮ್ಮನ್ನು ನೋಡಿಕೊಂಡು ನಗುತ್ತಿದ್ದರೆ ಅಥವಾ ನಿಮ್ಮ ಮನೆಗೆ ಅವರ ಆಗಮನವಾದರೆ. ಮಕ್ಕಳು ನಿಮ್ಮ ಮನೆಯ ಅಂಗಳದಲ್ಲಿ ಖುಷಿಯಿಂದ ಆಟವಾಡಿದರೆ ಶುಭ ಸಂಕೇತವಾಗಿದೆ ಜೀವನದಲ್ಲಿ ಸಂತೋಷ ತುಂಬಿಕೊಂಡಿರುತ್ತದೆ ಎಂದು ಅರ್ಥ. ಪೂಜೆ ತಟ್ಟೆಯಲ್ಲಿ ಹೂವು, ಮಾಲೆ, ಚಂದನ ಇರಬೇಕು.

ಈಶ್ವರನ ಮೂರ್ತಿ ನಿಮ್ಮನ್ನು ನೋಡಿ ನಗುವಂತೆ ಕಂಡುಬಂದರೆ ಮನೆಗೆ ಪ್ರಿಯ ಅತಿಥಿಗಳ ಆಗಮನವಾದರೆ, ಮನೆಗೆ ಚಿನ್ನ ಅಥವಾ ಬೆಳ್ಳಿ ಬಂದರೆ, ಮಹಿಳೆಯರ ಬಲಭಾಗ ಅಥವಾ ಪುರುಷರ ಎಡಭಾಗಗಳ ಅಂಗಗಳು ಹೊಡೆಯುವುದಾಗಲಿ ಆದರೆ ಶುಭದಾಯಕ. ಈ ಸಂಕೇತಗಳು ಶುಭ ಸಮಾಚಾರ ಬರುವ ಸಂಕೇತವಾಗಿರುತ್ತದೆ. ಮುಂಜಾನೆ ಯಾವುದಾದರೂ ಶುಭಕಾರ್ಯಕ್ಕೆ ಹೊರಟರೆ ಅಲ್ಲಿ ಗೋಮಾತೆ ದರ್ಶನವಾದರೆ, ಸಂತರು, ಋಷಿಗಳ ದರ್ಶನವಾದರೆ ಅವರ ಆಶೀರ್ವಾದವನ್ನು ನೀವು ಪಡೆದರೆ, ಶುಭ ಸಂಕೇತವಾಗಿದೆ. ಯಾವ ಕಾರ್ಯಕ್ಕಾಗಿ ಮನೆಯಿಂದ ಹೊರಟಿದ್ದೀರೋ ಆ ಕಾರ್ಯ ಸಫಲವಾಗುತ್ತದೆ ಎಂದು ಅರ್ಥ. ಸಾಯಂಕಾಲದ ಸಮಯದಲ್ಲಿ ಜಲದಿಂದ ತುಂಬಿದ ಪಾತ್ರೆ ಅಥವಾ ಹಾಲಿನಿಂದ ತುಂಬಿದ ಪಾತ್ರೆಯನ್ನು ಯಾರಾದರೂ ನಿಮಗೆ ತಂದುಕೊಟ್ಟರೆ ಅಥವಾ ಸಿಹಿ ತಿನಿಸುಗಳು ಸಿಕ್ಕರೆ ನಿಮ್ಮ ಜೀವನದಲ್ಲಿ ಶುಭ ಸಮಯ ಬರುತ್ತದೆ ಎಂದು ಅರ್ಥ. ಇವುಗಳಲ್ಲಿ ಯಾವುದೇ ಸೂಚನೆ ಕಂಡುಬಂದರೆ ಜೀವನದಲ್ಲಿ ಸುಖ, ಸಂತೋಷ ಕಾಣಬಹುದು.

Leave a Comment

error: Content is protected !!