ಗೊರವನಹಳ್ಳಿಯಲ್ಲಿನ ಶ್ರೀ ಮಹಾಲಕ್ಷ್ಮೀ ದೇವಿಯ ಪವಾಡ

ಗೊರವನಹಳ್ಳಿಯಲ್ಲಿನ ಮಹಾಲಕ್ಷ್ಮೀ ದೇವಾಲಯ ದ ರೋಚಕ ಕಥೆ ಗೊತ್ತಾ?ತುಮಕೂರು ಜಿಲ್ಲೆಯ ಗೋರಟಗೆರೆ ತಾಲೂಕಿನಲ್ಲಿರುವ ಗೊರವನಹಳ್ಳಿ ಲಕ್ಷ್ಮೀ ದೇವಸ್ಥಾನ ಧಾರ್ಮಿಕ ಶ್ರದ್ಥಾ ಕೇಂದ್ರವಾಗಿದೆ. ಈ ದೇವಾಲಯವು ತುಮಕೂರಿನಾದ್ಯಂತ ತುಂಬಾನೆ ಚಿರಪರಿಚಿತ ವಾಗಿದೆ.

ಲಕ್ಷ್ಮೀ ಎಂದಾಕ್ಷಣ ನಮಗೆಲ್ಲಾ ನೆನಪಿಗೆ ಬರೋದು ಕೊಲ್ಹಾಪುರದ ಲಕ್ಷ್ಮೀ. ಆದರೆ ಗೊರವನ ಹಳ್ಳಿ ಕರ್ನಾಟಕದ ಕೊಲ್ಹಪುರವಾಗಿ ಬೆಳಿತಾಯಿದೆ.ಈ ಸನ್ನಿದ್ಧಿಯು ಕರ್ನಾಟಕದ ಲಕ್ಷ್ಮೀ ಯ ಹಿರಿಮೆಗೆ ಪಾತ್ರ ಏಕೈಕ ದೇವಾಲಯ ಎಂಬ ಹೆಗ್ಗಳಿಕೆ ಪಾತ್ರವಾಗಿದೆ.

ಮಹಾಲಕ್ಷ್ಮೀ ಅನಾದಿ ಕಾಲದಿಂದಲೂ ತನ್ನ ಭಕ್ತರ ಕಷ್ಟ ನಿವಾರಿಸುತ್ತಾ ಬಂದಿರೋ ಭಾಗ್ಯ ಲಕ್ಷ್ಮೀ ಯಾಗಿದ್ದಾಳೆ. ಗೊರವನಹಳ್ಳಿಯಲ್ಲಿ ನೆಲಸುವ ಮೂಲಕ ಆ ಸ್ತಳವನ್ನು ಪುಣ್ಯಭೂಮಿ ಮಾಡಿದ ಮಹಾತಾಯಿ.ಗೊರವನಹಳ್ಳಿ ಲಕ್ಷ್ಮೀ ಅಂದರೆ ಸಾಕು ಭಕ್ತಿ ಭಾವ ಉಕ್ಕಿ ಹರಿಯುತ್ತದೆ. ಕಷ್ಟ ಅಂತಾ ಬಂದವರನ್ನ ಉದ್ಧರಿಸುತ್ತಾಳೆ .

ಕಲಿಯುಗದಲ್ಲಿ ಕಾಣಿಸುವ ಈ ತಾಯಿ ಕಂಗಾಲಾದವರಿಗೆ ಕರೋಣೆ ತೊರೆ ಸಲುಹುತ್ತಾಳೆ. ಇದೆ ಕಾರಣಕ್ಕೆ ಲಕ್ಷ ಲಕ್ಷ ಮಂದಿ ಈ ಸನ್ನಿದ್ಥಕ್ಕೆ ಬಂದು ಪುನೀತರಾಗುತ್ತಾರೆ. ಈ ದೇವಾಲಯ ದಲ್ಲಿ ಪ್ರತಿ ಮಂಗಳವಾರ, ಶುಕ್ರವಾರ, ಭಾನುವಾರಗಳಂದು ವಿಶೇಷ ಪೂಜೆ ನೇರವೇರುತ್ತೆ.ದೇವಾಲಯದ ವತಿಯಿಂದ ಪ್ರತಿದಿನ ಇಲ್ಲಿ ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಲಾಗುತ್ತಿದೆ. ದೇವಸ್ಥಾನದವರು ಇಲ್ಲಿ ಒಂದು ಕಲ್ಯಾಣಮಂಟಪ ನಿರ್ಮಿಸಿದ್ದಾರೆ. ಸಾರ್ವಜನಿಕರು ಅಗತ್ಯ ಹಣ ನೀಡಿ.ಇದರ ಉಪಯೋಗ ಪಡೆದುಕೊಳ್ಳಬಹುದು.

ಇನ್ನು ಮಹಾಲಕ್ಷ್ಮಿ ಇಲ್ಲಿ ಬಂದು ನೆಲಸಿದರ ಹಿಂದೆ ಒಂದು ರೋಚಕ ಕಥೆಯಿದೆ. ತುಮಕೂರಿನ ಕೋರಟಗೆರೆ ತಾಲೂಕಿನ ಅಬ್ಬಯ್ಯ ಅನ್ನುವವರಿಗೆ ಅ ಶರೀರವಾಣಿಯೊಂದು ಕೇಳಿಸುತ್ತೆ.ನಾನು ನಿಮ್ಮ ಮನೆಗೆ ಬರ್ತೀನಿ ಕರೆದುಕೊಂಡು ಹೋಗು ಅಂತಾ ಅಶರೀರವಾಣಿ ಹೇಳಿತ್ತು. ಅಶರೀರವಾಣಿ ಪದೇ ಪದೇ ಕೇಳ್ತನೇ ಇತ್ತು ಇದರಿಂದ ವಿಚಲಿತನಾದ ಅಬ್ಬಯ್ಯ ತನಗಾದ ಅನುಭವವನ್ನು ತನ್ನ ತಾಯಿಗೆ ಹೇಳ್ತಾರೆ. ಅ ಆಶರೀರವಾಣಿ ದೆವ್ವವಾದ್ರೆ ಅಲ್ಲೇ ಇರು, ದೇವರಾದ್ರೆ ಮನೆಗೆ ಬಾ ಅಂತಾ ಹೇಳಲು ಮಗನಿಗೆ ಹೇಳುತ್ತಾಳೆ. ಅದರಿಂದ ಅಶರೀರವಾಣಿ ಮತ್ತೆ ಕೇಳಿಸಿದಾಗ ತನ್ನ ತಾಯಿ ಹೇಳಿದಂತೆ ದೆವ್ವವಾದ್ರೆ ಅಲ್ಲೇ ಇರು, ದೇವರಾದ್ರೆ ಮನೆಗೆ ಬಾ ಅಂತಾ ಹೇಳಿದ.ಮಹಾಲಕ್ಷ್ಮಿ ಕೋಳದಿಂದ ಎದ್ದು ಬಂದು ಅಬ್ಬಯ್ಯ ನ ಮನೆಗೆ ಸೇರುತ್ತಾಳೆ. ಅಂದಿನಿಂದ ಗೊರವನಹಳ್ಳಿ ಪುಣ್ಯ ಪವಿತ್ರ ಕ್ಷೇತ್ರವಾಯಿತು.

1925 ರ ನಂತರ ಮಹಾಲಕ್ಷ್ಮಿ ದೇಗುಲ ಜೀರ್ಣೋದ್ಧಾರ ವಾಯಿತು. ಗ್ರಾಮಸ್ಥರ ಮನವೊಲಿಸಿ ಕಮಲಮ್ಮನವರು ದೇವಾಲಯ ನಿರ್ಮಾಣಮಾಡಿದ್ರೂ, ಇಂದರಿಂದ ಲಕ್ಷ್ಮೀ ಸಂತುಷ್ಟಳಾದಲು ಬೇಡಿ ಬಂದ ಲಕ್ಷಾಂತರ ಮಂದಿಯನ್ನು ಅನುಗ್ರಹಿಸುವ ಮೂಲಕ ಎಲ್ಲೆಡೆ ಮನೆಮಾತಾದ್ಲು.
ದೇವಾಲಯಕ್ಕೆ ಬರುವ ಭಕ್ತರು ಚಿನ್ನ, ಬೆಳ್ಳಿಯ ರೂಪದಲ್ಲಿ ಅನೇಕ ಕಾಣಿಕೆಗಳನ್ನು ನೀಡ್ತಾರೆ.

Leave a Comment

error: Content is protected !!