ದೇಹದ ತೂಕವನ್ನು ಕಡಿಮೆ ಮಾಡುವ ಜೊತೆಗೆ ಹತ್ತಾರು ಲಾಭವನ್ನು ನೀಡುವ ಸೋರೆಕಾಯಿ
ಸೋರೆಕಾಯಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಸಾಂಬಾರ್ ಪಲ್ಯ ಎಲ್ಲದಕ್ಕೂ ಸಾಮಾನ್ಯವಾಗಿ ಸೋರೆಕಾಯಿಯನ್ನು ಬಳಸುತ್ತಾರೆ. ಅಕ್ಕಿ ರೊಟ್ಟಿ ಜೊತೆ ಸೋರೆಕಾಯಿ ಪಲ್ಯ ಅದರ ಕಾಂಬಿನೇಶನ್ ಒಂಥರಾ ರುಚಿ. ಆದರೆ ಈ ಸೋರೆಕಾಯಿಯನ್ನು ಅಡುಗೆಗೆ ಮಾತ್ರ ಬಳಸುತ್ತಾರೆ ಎಂದರೆ ಅದು ದೊಡ್ಡ ತಪ್ಪೇ ಆಗುತ್ತದೆ. ಸೋರೆಕಾಯಿ ಅಲ್ಲಿ ಇರುವ ಆರೋಗ್ಯಕರ ಅಂಶಗಳನ್ನು ತಿಳಿದುಕೊಂಡರೆ, ನಾವು ಬರೀ ಅಡುಗೆಗೆ ಬಳಸುವ ಸೋರೆಕಾಯಿ ಯಲ್ಲಿ ಇಷ್ಟೊಂದು ಆರೋಗ್ಯಕಾರಿ ಗುಣಗಳು ಇವೆಯಾ ಎಂದು ಗಾಬರಿ ಆಗುವುದು ಖಂಡಿತ. ಹಾಗಿದ್ರೆ ಸೋರೆಕಾಯಿ ಇಂದ ನಮ್ಮ ದೇಹಕ್ಕೆ ಏನೆಲ್ಲಾ ಆರೋಗ್ಯಕರ ಲಾಭಗಳು ಇವೆ ಎಂಬುದನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ದೇಹದ ತೂಕ ಕಡಿಮೆ ಮಾಡಲು ಸೋರೆಕಾಯಿ ಸಹಾಯ ಮಾಡುತ್ತದೆ. ಪ್ರತೀ ದಿನ ಒಂದು ಲೋಟ ಸೋರೆಕಾಯಿ ಜ್ಯೂಸ್ ಕುಡಿಯುವುದರಿಂದ ಹಾಗೂ ಅದರ ಜೊತೆ ಮಿತವಾದ ವ್ಯಾಯಾಮ ಕೂಡ ಮಾಡುವುದರಿಂದ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ಬಿಸಿಲಿನಲ್ಲಿ ದೇಹವನ್ನು ತಂಪಾಗಿ ಇಡಲು ಎಲ್ಲರೂ ಹೊರಗೆ ಸಿಗುವ ತಂಪು ಪಾನೀಯ ಸೇವಿಸುವುದು ರೂಢಿ ಆಗಿಬಿಟ್ಟಿದೆ. ಇದರಿಂದ ಸ್ವಲ್ಪ ಮಟ್ಟಿಗೆ ನಮ್ಮ ದೇಹ ತಂಪು ಆಗಬಹುದು ಆದರೆ ಬಹು ಬೇಗ ನಮಗೆ ಬಾಯಾರಿಕೆ ಆಗುತ್ತದೆ. ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಆದರೆ ಸೋರೆಕಾಯಿ ಜ್ಯೂಸ್ ಕುಡಿಯುವುದರಿಂದ ನಮ್ಮ ದೇಹಕ್ಕೆ ತಂಪು ಆಗತ್ತೆ ಜೊತೆಗೆ ಆರೋಗ್ಯಕರವೂ ಹೌದು. ಒಂದು ಲೋಟ ಸೋರೆಕಾಯಿ ಜ್ಯೂಸ್ ಗೆ ಸ್ವಲ್ಪ ನಿಂಬೆರಸ ಸೇರಿಸಿ ಪ್ರತಿ ದಿನವೂ ಕುಡಿಯುವುದರಿಂದ ಉರಿಮೂತ್ರ ಕಡಿಮೆ ಆಗುತ್ತದೆ. ಮಧುಮೇಹ ಇರುವವರು ಸಹ ಸೋರೆಕಾಯಿ ಜ್ಯೂಸ್ ಕುಡಿಯುವುದರಿಂದ ಮಧುಮೇಹವನ್ನು ನಿಯಂತ್ರಣದಲ್ಲಿಡಬಹುದು.
ಸೋರೆಕಾಯಿ ಯಲ್ಲಿ ನಾರಿನ ಅಂಶ ಮತ್ತು ಪ್ರೊಟೀನ್ ಹೆಚ್ಚಾಗಿ ಇರುತ್ತದೆ. ಇದನ್ನು ಸೇವಿಸುವುದರಿಂದ ನಮ್ಮ ದೇಹಕ್ಕೆ ಸಾಕಷ್ಟು ಶಕ್ತಿ ದೊರೆಯುತ್ತದೆ. ಜೀರ್ಣ ಕ್ರಿಯೆಗೆ ಸಹಕರಿಸುತ್ತದೆ. ಸೋರೆಕಾಯಿ ಯಲ್ಲಿ ಫೈಬರ್ ಅಂಶ ಮತ್ತು ನೀರಿನ ಅಂಶ ಹೆಚ್ಚು ಇರುವುದರಿಂದ ಇದನ್ನು ಬೆಳಿಗ್ಗೆ ಜ್ಯೂಸ್ ಮಾಡಿ ಕುಡಿಯುವುದರಿಂದ ನಮ್ಮ ದೇಹಕ್ಕೆ ಫೈಬರ್ ಅಂಶ ಸಿಗುತ್ತೆ ಮತ್ತು ನಮ್ಮ ದೇಹದಲ್ಲಿ ಇರುವ ಕೊಬ್ಬು ಕೂಡಾ ಕಡಿಮೆ ಆಗುತ್ತದೆ. ವಾಂತಿ ಮತ್ತು ಬೇದಿ ಆದಾಗ ನಮ್ಮ ದೇಹ ತುಂಬಾ ಸುಸ್ತು ಆಗತ್ತೆ ಆಗ ಸೋರೆಕಾಯಿ ಅನ್ನು ಜ್ಯೂಸ್ ಮಾಡಿ ಕುಡಿಯುವುದರಿಂದ ವಾಂತಿ ಮತ್ತು ಬೇದಿ ಕಡಿಮೆ ಆಗುತ್ತದೆ. ರಾತ್ರಿ ಹೊತ್ತು ನಿದ್ರೆ ಸರಿಯಾಗಿ ಆಗದೆ ಇದ್ದಲ್ಲಿ ಸೋರೆಕಾಯಿ ಜ್ಯೂಸ್ ಗೆ ಸ್ವಲ್ಪ ಸಾಸಿವೆ ಎಣ್ಣೆ ಬೆರೆಸಿ ಕುಡಿಯುವುದು ಒಳ್ಳೆಯದು.
ಸೋರೆಕಾಯಿ ಜ್ಯೂಸ್ ಎಲ್ಲರಿಗೂ ಕುಡಿಯೋಕೆ ಸೇರದೆ ಇರಬಹುದು ಹಾಗಾಗಿ ಇದನ್ನು ಬೇರೆ ಬೇರೆ ರೀತಿಯಲ್ಲಿ ಸೇವಿಸಬಹುದು. ಹೀಗಿರುವವರು ಸೋರೆಕಾಯಿ ಸಾಂಬಾರ್, ಪಲ್ಯ, ಮಜ್ಜಿಗೆ ಹುಳಿ ಕೂಡ ಮಾಡಿ ಸೇವಿಸಬಹುದು. ಇತ್ತೀಚಿಗೆ ಸೋರೆಕಾಯಿ ಹಲ್ವಾ ಕೂಡ ಮಾಡಲಾಗುತ್ತೆ. ಹಾಗಾಗಿ ನಿಮಗೆ ಸೋರೆಕಾಯಿಯನ್ನ ನೇರವಾಗಿ ಜ್ಯೂಸ್ ಮಾಡಿ ಕುಡಿಯಲು ಸೇರದೆ ಇರುವವರು ಹೀಗೂ ಕೂಡ ಸೇವಿಸಬಹುದು. ಬೇರೆ ಬೇರೆ ರೀತಿಯಲ್ಲಿ ಖಾದ್ಯಗಳನ್ನು ತಯಾರಿಸಿ ಸೇವಿಸಬಹುದು. ಸೋರೆಕಾಯಿ ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು.