ದಯವಿಟ್ಟು ಶೇರ್ ಮಾಡಿ ಗೆಳೆಯರೇ

ಸದೃಢ ಶರೀರವಿಲ್ಲದೆ ತುಂಬಾ ತೆಳ್ಳಗಿರುವವರು ಅನೇಕ ಅವಮಾನ ಹಾಗೂ ತೊಂದರೆಗಳಿಗೆ ಒಳಗಾಗುತ್ತಾರೆ. ತೂಕ ಹೆಚ್ಚಾದರೆ ಎಷ್ಟು ಸಮಸ್ಯೆಯೋ, ತೂಕ ಕಿಡಿಮೆಯಾದರು ಅಷ್ಟೇ ಸಮಸ್ಯೆ. ತೂಕ ಹೆಚ್ಚಿಸಿಕೊಳ್ಳಲು ಸಾಕಷ್ಟು ಹರಸಾಹಸ ಪಡಬೇಕಾಗುತ್ತದೆ.

ಕೆಲವು ಜಂಗ್ ಫುಡ್ ಗಳನ್ನು ಅಧಿಕವಾಗಿ ಸೇವಿಸಿದರೆ ಕೊಬ್ಬು ಬೆಳೆಯುತ್ತದೆ ಹೊರತು ತೂಕ ಹೆಚ್ಚಾಗುವುದಿಲ್ಲ. ಹಾಗಾಗಿ ಜೀವನ ಶೈಲಿಯನ್ನ ಬದಲಾಯಿಸಿಕೊಂಡು ತೂಕವನ್ನು ನೈಸರ್ಗಿಕವಾಗಿ ತೂಕ ಹೆಚ್ಚಿಸಿಕೊಳ್ಳವುದು ಉತ್ತಮ.ಅದಕ್ಕೆ ಇಲ್ಲಿದೆ ಕೆಲವು ಸಲಹೆಗಳು

ಕೆನೆ ಭರಿತ ಹಾಲಿನ ಸೇವನೆ: ಹಾಲು ಕ್ಯಾಲ್ಸಿಯಂ ಹೆಚ್ಚಿಸುವ ಗುಣ ಹೊಂದಿದೆ. ಹಾಗಾಗಿ ಕೆನೆ ಭರಿತ ಹಾಲಿನೊಂದಿಗೆ ಚಕೋಸ್ ಅಥವಾ ಓಟ್ಸ್ ಧಾನ್ಯಗಳನ್ನು ಬೆರಸಿ ಪ್ರತಿನಿತ್ಯ ಕುಡಿದರೆ ಅಲ್ಪಾವಧಿಯಲ್ಲಿ ನಿಮ್ಮ ದೇಹದ ತೂಕವನ್ನು ಹೆಚ್ಚಿಸಿಕೊಳ್ಳಬಹುದು.

ಆಲೂಗೆಡ್ಡೆ ಸೇವನೆ: ಆಲೂಗೆಡ್ಡೆ ಅಂದ ತಕ್ಷಣ ಸಾಕಷ್ಟು ಜನ ಒಡಿಹೋಗ್ತಾರೆ ಯಾಕಂದ್ರೆ ಇದರಲ್ಲಿ ಹೆಚ್ಚಿನ ಕೊಬ್ಬಿನಾಂಶ ಇರುತ್ತದೆ.. ಆದರೆ ಇದು ಸಂಕೀರ್ಣ ಸಕ್ಕರೆಗಳುಳ್ಳ ಅತ್ಯುತ್ತಮ ಮೂಲವಾಗಿದ್ದು, ಇದರ ಸೇವನೆಯಿಂದ ಪಿಷ್ಟ, ನಾರು, ವಿಟಮಿನ್ ಗಳನ್ನು ಪಡೆದು ತೂಕ ಹೆಚ್ಚಿಸಿಕೊಳ್ಳಬಹುದು.

ಹಣ್ಣುಗಳ ಸೇವನೆ: ಪಪ್ಪಾಯ, ಬಾಳೆಹಣ್ಣು, ಅನಾನಸ್, ಸೇಬು ನಂತಹ ಹಣ್ಣುಗಳು ತೂಕ ಹೆಚ್ಚಿಸಿ ಕೊಳ್ಳುವವರಿಗೆ ಉತ್ತಮ ಆಯ್ಕೆಗಳಿವು. ಇಂತಹ ಸಿಹಿಭರಿತ ಹಣ್ಣಗಳನ್ನು ಸಲಾಡ್ ಹಾಗೂ ಜ್ಯೂಸ್ ಮಾದರಿಯಲ್ಲಿ ಸೇವಿಸುವುದರಿಂದ ತೂಕವನ್ನು ಹೆಚ್ಚಿಸಿಕೊಳ್ಳಲು ಸಹಾಯಕ

ಮೊಟ್ಟೆಗಳ ಸೇವನೆ : ಮೊಟ್ಟೆ ಗಳು ಕ್ಯಾಲರಿ ಭರಿತವಾಗಿದ್ದು, ಇದರ ಸೇವನೆಯಿಂದ ದೇಹಕ್ಕೆ ಬೇಕಾದ ಕ್ಯಾಲರಿಯನ್ನು ಪಡೆಯಬಹುದು. ತೂಕ ಹೆಚ್ಚಿಸುವಲ್ಲಿ ಮೊಟ್ಟೆಗಳು ಸಹಾಯವಾಗಿದ್ದು, ಮೊಟ್ಟೆಯನ್ನು ಹಸಿಯಾಗಿ ಅಥವಾ ಬೇಯಿಸಿ ತಿನ್ನುವುದು ಸೂಕ್ತ.

ಡ್ರೈ ಫ್ರೂಟ್ಸ್ ಸೇವನೆ: ಡ್ರೈ ಫ್ರೂಟ್ಸ್ ಗಳಲ್ಲಿ ಪೋಷಕಾಂಶಗಳು ಹಾಗೂ ನಾರಿನಾಂಶ ಸಮೃದ್ಧವಾಗಿರುತ್ತದೆ. ಆದ್ದರಿಂದ ಬಾದಾಮಿ, ಒಣದ್ರಾಕ್ಷಿ, ಗೊಡಂಬಿ,ಇವುಗಳನ್ನೇಲ್ಲ ಸೇರಿಸಿ ಪ್ರತಿದಿನ ಒಂದು ಕಪ್ ಸೇವಿಸಿದರೆ ನಿಮ್ಮ ತೂಕ ಹೆಚ್ಚಾಗುತ್ತದೆ. ಈ ಐದು ಪದಾರ್ಥಗಳಿಂದ ಸುಲಭವಾಗಿ, ಆರೋಗ್ಯಕರ ರೀತಿಯಲ್ಲಿ ನಿಮ್ಮತೂಕವನ್ನು ಹೆಚ್ಚಿಸಿಕೊಳ್ಳಬಹುದು.

By admin

Leave a Reply

Your email address will not be published.