ಈ ಕೋಳದಲ್ಲಿ ವಿಷ್ಣುಮೂರ್ತಿ ತೇಲುತ್ತಿದೆ, ಆದರೆ ಪ್ರತಿಬಿಂಬ ಮಾತ್ರ ಮಹಾಶಿವನದ್ದು ಏನಿದರ ಅಚ್ಚರಿ!

ನಾವೆಲ್ಲಾ ಪವಿತ್ರ ಸ್ಥಳ, ದೇವಾಲಯಗಳ ಬಗ್ಗೆ ಕೇಳಿರುತ್ತೇವೆ ಹಾಗೂ ಭೇಟಿ ನೀಡಿ ದೇವರ ದರ್ಶನ ಪಡೆದಿರುತ್ತೇವೆ. ಇದಲ್ಲದೆ ಕೆಲವು ವಿಶೇಷ ದೇವಾಲಯಗಳು ಕುತೂಹಲ ಮತ್ತು ಅಚ್ಚರಿ ಮೂಡಿಸಿವೆ. ಚಕಿತಗಳನ್ನು ಸೃಷ್ಟಿ ಸುತ್ತಿರುವ ಹಲವಾರು ದೇವಾಲಯಗಳು ಭೂಮಿ ಮೇಲಿದೆ. ಅದರಂತೆ ಅಚ್ಚರಿ ಮೂಡಿಸುತ್ತಿರುವ ದೇವಾಲಯದ ಬಗ್ಗೆ ಇಂದು ತಿಳಿಯೋಣ.

ಈ ದೇವಸ್ಥಾನದ ಕೋಳದಲ್ಲಿ ಸರ್ಪಗಳ ಮೇಲೆ ಮಲಗಿದ್ದಾನೆ ಸಾಕ್ಷಾತ್ ವಿಷ್ಣುದೇವ.ಆದರೆ ಈ ಕೋಳದಲ್ಲಿನ ಪ್ರತಿಬಿಂಬ ಮಾತ್ರ ಮಹಾಶಿವನದ್ದಾಗಿದೆ ಏನಿದರ ಅಚ್ಚರಿ ಅಂತೀರ ಮುಂದೆ ಈ ಸ್ಟೋರಿ ಓದಿ. ಸಾಮಾನ್ಯವಾಗಿ ದೇವಸ್ಥಾನದ ಗರ್ಭ ಗುಡಿಯಲ್ಲಿ ದೇವರು ವಾಸ ವಾಗಿರೋದನ್ನ ನೋಡಿದ್ದೇವೆ. ಆದರೆ ಗರ್ಭಗುಡಿಯ ಬದಲು ನೀರಿನಲ್ಲಿ ದೇವರ ಮೂರ್ತಿ ತೇಲುವುದನ್ನು ನೋಡಿದ್ದೀರಾ..? ಭಾರತದಲ್ಲಿ ಹರವು ವಿಶೇಷವಾದ ಮಂದಿರಗಳಿವೆ ಆದರೆ ಈ ಪವಿತ್ರವಾದ ಮಂದಿರ ಇರೋದು ನೇಪಾಳದ ಕಠ್ಮಂಡುವಿನಿಂದ 10 ಕೀ.ಲೋ ಮೀಟರ್ ದೂರದಲ್ಲಿದೆ ಅಚ್ಚರಿದಾಯಕ ಶ್ವೇತ ಮಂದಿರ.

ಈ ದೇವಸ್ಥಾನಕ್ಕೆ ಸುಮಾರು 1300 ವರ್ಷಗಳ ಇತಿಹಾಸವಿದೆ. ಇದು ನೇಪಾಳದಲ್ಲಿ ತುಂಬಾ ವಿಶೇಷವಾಗಿರುವ ಮತ್ತು ದೊಡ್ಡದಾದ ಮಂದಿರ. ಈ ದೇವಾಲಯದಲ್ಲಿ ವಿಷ್ಣು ಮೂರ್ತಿನಾಗ ಸರ್ಪಗಳ ಮೇಲೆ ಮಲಗಿದ್ದಾನೆ. ಅತೀ ಸುಂದರ ಈ ದೇವಾಲಯ ನೇಪಾಳದಲ್ಲಿ ತುಂಬಾನೇ ಹೆಸರುವಾಸಿ. ಈ ದೇವಾಲಯದಲ್ಲಿನ ವಿಷ್ಣುವಿನ ಕಲ್ಲಿನ ವಿಗ್ರಹದ ಉದ್ದ 13 ಮೀಟರ್ ಅಗಲ 5 ಮೀಟರ್. ಇಷ್ಟು ಭಾರದ ವಿಗ್ರಹ ನೀರಿನಲ್ಲಿ ಮುಳುಗದೆ ತೇಲುತ್ತದೆ. ಈ ದೇವಸ್ಥಾನವನ್ನು ಬೂಡಾ ನೀಲಕಂಠ ದೇವಾಲಯ ಅಂತಲೂ ಕರೆಯುತ್ತಾರೆ. ಏಕೆಂದರೆ ವರ್ಷದ ಒಂದು ದಿನ ಸಾಕ್ಷಾತ್ ಪರಶಿವನೇ ಇಲ್ಲಿ ದರ್ಶನ ನೀಡುತ್ತಾನೆ.

ನೀರಿನ ಮೇಲೆ ವಿಷ್ಣು ಮಲಗಿದ್ದರೆ ನೀರಿನ ಕೆಳಗೆ ಅಡಿಪಾಯದಂತೆ ಮಹಾಶಿವ ನೆಲೆಸಿದ್ದಾನೆ, ಇದರ ಹಿಂದೆ ಒಂದು ಪೌರಾಣಿಕ ಕಥೆಯಿದೆ. ಕಥೆಯನುಸಾರ ಈ ಸಮುದ್ರದಿಂದ ವಿಷಯು ಹೊರಬಂದಿತ್ತು, ಸೃಷ್ಟಿ ಯನ್ನು ಕಾಪಾಡಲು ಸಾಕ್ಷಾತ್ ಪರಶಿವನೇ ಈ ಘೋರವಿಷವನ್ನು ತಾನೇ ತನ್ನ ಕಂಠದಲ್ಲಿ ಸೇವಿಸುತ್ತಾನೆ ಆಗ ಶಿವನ ಕಂಠ ನೀಲಿ ಬಣ್ಣವಾಗುತ್ತದೆ. ಇದೇ ಕಾರಣದಿಂದ ಶಿವನನ್ನು ನೀಲಕಂಠ ಎಂದು ಕರೆಯಲಾಗುತ್ತದೆ.

ಈ ವಿಷದಿಂದ ಶಿವನ ಗಂಟಲು ಉರಿಯತೊಡಗಿತು ಆದ್ದರಿಂದ ಕಠ್ಮಂಡುವಿನ ಉತ್ತರ ದಿಕ್ಕಿನಲ್ಲಿ ತನ್ನ ತ್ರಿಶೋಲದಿಂದ ಒಂದು ಸರೋವರ ನಿರ್ಮಿಸಿ, ಆ ನೀರಿನ್ನ ಕುಡಿದು ತನ್ನ ಗಂಟಲನ್ನು ತಂಪಾಗಿಸಿಕೊಂಡ ಪರಶಿವನು ಈಗಲೂ ಸಹ ಆ ಸರೋವರವನ್ನ ಸಾಯಿಕುಂಡ ಎಂದು ಕರೆಯಲಾಗುತ್ತದೆ. ನೇಪಾಳದ ಕಠ್ಮಂಡುವಿಗೆ ಪ್ರವಾಸಕ್ಕೆ ಹೋಗುವವರು ತಪ್ಪದೇ ಈ ಬೂಡಾ ನೀಲಕಂಠ ದೇವಾಲಯಕ್ಕೆ ಭೇಟಿ ನೀಡಿ.

Leave a Comment

error: Content is protected !!