ಯಾವ ದಿಕ್ಕಿನಲ್ಲಿ ತಲೆಹಾಕಿ ಮಲಗಿದ್ರೆ ಉತ್ತಮ ಗೊತ್ತೇ

ಯಾವ ರಾಶಿಯವರು ಹೇಗೆ ಇರ್ತಾರೇ ,ಅವರ ಜೀವನ ಹೇಗಿರುತ್ತೆ, ಅವರು ಮಾಡಿಕೊಳ್ಳುವ ಬದಲಾವಣೆಗಳೇನು ಅಂತಾ ನಾವು ಈಗಿನವರೆಗೂ ತಿಳಿದುಕೊಂಡಿದ್ದೇವೆ.ಆದರೆ ಮಾವ ದಿಕ್ಕಿನಲ್ಲಿ ತಲೆ ಹಾಕಿ ಮಲಗಿದರೆ ಸೂಕ್ತ ಅನ್ನೋದು ರಾಶಿಭವಿಷ್ಯದಲ್ಲಿ ಹೇಳಲಾಗುತ್ತಾ ಇಲ್ಲವಲ್ಲ.

ಉತ್ತಮ ಆಹಾರ ನಮ್ಮ ದೇಹಕ್ಕೆ ತುಂಬಾ ಮುಖ್ಯ ಇದೇ ರೀತಿ ನಿದ್ದೆ ಕೂಡ ಅವಶ್ಯಕ ವಾಗಿರುತ್ತದೆ. ಅಂತಹ ನಿದ್ದೆ ಕಳೆದುಕೊಂಡು ಬಿಟ್ರೆ ಒತ್ತಡ, ನಿರಾಸಕ್ತಿ, ಉಂಟಾಗುತ್ತದೆ. ಯಾವ ದಿಕ್ಕಿಗೆ ತಲೆ ಹಾಕಿ ಮಲಗಬೇಕು ಅನ್ನೋದಕ್ಕೆ ತುಂಬಾ ಜನರ ಹತ್ತಿರ ಉತ್ತರನೇ ಇರೋದಿಲ್ಲ. ವಾಸ್ತು ಶಾಸ್ತ್ರ ಹಾಗೂ ವೈಜ್ಞಾನಿಕದಲ್ಲಿರುವ ಇದಕ್ಕೆ ಇರುವ ಉತ್ತರವನ್ನು ತಿಳಿಯೋಣ.

ಉತ್ತರ ದಿಕ್ಕಿಗೆ ಯಾವುದೇ ಕಾರಣಕ್ಕೂ ತಲೆ ಹಾಕಿ ಮಲಗಬಾರದು. ವಾಸ್ತುಶಾಸ್ತ್ರ ದ ಪ್ರಕಾರ ಈ ದಿಕ್ಕಿಗೆ ತಲೆ ಹಾಕಿ ಮಲಗಿದರೆ ಕೆಟ್ಟ ಕನಸುಗಳು ಬೀಳುತ್ತದೆ.ಅದರ ಜೊತೆಗೆ ಬಹಳ ತೊಂದರೆಗಳು ಆಗುತ್ತದೆ.ಇನ್ನು ವೈಜ್ಞಾನಿಕವಾಗಿ ಹೇಳುವುದಾದರೆ ಭೂಮಿಯ ಆಯಸ್ಕಾಂತದ ರೇಖೆ ಉತ್ತರ ದಕ್ಷಿಣದಲ್ಲಿ ಸಂಚರಿಸುತ್ತದೆ.ತಲೆಯನ್ನು ಉತ್ತರಕ್ಕೆ ಇಟ್ಟಾಗ ಮಿದುಳು ಆಯಸ್ಕಾಂತದಿಂದ ಆಯಾಸ ವಾಗುತ್ತದೆ.

ಮನೆಯ ಹಿರಿಯರು, ಯಜಮಾನರು ದಕ್ಷಿಣ ದಿಕ್ಕಿಗೆ ತಲೆ ಹಾಕಿ ಮಲಗಿದರೆ ಉತ್ತಮ ಎಂದು ಹೇಳಲಾಗುತ್ತಿದೆ.ಹಲವು ಸಂಸ್ಕೃತಿ ಪ್ರಕಾರ ಈ ದಿಕ್ಕಿಗೆ ತಲೆ ಹಾಕಿ ಮಲಗೋದು ಸರಿ ಎನ್ನುವುದಾಗಿದೆ. ವೈಜ್ಞಾನಿಕ ವಾಗಿ ಈ ದಿಕ್ಕಿನಲ್ಲಿ ಮಲಗಿದರೆ ಶ್ರೀಮಂತಿಕೆ ಹೆಚ್ಚಾಗುತ್ತದೆ ಎನ್ನುವುದಾಗಿದೆ.

ಪೂರ್ವ ದಿಕ್ಕಿಗೆ ತಲೆ ಹಾಕಿ ಮಲಗಿದರೆ ಅನೇಕ ಅನುಕೂಲಗಳಿವೆ ಎಂದು ಹೇಳಲಾಗುತ್ತದೆ.ಹೊಸ ಚೈತನ್ಯ ಹಾಗೂ ಸಾಮರ್ಥ್ಯವು ವೃದ್ಧಿಯಾಗುತ್ತದೆ ಎಂದು ಹೇಳಲಾಗುತ್ತದೆ.ವೈಜ್ಞಾನಿಕವಾಗಿ ವಿದ್ಯಾರ್ಥಿಗಳ ಏಕಾಗ್ರತೆಗೆ ಪೂರ್ವ ದಿಕ್ಕು ಸೂಕ್ತವಾಗಿದೆ.

ಪಶ್ಚಿಮಕ್ಕೆ ತಲೆ ಹಾಕಿ ಮಲಗೋದು ತುಂಬಾ ಒಳ್ಳೆಯದೇನು ಇಲ್ಲ.ಆದ್ರೂ ಸಹ ಯಶಸ್ಸು ಬೇಕು ಎಂದು ಬಯಸೋರಿಗೆ ಈ ದಿಕ್ಕು ಅನುಕೂಲ ಕಾರಿಯಾಗಿದೆ. ನಕಾರಾತ್ಮಕ ಪರಿಣಾಮಗಳಿಂದ ದೂರ ಇರಲು ಈ ದಿಕ್ಕು ಸಹಕಾರಿಯಾಗಿದೆ.

ಒಳ್ಳೆಯ ನಿದ್ರೆಗೆ ಕೆಲವು ಟಿಪ್ಸ್ ಗಳು
ಒಳ್ಳೆಯ ನಿದ್ರೆ ಬರಬೇಕು ಅಂದ್ರೆ ಬೀಮ್ ಗಳ ಕೆಳಗೆ ಮಲಗಬೇಡಿ. ಯಾವುದೇ ಭಾರವಾದ ವಸ್ತುವಿನ ಮೇಲೆ ಮಲಗಬೇಡಿ ಇದರಿಂದ ಒತ್ತಡ ಹೆಚ್ಚಾಗಿ ಮಾನಸಿಕ ಖಿನ್ನತೆ ಅಧಿಕವಾಗುತ್ತದೆ. ಕೋಣೆಯ ಮೂಲೆಗಳಲ್ಲಿ ಹಾಸಿಗೆ ದಿಂಬುಗಳನ್ನ ಇಡಬೇಡಿ ಇದರಿಂದ ನಿಮ್ಮ ದೇಹದ ಸಾಮರ್ಥ್ಯ ಕಡಿಮೆ ಆಗುತ್ತದೆ. ನೀವು ಮಲಗುವ ಮಂಚದ ಕೆಳಗೆ ಯಾವುದೇ ವಸ್ತುಗಳನ್ನು ಇಡಬೇಡಿ.ಇದರಿಂದ ನಿಮ್ಮ ದೇಹದ ಸಮತೋಲನ ಏರುಪೇರಾಗುತ್ತದೆ

Leave a Comment

error: Content is protected !!