ಸಿಮ್ಲಾದಲ್ಲಿ ಬೆಳೆಯುವ ಸೇಬನ್ನು ಕರ್ನಾಟಕದಲ್ಲಿ ಬೆಳೆದು ಯಶಸ್ಸು ಕಂಡ ರೈತ

ನಾವು ಕಾಶ್ಮೀರಿ ಆಪಲ್, ಶಿಮ್ಲಾ ಆಪಲ್, ಊಟಿ ಆಪಲ್ ಅಂತೆಲ್ಲ ಕೇಳಿರ್ತೀವಿ. ಆದ್ರೆ ಇನ್ನು ಮುಂದೆ ನಾವು ಕರ್ನಾಟಕದ ಆಪಲ್, ಚಿಕ್ಕಬಳ್ಳಾಪುರದ ಆಪಲ್ ಅನ್ನೋದನ್ನೂ ಕೂಡ ಕೇಳ್ತೀವಿ. ದೂರದ ಊರು ಶಿಮ್ಲಾ ದಲ್ಲಿ ಬೆಳೆಯುವ ಸೇಬನ್ನು ಬರದ ನಾಡು ಚಿಕ್ಕಬಳ್ಳಾಪುರದಲ್ಲಿ ರೈತರೊಬ್ಬರು ಬೆಳೆದು ಸೈ ಎನಿಸಿಕೊಂಡಿದ್ದಾರೆ. ಈ ಕುರಿತಾದ ಒಂದು ಮಾಹಿತಿ ಇದೆ ನೋಡಿ.

ಹಚ್ಚ ಹಸಿರಿನಿಂದ ಕೆಂಪು ಬಣ್ಣಕ್ಕೆ ತಿರುಗುತ್ತಿರುವ ಸೇಬುಗಳು. ದೂರದ ಊರಿನಲ್ಲಿ ಬೆಳೆಯುತ್ತಿದ್ದ ಸೇಬನ್ನು ಚಿಕ್ಕಬಳ್ಳಾಪುರದಲ್ಲಿನ ರೈತರೊಬ್ಬರು ಬೆಳೆದು ಯಶಸ್ವಿ ಆಗಿದ್ದರೆ. ಬರದ ನಾಡು ಚಿಕ್ಕಬಳ್ಳಾಪುರ ಜಿಲ್ಲೆಯ ಮರಳಕುಂಟೆ ಗ್ರಾಮದ ಪ್ರಗತಿ ಪರ ರೈತ ನಾರಾಯಣ ಸ್ವಾಮಿ ಅವರು ಸೇಬು ಬೆಳೆದು ಇದೀಗ ಫಲ ಕಾಣುತ್ತಾ ಇದ್ದಾರೆ. ನಾರಾಯಣ ಸ್ವಾಮಿ ಒಂದು ರೀತಿಯಲ್ಲಿ ವಿಭಿನ್ನ. ಏನೇ ಬೆಳೆ ಬೆಳೆದರೂ ಸಹ ವಿಭಿನ್ನ ರೀತಿಯಲ್ಲಿ ಹೊಸದಾದ ಬೆಳೆಯನ್ನು ಬೆಳೆಯುತ್ತಾರೆ. ಹೀಗೇ ಇದುವರೆಗೂ ಬೆಳೆದ ಎಲ್ಲಾ ಬೆಳೆಗಳಲ್ಲೂ ಯಶಸ್ಸು ಕಂಡಿದ್ದಾರೆ. ದ್ರಾಕ್ಷಿ, ಹೈನುಗಾರಿಕೆ, ಕುರಿ, ಮೇಕೆ, ಹಸು ಸಾಕಾಣಿಕೆ, ಡ್ರಾಗನ್ ಫ್ರೂಟ್ ಸೇರಿದಂತೆ 10 ಎಕರೆಯ ಜಮೀನಿನಲ್ಲಿ ಬೇರೆಯವರ ಜಮೀನನ್ನೂ ಬಾಡಿಗೆ ಪಡೆದು ಕೃಷಿಯನ್ನೇ ಕಾಯಕವಾಗಿಸಿಕೊಂಡು ಖುಷಿ ಕಾಣುತ್ತಾ ಇದ್ದಾರೆ. ಇದೀಗ ತನ್ನ ಒಂದು ಎಕರೆ ಜಮೀನಿನಲ್ಲಿ 500 ಕಾಶ್ಮೀರಿ ಆಪಲ್ ಗಳನ್ನು ಬೆಳೆಸಿ ಫಲವನ್ನೂ ಕೂಡಾ ಪಡೆದು ರೈತ ಮನಸ್ಸು ಮಾಡಿದರೆ ಏನನ್ನು ಬೇಕಿದ್ರೂ ಸಾಧಿಸಬಹುದು ಎಂದು ತೋರಿಸಿದ್ದಾರೆ. ಬಂಗಾರದ ಮನುಷ್ಯ ಚಿತ್ರದಲ್ಲಿ ರಾಜಕುಮಾರ್ ಅವರ ಹಾಗೆ ಹೆಜ್ಜೆ ಇಟ್ಟು ಸೈ ಎನಿಸಿಕೊಂಡಿದ್ದಾರೆ.

ಒಮ್ಮೆ ಸೈಕ್ಲೋನ್ ಬಂದು ಹಾಕಿದ ಬೆಳೆಗಳೆಲ್ಲ ಹಾಳಾಗಿ ಅದರ ನಂತರ ರೈತರು ಯಾವಾಗಲೂ ಒಂದೇ ಬೆಳೆಯನ್ನ ನಂಬಿ ಇರಬಾರದು ಅದರ ಜೋತ್ರ್ಜ್ ಇನ್ನೇನಾದರೂ ಮಾಡಬೇಕು ಎಂದುಕೊಂಡು ಕೋಳಿ ಸಾಕಾಣಿಕೆ ಆರಂಭಿಸಿದ್ದರು. ಇದರ ಜೊತೆಗೆ ಸೋಲಾರ್ ಬಳಸಿ ವಿದ್ಯುತ್ ಶಕ್ತಿ ಉತ್ಪಾದಿಸಿ ತಮಗಾಗಿ ಹೆಚ್ಚು ಉಳಿದ ವಿದ್ಯುತು ಅನ್ನು ಕರ್ನಾಟಕ ವಿದ್ಯುತ್ ಮಾಂಡಳಿಗೆ ನೀಡಿದ್ದಾರೆ. ಹಾಗೆ ಹಿಮಾಚಲ ಪ್ರದೇಶದಿಂದ ರೈತರ ತೋಟಗಳನ್ನು ನೋಡಿಕೊಂಡು ಬಂದು ಅಲ್ಲಿಂದ 500 ಸೇಬು ಗಿಡಗಳನ್ನು ತಂದು 1 ಎಕರೆಯಲ್ಲಿ ಬೆಳೆಸಿದರು. ಮಧ್ಯದಲ್ಲೂ ಸ್ವಲ್ಪ ಮಾಹಿತಿ ತಂತ್ರಜ್ಞಾನದ ಕೊರತೆಯಿಂದಾಗಿ ನಿರೀಕ್ಷಿತ ಫಲ ದೊರೆಯಲಿಲ್ಲ. ಹಾಗಾಗಿ ಮತ್ತೆ ಹಿಮಾಚಲ ಪ್ರದೇಶಕ್ಕೆ ಹೋಗಿ ಅಲ್ಲಿನ ತೋಟಗಳನ್ನು ನೋಡಿಕೊಂಡು ಬಂದು ಅಲ್ಲಿನ ರೈತರ ಜೊತೆ ಯಾವ ಯಾವ ಸಮಯಕ್ಕೆ ಏನೇನು ಸಿಂಪಡಣೆ ಕೊಡಬೇಕು ಅನ್ನುವುದರ ಬಗ್ಗೆ ಮಾಹಿತಿ ಪಡೆದುಕೊಂಡು ಬಂದಿದ್ದರು. ಆದರೆ ಈಗ ಕರೋನ ಇಂದಾಗಿ ಅಂದುಕೊಂಡ ರೀತಿಯಲ್ಲಿ ಆರೈಕೆ ಮಾಡೋಕೆ ಆಗಲಿಲ್ಲ ಹಾಗಿದ್ದೂ ಕೂಡ ನೈಸರ್ಗಿಕವಾಗಿ ಬೆಳೆದು ಫಲ ಸಿಕ್ಕಿದೆ ಎನ್ನುತ್ತಾರೆ ನಾರಾಯಣ ಸ್ವಾಮಿ ಅವರು.

ಕಳೆದ ವರ್ಷ ಫಸಲು ಬಂದಿರಲಿಲ್ಲ ಆದರೆ ಈ ವರ್ಷ ರೈತನ ಶ್ರಮಕ್ಕೆ ಫಲ ಸಿಕ್ಕಿದೆ. ಇವರ ಆಶಯಕ್ಕೆ ತಕ್ಕಂತೇ ಚಿಕ್ಕಬಳ್ಳಾಪುರ ಜಿಲ್ಲೆಯ ತೋಟಗಾರಿಕಾ ಅಧಿಕಾರಿಗಳೂ ಉತ್ತನ ಸಹಕಾರ ನೀಡುತ್ತಿದ್ದು ಸಮರ್ಥ ಆಸಕ್ತ ರೈತರಿಗೆ ಬೇಕು ಬೇಡಗಳಿಗೆ ಸ್ಪಂಧಿಸುವ ಕೆಲಸ ಮಾಡುತ್ತಿದ್ದಾರೆ. ರಾವ್ತರು ಯಾವಾಗಲೂ ಹೊಸತರದ ಬೆಳೆಗಳನ್ನು ಬೆಳೆದರೆ ಲಾಭ ಪಡೆಯಬಹುದು. ಎಲ್ಲರೂ ಒಂದೇ ತರಹದ ಬೆಳೆಗಳನ್ನು ಬೆಳೆದರೆ ನಷ್ಟಕ್ಕೆ ಈಡಾಗುತ್ತಾರೆ. ನಾರಾಯಣ್ ಸ್ವಾಮಿ ಅವರು ಚಿಕ್ಕಬಳ್ಳಾಪುರ ಬರಪೀಡಿತ ಜಿಲ್ಲೆ ಅನ್ನುವುದು ತಿಳಿದಿದ್ದರೂ ಸಹ ಶಿಮ್ಲಾದಲ್ಲಿ ಬೆಳೆಯುವ ಸೇಬುವಮನು ಬಯಲುಸೀಮೆಯಲ್ಲೂ ಬೆಳೆದಿರುವುದು ಸಾಧನೆಯೇ ಸರಿ ಎಂದು ಮೆಚ್ಚುಗೆಯನ್ನು ವ್ಯಕ್ತ ಪಡಿಸುತ್ತಾರೆ. ಯಾರ ಬಳಿಯೂ ಅಡಿಯಾಳಾಗದೆ ನಿತ್ಯ ಭೂಮಿ ತಾಯಿಯ ಸೇವೆಯನ್ನು ಮಾಡುತ್ತ ಹತ್ತಾರು ಜನರಿಗೆ ಬದುಕನ್ನು ಕಟ್ಟಿಕೊಡುತ್ತ ಇದ್ದಾರೆ ನಾರಾಯಣ ಸ್ವಾಮಿ ಅವರು.

Leave a Comment

error: Content is protected !!