ಫ್ಯಾಷನ್ ಡಿಸೈನರ್ ಜೊತೆ ಡಿಂಗ್ ಡಾಂಗ್ ಮಾಡುತ್ತಿದ್ದ ದಂತ ವೈದ್ಯ. ವಿಷಯ ತಿಳಿದು ಹೆಂಡತಿ ಮಾಡಿದ್ದೇನು ಗೊತ್ತಾ? ಕರುಳು ಚುರಕ್ ಅನ್ನುತ್ತೆ.


Real Story ಇತ್ತೀಚಿನ ದಿನಗಳಲ್ಲಿ ಬೇಡದ ಸಂಬಂಧವನ್ನು ಹೊಂದಿ ಅದರ ವಿಚಾರವಾಗಿ ಪ್ರಾಣವನ್ನು ಕಳೆದುಕೊಳ್ಳುವಂತಹ ದಂಪತಿಗಳ ಸಂಖ್ಯೆ ಹೆಚ್ಚಾಗಿರುವುದನ್ನು ನೀವು ಸಾಮಾಜಿಕ ಜಾಲತಾಣಗಳಲ್ಲಿ ನೋಡಿರಬಹುದು. ಇದಕ್ಕೆ ಇಂದು ನಾವು ನಮ್ಮ ರಾಜ್ಯದಲ್ಲಿಯೇ ನಡೆದಿರುವಂತಹ ಒಂದು ಘಟನೆಯ ಸೇರಿಸಲು ಹೊರಟಿದ್ದೇವೆ. ಚಿಕ್ಕಮಗಳೂರಿನವರಾಗಿರುವ ಡಾಕ್ಟರ್ ರೇವಂತ್ ಎನ್ನುವಾತ ಕವಿತಾ ಎನ್ನುವವರನ್ನು ಮದುವೆ ಆಗಿದ್ದರು. ಈ ದಂಪತಿಗಳಿಗೆ ಇಬ್ಬರು ಮಕ್ಕಳು ಕೂಡ ಇದ್ದರು. ಬೀರೂರಿನಲ್ಲಿ ಡೆಂಟಲ್ ಕ್ಲಿನಿಕ್(Dental Clinic) ಶಾಪ್ ಅನ್ನು ರೇವಂತ್ ಅವರು ಹೊಂದಿದ್ದರು. ಸಂಸಾರ ಸುಖವಾಗಿಯೇ ಸಾಗಿಕೊಂಡು ಬಂದಿತ್ತು.

ಒಂದು ದಿನ ಹರ್ಷಿತ ಎನ್ನುವ ಫ್ಯಾಷನ್ ಡಿಸೈನರ್ ರೇವಂತ್ ಅವರ ಆಸ್ಪತ್ರೆಗೆ ಬರುತ್ತಾರೆ ಇವರಿಬ್ಬರ ನಡುವೆ ಸ್ನೇಹ ಚಿಗುರುತ್ತದೆ. ಸ್ನೇಹದಿಂದ ಆಳವಾದ ಪ್ರೀತಿಗೆ ಇವರ ಸಂಬಂಧ ತಿರುಗಲು ಹೆಚ್ಚು ಹೊತ್ತು ಬೇಕಾಗಲಿಲ್ಲ. ಇವರಿಬ್ಬರ ಸಂಬಂಧ ಯಾವ ರೀತಿ ಗಾಢವಾಯಿತು ಎಂದರೆ ರೇವಂತ್ ಹೆಂಡತಿಗೆ ತಿಳಿಯದಂತೆ ಹರ್ಷಿತ ಜೊತೆಗೆ ರಾತ್ರಿಯನ್ನು ಕಳೆಯಲು ಪ್ರಾರಂಭಿಸುತ್ತಾನೆ. ಆ ಕಡೆ ಹರ್ಷಿತ ಕೂಡ ರೇವಂತ್ ನನ್ನು ಹೆಂಡತಿಯನ್ನು ಬಿಟ್ಟು ಬರುವಂತೆ ಒತ್ತಾಯ ಮಾಡುತ್ತಾಳೆ. ಕೊನೆಗೂ ಹರ್ಷಿತ ಮಾತಿಗೆ ಮರುಳಾದರೆ ಒಂದು ದಿನ ತನ್ನ ಹೆಂಡತಿಗೆ ಪ್ರಜ್ಞೆ ತಪ್ಪುವಂತಹ ಚು’ಚ್ಚುಮದ್ದನ್ನು ನೀಡಿ ಆಕೆಯ ಕಥೆಯನ್ನು ಮುಗಿಸಿಬಿಡುತ್ತಾನೆ. ಆದರೆ ಪೋಸ್ಟ್ಮಾರ್ಟಂ ರಿಪೋರ್ಟ್(Report) ನಲ್ಲಿ ಪೊಲೀಸರಿಗೆ ಸಂಶಯ ಮೂಡಲು ಪ್ರಾರಂಭವಾಗುತ್ತದೆ.

ಕೂಡಲೆ ಪೊಲೀಸರು ರೇವಂತ್ ನನ್ನು ತೀವ್ರ ವಿಚಾರಣೆಗೆ(Investigation) ಒಳಪಡಿಸಿದಾಗ ಕೊನೆಗೂ ರೇವಂತ್ ನಡೆದಿರುವ ವಿಚಾರವನ್ನು ಸಂಪೂರ್ಣವಾಗಿ ಬಾಯಿ ಬಿಡುತ್ತಾನೆ. ಇದಾದ ನಂತರವೇ ತನಗೆ ಮುಂದೆ ನಡೆಯಬಹುದಾದ ಕಾನೂನಾತ್ಮಕ ಶಿಕ್ಷೆಯ ಕುರಿತಂತೆ ಯೋಚಿಸಿಯೇ ರೇವಂತ್ ಸಮಾಜದಲ್ಲಿ ನನ್ನ ಗೌರವಕ್ಕೆ ಯಾವ ರೀತಿ ಧಕ್ಕೆ ಬರಬಹುದು ಎಂಬುದಾಗಿ ಯೋಚಿಸಿ ತನ್ನ ಪ್ರಿಯತಮೆ ಹರ್ಷಿತ ಗೆ ಎಲ್ಲಾ ವಿಚಾರವನ್ನು ಫೋನಿನಲ್ಲಿ ಹೇಳಿ ರೈಲಿಗೆ ತನ್ನ ತಲೆಯನ್ನು ಕೊಡುತ್ತಾನೆ ಹಾಗೂ ತನ್ನ ಜೀವನವನ್ನು ತನ್ನ ಕೈಯಾರೆ ತಾನೇ ಮುಗಿಸಿಕೊಳ್ಳುತ್ತಾನೆ.

ಹರ್ಷಿತ ಕೂಡ ಈ ವಿಚಾರ ಮುಂದೆ ನನ್ನ ತಲೆ ಮೇಲೆ ಬರಬಹುದು ನನ್ನ ಭವಿಷ್ಯ ಏನಾಗಬಹುದು ಎಂಬ ಚಿಂತೆಯಲ್ಲಿ ಹೆದರಿ ತಾನು ಕೂಡ ತನ್ನ ಜೀವನವನ್ನು ಕೈಯಾರೆ ಮುಗಿಸಿಕೊಳ್ಳುತ್ತಾಳೆ. ಒಟ್ಟಾರೆಯಾಗಿ ಮೈಮರೆತು ಮಾಡಿದಂತಹ ಒಂದು ತಪ್ಪು, ಇಬ್ಬರು ತಪ್ಪಿತಸ್ಥರು ಹಾಗೂ ಒಬ್ಬ ಮುಗ್ಧೆಯ ಜೀವ ಹೋಗುವಂತೆ ಮಾಡಿದೆ. ಈ ಎಲ್ಲ ವಿಚಾರದೊಳಗೆ ಆ ಇಬ್ಬರು ಮಕ್ಕಳು ಈಗ ಅನಾಥರಾಗಿದ್ದಾರೆ(Orphan). ದಾಂಪತ್ಯ ಜೀವನದಲ್ಲಿ ಪ್ರತಿಯೊಬ್ಬರೂ ಅರಿತುಕೊಳ್ಳಬೇಕಾಗಿರುವ ಪಾಠ ಇದು. ಈ ಘಟನೆಯ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ.


Leave A Reply

Your email address will not be published.