ಸೌಂದರ್ಯ ಮತ್ತು ಅರ್ಹತೆಯಿದ್ರೂ ನಟಿ ಪವಿತ್ರಾ ಲೋಕೇಶ್ ಅವರಿಗೆ ಹೆಚ್ಚಾಗಿ ಹೀರೋಯಿನ್ ಪಾತ್ರಗಳು ಸಿಕ್ಕಿಲ್ಲವೇಕೆ? ಇವರ ಕಷ್ಟದ ದಿನಗಳು ಹೇಗಿತ್ತು ಗೊತ್ತಾ

ಕನ್ನಡ ಚಿತ್ರರಂಗದ ಇವರು ಕೂಡ ಪ್ರತಿಭಾನ್ವಿತ ಕಿರುತೆರೆ. ಹಾಗೂ ಹಲವಾರು ಚಿತ್ರದಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸರುವ ಕಲಾವಿದೆ ಕನ್ನಡ ಹಾಗೂ ತೆಲುಗು ಚಿತ್ರದಲ್ಲಿ ತನ್ನನು ಸಕ್ರಿಯವಾಗಿ ತನ್ನನ್ನು ತೊಡಗಿಸಿಕೊಂಡಿದ್ದಾರೆ ಇವರು ಮೈಸೂರು ಲೋಕೇಶ ಅವರ ಪುತ್ರಿ ಇವರ ಸಹೋದರ ಆದಿ ಲೋಕೇಶ ಅವರು ಕೂಡ ಚಿತ್ರರಂಗದಲ್ಲಿ ತನ್ನನು ತಾನೇ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ ಇನ್ನೂ ಇವರ ತಂದೆ ತೀರಿಕೊಂಡ ನಂತರ ತನ್ನ ತಾಯಿಗೆ ಹೆಗಲಾಗಿ ಅವರಿಗೆ ನೆರವು ನೀಡುವರು

ಒಬ್ಬ ವ್ಯಕ್ತಿ ಸಿನಿಮಾ ಹಿನ್ನಲೆಯಲ್ಲಿ ಬಂದಿದ್ದಾರೆ ಎಂದ ಕೂಡಲೇ ಅವರಿಗೆ ಯಾವ ಕಷ್ಟ ಪಟ್ಟು ಮೇಲಕ್ಕೆ ಬಂದಿಲ್ಲ ಎಂದು ಜನರು ತಮ್ಮಲ್ಲೇ ಅಂದುಕೊಳ್ಳುತ್ತೇವೆ ಆದರೆ ಅವರ ವೈಯಕ್ತಿಕ ಜೀವನದ ಬಗ್ಗೆ ತಿಳಿದಾಗ ನಾವು ಅಂದುಕೊಂಡಿದ್ದು ಸುಳ್ಳು ಎಂದು ಅರಿವು ಮೂಡುತ್ತೆ ನಿಮಗೆಲ್ಲ ಗೊತ್ತಿರುವ ಹಾಗೆ ನಟ ದರ್ಶನ್ ಅವರ ತಂದೆ ಕೂಡ ಒಬ್ಬ ಪ್ರಸಿದ್ಧ ವ್ಯಕ್ತಿ ಆದರೆ ದರ್ಶನ್ ಅವರು ಸಿನಿಮಾ ಚಿತ್ರರಂಗಕ್ಕೆ ಬರಲು ಪಟ್ಟ ಪಾಡು ಅಷ್ಟಿಷ್ಟಲ್ಲ ಇದನ್ನು ಸ್ವತಃ ಅವರೇ ಹೇಳಿದ್ದಾರೆ

ಇನ್ನೂ ಹಲವಾರು ನಟರು ಕೂಡ ಸ್ವತಃ ಪರಿಶ್ರಮದಿಂದ ಮೇಲೆ ಬಂದು ಸಾಧನೆ ಮಾಡಿದ್ದಾರೆ ಪವಿತ್ರ ಲೋಕೇಶ ಅವರು ಕೂಡ ತಮ್ಮ ಸ್ವಪ್ರತಿಭೇ ಇಂದ ಸಾಧನೆ ಮಾಡಿದ್ದಾರೆ ಇವರು ಕನ್ನಡ ಚಿತ್ರರಂಗದಲ್ಲಿ ಎಂತಹ ಪಾತ್ರ ಮಾಡುತ್ತಾರೆ ಎಂದು ಎಲ್ಲರಿಗೂ ತಿಳಿದ ವಿಷಯ ಆದರೆ ತೆಲುಗು ಚಿತ್ರರಂಗದಲ್ಲಿ ತಾಯಿಯ ಪಾತ್ರ ಮುಂತಾದ ಪೋಷಕ ಪಾತ್ರಗಳಲ್ಲಿ ನಟಿಸಿ ಜನರಲ್ಲಿ ಮೆಚ್ಚುಗೆ ಗಳಿಸಿದ್ದಾರೆ

ಪವಿತ್ರ ಲೋಕೇಶ ಅವರು 1970 ಅಲ್ಲಿ ಜನಿಸಿದರು ಇವರಿಗೆ ಅಭಿನಯದ ಮೇಲೆ ಯಾವುದೇ ಆಸಕ್ತಿ ಇರಲಿಲ್ಲ ಆದರೆ ನಾಗರಿಕ ಸೇವಾ ಮಾಡಬೇಕು ಎಂಬ ಕನಸನ್ನು ಹೊಂದಿದ್ದರು ಆದರೆ 9 ನೇ ತರಗತಿಯಲ್ಲಿ ಓದುತ್ತಿರುವ ಸಮಯದಲ್ಲಿ ತಂದೆಯ ಅಕಾಲಿಕ ಮರಣದಿಂದ ಮನೆಯ ಜವಾಬ್ದಾರಿ ಸಂಪೂರ್ಣ ಇವರ ಹೆಗಲಿಗೆ ಬೀಳುತೆ ಆರ್ಥಿಕವಾಗಿ ಅಷ್ಟೊಂದು ಸದೃಢ ಇಲ್ಲ ಮತ್ತು ತನ್ನ ವಿದ್ಯಾಬ್ಯಾಸ ಕೂಡ ಅರ್ಧಕ್ಕೆ ಬಿಟ್ಟು ರೆಬೆಲ್ ಸ್ಟಾರ್ ಅಂಬರೀಷ್ ಅವರ ಸಲಹೆಯಂತೆ ಮಿಸ್ಟರ್ ಅಭಿಷೇಕ್ ಚಿತ್ರದಲ್ಲಿ ನಟಿಸಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತಾರೆ

ಆದರೆ ಚಿತ್ರವು ಅಷ್ಟೊಂದು ನಿರೀಕ್ಷೆಗೆ ತಕ್ಕಂತೆ ಯಶಸ್ಸು ಗಳಿಸಲು ಆಗಲಿಲ್ಲ ಇನ್ನು ಹಲವಾರು ಚಿತ್ರದಲ್ಲಿ ನಟಿಸಿದ್ದಾರೆ ಆದರೆ ಆ ಚಿತ್ರಗಳು ಯಶಸ್ಸು ಗಳಿಸಲು ಆಗಲಿಲ್ಲ ತದನಂತರ ಒಂದು ಕಂಪನಿ Hr ಕನ್ಸಲ್ಟ್ ಆಗಿ ಕಾರ್ಯ ನಿರ್ವಹಿಸಿದರು ಕನ್ನಡ ಚಿತ್ರರಂಗದ ಇವರಿಗೆ ಯಾಕೆ ಅವಕಾಶ ಸಿಗಲಿಲ್ಲ ಎನ್ನುವುದರ ಬಗ್ಗೆ ತಿಳಿಯೋಣ

ಇದೇ ಸಮಯದಲ್ಲಿ ನಾಗಾಭರಣ ಅವರ ನಿರ್ದೇಶನದಲ್ಲಿ ಜನುಮದ ಜೋಡಿ ಚಿತ್ರ ಸೆಟ್ಟೇರುತ್ತಿದ್ದ ಸಮಯದಲ್ಲಿ ಪವಿತ್ರ ಲೋಕೇಶ್ ಅವರಿಗೆ ಅದರಲ್ಲಿ ಅಭಿನಯ ಮಾಡುವ ಅವಕಾಶ ಸಿಗುವುದು ಆ ಚಿತ್ರದ ಮೂಲಕ ಸ್ವಲ್ಪ ಮಟ್ಟಿಗೆ ಹೆಸರು ಸಿಗುವುದು ಆದರೆ ನಟಿ ಆಗುವ ಅವಕಾಶ ಸಿಗುವುದಿಲ್ಲ ಯಾಕೆಂದರೆ ಅವರ ಎತ್ತರ ಐದು ಅಡಿ ಹತ್ತು ಇಂಚು ಅವರ ಎತ್ತರವೇ ಅವರಿಗೆ ಶತ್ರುವಾಗಿ ಹೀರೋಯಿನ್ ಆಗುವ ಅವಕಾಶ ತಪ್ಪಿತು ನಾಯಕ ನಟರು ಅವರಿಗಿಂತ ಕುಳ್ಳ ಇದ್ದರೂ ಹಾಗಾಗಿ ಇನ್ನೂ ಉಲ್ಟಾ ಪಲ್ಟಾ ಹುಚ್ಚಾ ಸಿನಿಮಾಗಳಲ್ಲಿ ಕೂಡ ಒಳ್ಳೆಯ ಪಾತ್ರ ನಿರ್ವಹಿಸಿದರು ಗುಪ್ತಗಾಮಿನಿ ಹೀಗೆ ಹಲವರು ಧಾರಾವಾಹಿಯಲ್ಲಿ ಕೂಡ ಅಭಿನಯಿಸಿದ್ದಾರೆ

ತದನಂತರ ಅವರಿಗೆ ನಟಿಸಲು ಬಂದ ಪಾತ್ರವೇ ಬೇರೆ ರೀತಿಯಲ್ಲಿ ಇತ್ತು ಹಾಸ್ಯ ಪಾತ್ರ ಆದರೆ ಅವರ ಪ್ರತಿಭೆಗೆ ತಕ್ಕಂತೆ ಯಾವುದೇ ಪಾತ್ರ ಸಿಕ್ಕಿಲ್ಲ ನಾಯಿ ನೆರಳು ಚಿತ್ರ ಸಾಕಷ್ಟು ಪ್ರಶಸ್ತಿ ಅವರಿಗೆ ಸಿಗುವುದು ನಂತರ ದಿನಗಳಲ್ಲಿ ತೆಲುಗು ಚಿತ್ರರಂಗಕ್ಕೂ ಹೋಗಿ ದೊಂಗಳು ಎನ್ನುವ ಚಿತ್ರ ಅಲ್ಲಿ ಅಭಿನಯಿಸುತ್ತಾರೆ ತದನಂತರ ತೆಲುಗು ಚಿತ್ರರಂಗ ಅಲ್ಲಿ ಸ್ಟಾರ್ ನಟಿ ಎಂದು ಪ್ರಖ್ಯಾತಿ ಪಡೆದಿರುವ ಹೆಮ್ಮೆ ಅವರದ್ದು ಆದಿ ಲೋಕೇಶ್ ಅವರು ಕೂಡ ಒಬ್ಬ ನಟನಾಗಿ ವಿಲನ್ ಹಾಗೂ ಪೋಷಕ ಪಾತ್ರಗಳಲ್ಲಿ ನಟಿಸಿದ್ದರು ಕೂಡ ಅಷ್ಟೊಂದು ಹೆಸರುಕೊಟ್ಟಿಲ್ಲ

ಅವರ ವೈಯಕ್ತಿಕ ಜೀವನದಲ್ಲಿ ಕೂಡ ಏರುಪೇರು ಕಂಡು ಕೊಂಡು ಬಂದಿದ್ದಾರೆ ಗುಪ್ತಗಾಮಿನಿ ಧಾರವಾಹಿ ಸಮಯದಲ್ಲಿ ಮೊದಲನೆಯ ಮದುವೆ ಆಗುವುದು ಅವರ ಮೊದಲ ಗಂಡ ಹೈದರಬಾದ್ ಮೂಲದ ಎಂಜಿನಿಯರ್ ಆಗಿದ್ದು ಆರ್ಥಿಕ ಆಗಿ ಸಭಲ ಆಗಿದ್ದರು ಆದರೆ ವೃತ್ತಿಜೀವನ ಸಲುವಾಗಿ ಇಬ್ಬರ ನಡುವೆ ಭಿನ್ನಾಭಿಪ್ರಾಯ ಮೂಡಿ ಒಂದು ವರ್ಷದ ಒಳಗಡೆ ವಿಚ್ಛೇದನ ನೀಡುತ್ತಾರೆ ಆಮೇಲೆ ಸುಚೇಂದ್ರ ಪ್ರಸಾದ್ ಪವಿತ್ರಾ ಲೋಕೇಶ್ ಅವರು ಒಂದೇ ಕಡೆ ಕೆಲಸ ಮಾಡುವ ಸಂದರ್ಭದಲ್ಲಿ ಪರಿಚಯ

ಇನ್ನೂ ಸುಚೇಂದ್ರ ಪ್ರಸಾದ್ ಅವರಿಗೆ ಮಲ್ಲಿಕಾ ಪ್ರಸಾದ್ ಅವರ ಜೊತೆ ವಿವಾಹ ಆಗಿದ್ದರು ಆದರೆ ದಾಂಪತ್ಯ ಅಲ್ಲಿ ಬಿರುಕು ಮೂಡಿ 2006 ಅಲ್ಲಿ ಅವರು ಬೇರೆ ಬೇರೆ ಆಗುತ್ತಾರೆ ಆಮೇಲೆ ಪವಿತ್ರಾ ಲೋಕೇಶ್ ಮತ್ತು ಸುಚೇಂದ್ರ ಪ್ರಸಾದ್ ಅವರು ಧರ್ಮಸ್ಥಳ ಹೋಗಿ ಮದುವೆ ಆಗುತ್ತಾರೆ ಅವರಿಗೆ ಇಬ್ಬರು ಮಕ್ಕಳು ಇದ್ದು ಇಬ್ಬರು ಕೂಡ ಚಿತ್ರರಂಗದಲ್ಲಿ ಒಳ್ಳೆಯ ಅವಕಾಶಗಳ ಮೂಲಕ ತನ್ನ ಜೀವನ ಸಾಗಿಸುತ್ತಿದ್ದಾರೆ ಹೀಗೆ ಹಲವಾರು ಸಿನಿಮಾಗಳು ಅವರ ಮಡಿಲಪ್ಪಲಿ ಎಂದು ಆಶಿಸೋಣ.

Leave a Comment

error: Content is protected !!