ವಯಸ್ಸು ಕಳೆಯುತ್ತಾ ಹೋಗುತ್ತದೆ. ಕಳೆದ ವಯಸ್ಸನ್ನು ಮತ್ತೆ ಪಡೆಯಲು ಸಾಧ್ಯವಿಲ್ಲ. ಆದ್ದರಿಂದ ಯಾವ ಸಮಯದಲ್ಲಿ ಯಾವುದು ನಡೆಯಬೇಕೋ ಅದನ್ನು ನಾವು ನಡೆಸಿಕೊಳ್ಳಬೇಕು. ಈಗಿನ ಜಾಯಮಾನದಲ್ಲಿ ಎಲ್ಲರೂ ವಿದ್ಯಾಭ್ಯಾಸಕ್ಕೆ, ಉದ್ಯೋಗಕ್ಕೆ ಪ್ರಾಮುಖ್ಯತೆ ಕೊಡುತ್ತಾರೆ. ಆದರೆ ಇದು ತಪ್ಪಲ್ಲ.ತಮ್ಮ ವೈಯಕ್ತಿಕ ಜೀವನದ ಬಗ್ಗೆಯೂ ಅಂದರೆ ತಮ್ಮ ವ್ಯೆವಾಹಿಕ ಜೀವನ ಬಗ್ಗೆಯೂ ಪ್ರಾಮುಖ್ಯತೆ ನೀಡಬೇಕಿದೆ.

ಇವತ್ತು 40ವರ್ಷ ಆದರೂ ಹುಡುಗಿಯರು ಹಾಗೂ ೫೦ ವರ್ಷಆದರೂ ವಿವಾಹವಾಗುತ್ತಿಲ್ಲ. ಇದರಿಂದ ಪ್ರಾಕೃತಿಕವಾಗಿ ಮಕ್ಕಳನ್ನು ಪಡೆಯಲು ಸಾಧ್ಯತೆ ಕಡಿಮೆ. ಮಕ್ಕಳಾದರೂ ಸಹ ಅವರ ಆರೋಗ್ಯದ ಬಗ್ಗೆ ನಂಬಿಕೆ ಕಡಿಮೆ. ಕೆಲವು ಹೆಂಗಸರಿಗೆ ಸುಮಾರು 40 ವರ್ಷಕ್ಕೆ ಮುಟ್ಟು ನಿಲ್ಲುತ್ತದೆ. ಹೆಂಗಸರ ಶಕ್ತಿಯೂ ಕುಂಠಿತಗೊಳ್ಳುತ್ತದೆ. ಅಷ್ಟೇ ಅಲ್ದೆ ಕೆಲವೊಂದು ವಿಚಾರದಲ್ಲಿ ಆಸಕ್ತಿ ಕಡಿಮೆ ಆಗುತ್ತದೆ ಇದರಿಂದ ತಮ್ಮ ವೈವಾಹಿಕ ಜೀವನದಲ್ಲಿ ಹೆಚ್ಚು ಖುಷಿಯಾಗಿರಲು ಆಗದು ಹಾಗೂ ಸುಖ ನೆಮ್ಮದಿ ಅನ್ನೋದು ಸೀಮಿತವಾಗುತ್ತದೆ.

ಹಾಗಾಗಿ ಕೊನೆಯದಾಗಿ ಹೇಳುವುದೇನೆಂದರೆ ಸಮಯಕ್ಕೆ ತಕ್ಕಂತೆ ಜೀವನವನ್ನು ನಡೆಸುತ್ತ ಹೋಗುವುದು ಒಳ್ಳೆಯದು. ಯಾವ ಸಮಯಕ್ಕೆ ಯಾವುದು ಸೂಕ್ತವೋ ಅದನ್ನು ನಡೆಸಿಕೊಂಡು ಹೋಗುವುದು ಉತ್ತಮ ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ.

By admin

Leave a Reply

Your email address will not be published.