ಕಟ್ಟಿಂಗ್ ಶಾಪ್ ನಲ್ಲಿ ಕೆಲಸ ಮಾಡ್ತಿದ್ದ ಹುಡುಗ, ಈಗ ಯೂಟ್ಯೂಬ್ ಸ್ಟಾರ್ ಆಗಿ ಬೆಳೆದಿದ್ದು ಹೇಗೆ ಗೊತ್ತಾ? ಇಲ್ಲಿದೆ ತೆರೆ ಹಿಂದಿನ ರಿಯಲ್ ಸ್ಟೋರಿ

ಕಟಿಂಗ್ ಶಾಪ್ ಇಟ್ಟಿದ್ದ ಈ ಮಲ್ಲು ಜಮಖಂಡಿ ಇವತ್ತು ಯೂಟ್ಯೂಬ್ ಲೋಕದ ತಾರೆ.ಇವರ ಸಾಧನೆ ನೋಡಿ ಎಲ್ಲರೂ ಬಾಯ್ ಮೇಲೆ ಬೆರಳಿಟ್ಟು ಕೊಂಡವರೆ ಅವತ್ತು ನೋಡಿ‌ ನಕ್ಕವರೇ ಇವತ್ತು ಶಭಾಶ್ ಎನ್ನುವಂತೆ ಬೆಳೆದ ಮಲ್ಲು ಜಮಖಂಡಿ! ಕಟ್ಟಿಂಗ್ ಶಾಪ್ ಇಟ್ಟಿದ್ದ ಈ ಮಲ್ಲು ಜಮಖಂಡಿ ಇಂದು ಯೂಟ್ಯೂಬ್ ಲೋಕದ ತಾರೆ. ಮುದಲಿಸಿದವರ‌ ಎದುರೆ ಹುಬ್ಬೇರಿಸುವಂತೆ ಬೆಳೆದ ಹುಡುಗ ಯಾರೀತ ಏನಿವನ ಕಥೆ ನೋಡೋಣ ಬನ್ನಿ.

ಕಳೆದ 2- 3 ವರ್ಷಗಳಿಂದ ಹೊಸ ಹೊಸ ಪ್ರತಿಭೆಗಳ ಲೋಕದ ಹೊಸ ಟ್ರೆಂಡ್ ಆರಂಭವಾಗಿದೆ ಎನ್ನಬಹುದು. ನಿಜಕ್ಕು ಇದು ಪ್ರತಿಭಾವಂತರಿಗೆ ಒಂದು ಪರ್ವ ಕಾಲ ಅಥವಾ ಸುವರ್ಣ ಯುಗ ಎಂದರೆ ತಪ್ಪಾಗಲಾರದು. ಈ ನಿಟ್ಟಿನಲ್ಲಿ ಸಾಮಾಜಿಕ ಜಾಲತಾಣಗಳು ಹಿಂದೆ ಎಂದು ಯಾರು ಕೂಡ ಮಾಡಲಾಗಿರದಂತಹ ಕ್ರಾಂತಿಯನ್ನು ಉಂಟು ಮಾಡಿವೆ. ಇತ್ತೀಚಿಗೆ ಹಲವಾರು ಕಲಾವಿದರುಗಳ ಬಗ್ಗೆ, ಅವರ ಬದುಕು, ಸಾಧನೆ , ಅವರು ಅಲ್ಲಿ ಅನುಭವಿಸುವಂತಹ ಕಷ್ಟಗಳು, ಅಲ್ಲಿಂದನೆ ಸಿಕ್ಕ ಯಶಸ್ಸು ಮುಂತಾದವುಗಳನ್ನು ಚರ್ಚೆ ಮಾಡಲಾಗಿತ್ತು. ಸಾಮಾಜಿಕ‌ ಜಾಲತಾಣಗಳಲ್ಲಿ ನಮ್ಮನ್ನೆಲ್ಲ ವಿಧ ವಿಧವಾಗಿ ರಂಜಿಸುವ ಕಲಾವಿದರ ಹಿಂದಿನ ಅಸಲಿ ಬದುಕು ನಮಗೆ ಕಾಣುವುದಿಲ್ಲ. ನಮ್ಮನ್ನು ರಂಜಿಸುವ ಉದ್ದೇಶದಿಂದ ಅವರು ತಮ್ಮ ಬದುಕಿನ ಎಲ್ಲವನ್ನು ತ್ಯಾಗ ಮಾಡಿ ಮುಂದೆ ಬಂದಿರುತ್ತಾರೆ. ಇಂದು ರಾಜ್ಯದ ಅನೇಕ ಭಾಗಗಳ ಕಲಾವಿದರು ಮುನ್ನೆಲೆಗೆ ಬರುತ್ತಿದ್ದಾರೆ ಅವರ ಪೈಕಿ ಉತ್ತರ ಕರ್ನಾಟಕದ ಪ್ರತಿಭೆಗಳು ಇವತ್ತು ರಾಜ್ಯದ ಮೂಲೆ ಮೂಲೆಗೂ ತಲುಪುತ್ತಿದ್ದಾರೆ.

ಎಲ್ಲೊ ಇರುವ ಉತ್ತರ ಕರ್ನಾಟಕದ ಕಲಾವಿದರಿಗೆ ಬೆಂಗಳೂರಿನಲ್ಲಿ ಅಭಿಮಾನಿಗಳ‌ ಮಹಾ ದಂಡೆ ಸೃಷ್ಟಿ ಆಗಿದೆ. ಉತ್ತರ ಕರ್ನಾಟಕದ ಪ್ರತಿಭೆಗಳಲ್ಲಿ ಮಲ್ಲು ಜಮಖಂಡಿ ಕೂಡ ಪ್ರಮುಖರು. ಟಿಕ್ ಟಾಕ್ ಮೂಲಕ ಕೆರಿಯರ್ ಪ್ರಾರಂಭಿಸಿದ ಇವರು ಇವತ್ತು ಯೂಟ್ಯೂಬ್ ಹಾಸ್ಯ ಲೋಕದಲ್ಲಿ ಒಂದು ಸಂಚಲಾತ್ಮಕ ಹೆಸರು. ತಮ್ಮದೇ ಆದ ಒಂದು ತಂಡವನ್ನು ಕಟ್ಟಿ ಪ್ರತಿ ವೀಡಿಯೋಗಳಲ್ಲಿ ಕೂಡ ಹೊಸ ವಿಧದ ಕಂಟೆಂಟ್ ಅನ್ನು ಸೃಷ್ಟಿ ಮಾಡಿಕೊಂಡು ಅದಕ್ಕೊಂದು ಸೂಕ್ತ ಚೌಕಟ್ಟನ್ನು ರಚಿಸಿ, ಒಂದು ಕಾಮಿಡಿ ಸ್ಪೋಕ್ ಅನ್ನು ಸೃಷ್ಟಿಸಿ ರಂಜಿಸುವಲ್ಲಿ ಮಲ್ಲು ಜಮಖಂಡಿ ಅವರು ಪ್ರಮುಖರು. ಇವರು ಸೃಷ್ಟಿಸಿದ ಕಂಟೆಂಟ್ ಅಂದರೆ ಜನರು ಬಿದ್ದು ಬಿದ್ದು ನಗುತ್ತಾರೆ. ಅವರ ವೀಡಿಯೋಗಳಿಗಾಗಿ ಜನ‌ ಕಾದು ಕುಳಿತಿರುತ್ತಾರೆ. ಮೂಲತಃ ಬಾಗಲಕೋಟೆ ಜಿಲ್ಲೆಯ ಜಮಖಂಡಿ ಅವರಾಗಿರುವ ಇವರು ಆರಂಭದಲ್ಲಿ ಯಾವುದನ್ನು ಊಹೆ ಮಾಡಿರಲಿಲ್ಲ. ಸಾಧಾರಣ ಕುಟುಂಬದಿಂದ ಮೇಲೆ ಬಂದ ಅವರಿಗೆ ಸಿನಿಮಾದ ಹುಚ್ಚು ಬಹಳ ಇತ್ತು. ತಾನು ಕೂಡ ಸಿನಿಮಾ ಕಲಾವಿದನಾಗಬೇಕು ಎಂಬ ತುಮಲ ಅವರಲ್ಲಿತ್ತು.

ಸಿನಿಮಾ ಮಾಡಬೇಕು ಅನ್ನೋ ಕನಸು ಕಂಡು ತಮ್ಮದೇ ಮೊಬೈಲ್‌ನಲ್ಲಿ ವಿಡಿಯೋ ಮಾಡೋಕೆ ಶುರುಮಾಡಿದ ಜಮಖಂಡಿಯ ಮಲ್ಲು ಕರ್ನಾಟಕ ಟವಿಯ ಜೊತೆ ತಮ್ಮ ಕಾಮಿಡಿ ವಿಡಿಯೋಗಳ ಯಶಸ್ಸಿನ ಹಿಂದಿನ ಸೀಕ್ರೆಟ್ ಮತ್ತು ಸಂಭ್ರಮವನ್ನು ಹಂಚಿಕೊಂಡಿದ್ದಾರೆ. ಮಲ್ಲು ಜಮಖಂಡಿಯವರ ಜೊತೆ ಶಂಕ್ರಣ್ಣ, ಸಂತೋಷ್, ಆನಂದ್ ಮತ್ತು ಇತರರು ಸೇರಿ ಮಾಡೋ ಹಾಸ್ಯದ ಕಥೆಗಳು ಎಲ್ಲರ ಅಚ್ಚುಮೆಚ್ಚು. ಪ್ರತಿ ವಿಡಿಯೋಗಳು ೧೦-೧೫ ಲಕ್ಷ ವೀಕ್ಷಣೆಗೊಳಗಾಗಿದ್ದು, ಯೂಟ್ಯೂಬ್‌ನಲ್ಲಿ ೮ ಲಕ್ಷ ೩೫ ಸಾವಿರಕ್ಕೂ ಹೆಚ್ಚು ಸಬ್ಸ್ಕ್ರೈಬರ್ ಗಳು ಮಲ್ಲು ಜಮಖಂಡಿ ಯೂಟ್ಯೂಬ್ ಚಾನೆಲ್‌ಗೆ ಇದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಇವತ್ತು ಎಷ್ಟೋ ವಿಷಯಗಳಲ್ಲಿ ಸುಧಾರಣೆ ಆಗಿದ್ದರು ಕೂಡ ನಮ್ಮಲ್ಲಿ ,ಜನರಲ್ಲಿ ಇರುವಂತಹ ಸೃಜನಾತ್ಮಕ ಬಂಧವೊಂದು ಕ್ರಿಯಾತ್ಮಕವಾಗಿ ಸೃಜನಶೀಲತೆ ಇರುವವರಿಗೆ ಮಾತ್ರ ಯಶಸ್ಸಿನ ಮೆಟ್ಟಿಲು ಏರಲು ಸಾಧ್ಯ.ಇಲ್ಲವಾದರೆ ನಮ್ಮ ಪ್ರಯತ್ನಗಳು ತಟಸ್ಥವಾಗಿ ,ನಿಂತ ನೀರಿನಂತೆ ನಿಂತು ಬಿಡುತ್ತವೆ.ಹೀಗಾಗಿ ಕಂಟೆಂಡ್ ಗಳಲ್ಲಿ ಸದೃಢತೆ ಮುಖ್ಯ.ಹಾಸ್ಯದ ಮೂಲಕ ಪಂಚಿಂಗ್ ಡೈಲಾಗ್ ಗಳಿಂದಲೇ ಜನರಿಗೆ ಸಂದೇಶ ರವಾನೆ ಮಾಡುವುದು ಕೂಡ ಮುಖ್ಯ.ವೀಕ್ಷಕರ ಅಭಿರುಚಿಗೆ ಅನುಗುಣವಾಗಿ ಮನೋರಂಜನೆ ನೀಡುತ್ತಾ ಬಂದಿದ್ದಾರೆ ಮಲ್ಲು ಜಮಖಂಡಿ.

ಹಿಂದೊಮ್ಮೆ ಟೈಮ್ ಪಾಸಿಗಾಗಿ ಡಬ್ಮ್ಯಾಸ್ ಮಾಡ್ತಾ , ಟಿಕ್ ಟಾಕ್ ಗೆ ಬಂದ ಇವರು ಈಗ ನಟನೆಯನ್ನೇ ತಮ್ಮ ಜೀವನವಾಗಿಸಿಕೊಂಡು ಬಿಟ್ಟಿದ್ದಾರೆ. ಈಗೀಗ ಅವರಿಗೆ ಕೆಲವೊಂದು ಸಿನಿಮಾಗಳಲ್ಲಿ ನಟಿಸುವ ಅವಕಾಶ ಒದಗಿ ಬಂದಿದೆ.ರಾಜ್ಯದ ಯುವ ಪ್ರತಿಭೆಗಳಿಗೆ ರೋಲ್ ಮಾಡೆಲ್ ಗೆ ಇನ್ನೂ ತೃಪ್ತಿಯ ಭಾವ ಬಂದಿಲ್ಲ. ನಟನೆಯ ಹಸಿವು ಇನ್ನೂ ಹೆಚ್ಚಾಗಿದೆ ಅವರಲ್ಲಿ.

ಊಟಕ್ಕೋ ತಿಂಡಿಗೋ ಕೂತಾಗ ಮಲ್ಲು ಅಂಡ್ ಟೀಂ ಒಂದು ಕಾನ್ಸೆಪ್ಟ್ ಯೋಚಿಸಿದರೆ ೧೦ ನಿಮಿಷದಲ್ಲಿ ಇಡಿಯ ಕಾನ್ಸೆಪ್ಟ್ ಎಲ್ಲರ ತಲೆಯಲ್ಲೂ ರೆಡಿಯಾಗುತ್ತದಂತೆ. ಸಂತೋಷ್ ಕ್ಯಾಮೆರಾ ಹಿಡಿದ್ರೆ, ಮಲ್ಲು ಜಮಖಂಡಿ, ಆನಂದ್, ಶಂಕ್ರಣ್ಣ ಪಟಪಟನೆ ಅಳು ಹುರಿದ ಹಾಗೆ ಡೈಲಾಗ್ ಹೊಡೀತಾರೆ. ಉತ್ತರ ಕರ್ನಾಟಕ ಶೈಲಿಯ ಮಾತುಗಳೇ ಇಲ್ಲಿ ಇಂಟ್ರೆಸ್ಟಿಂಗ್ ಆಗಿದ್ರೆ .ಸರಳ ವಿಷಯಗಳನ್ನೇ ಇಟ್ಟುಕೊಂಡು ಸುಂದರವಾಗಿ ಕಾಮಿಡಿ ಪ್ರಹಸನ ನಿರೂಪಿಸೋದು ಮಲ್ಲು ಜಮಖಂಡಿ ಟೀಂ ಸ್ಪೆಷಾಲಿಟಿ.ದಿನಕ್ಕೆ ಸಾವಿರ ಸಾವಿರ ಸಂಖ್ಯೆಯಲ್ಲಿ ನೋಡುಗರನ್ನು ಸೆಳೀತಾ ಇರೋ ಮಲ್ಲು ಜಮಖಂಡಿ ಅಂಡ್ ಟೀಂ ಗೆ ಅಲ್ ದೀ ಬೆಸ್ಟ್.

Leave a Comment

error: Content is protected !!