ಇದಕ್ಕೂ ಮುಂಚೆ ಗುರೂಜಿಯವರನ್ನು ಮುಗಿಸೋಕೆ ದೊಡ್ಡ ಸ್ಕೆಚ್ ನಡೆದಿತ್ತು! ಆದರೆ ಕೂದಲೆಳೆಯ ಅಂತರದಲ್ಲಿ ಗುರೂಜಿ ಬಚಾವಾಗಿದ್ದರು

ಸರಳ ವಾಸ್ತು ತಜ್ಞ ಗುರೂಜಿಯವರ ಪ್ರಕರಣ ದಿನಕ್ಕೆ ಹನ್ನೊಂದು ಹೊಸ ಹೊಸ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ದಿನದಿಂದ ದಿನಕ್ಕೆ ಹೊಸ ಸ್ಫೋಟಕ ಮಾಹಿತಿಗಳು ತಿಳಿಯುತ್ತಿದೆ. ಚಂದ್ರಶೇಖರ್ ಗುರೂಜಿ ಅವರನ್ನು ಹೋಟೆಲ್ ನಲ್ಲಿ ಬರ್ಬರವಾಗಿ ಮುಗಿಸಿರುವುದಕ್ಕೆ ಕಾರಣ ಆಸ್ತಿ ಮತ್ತು ಹಣಕಾಸಿನ ವಿಚಾರ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಕುತೂಹಲದ ವಿಷಯ ಏನೆಂದರೆ ಗುರೂಜಿ ಅವರನ್ನು ಮುಗಿಸುವ ಸಂಚು ಹಾಕಿ ಪ್ಲಾನ್ ಮಾಡಿದ್ದು ಗುರೂಜಿಯವರ ಆಪ್ತ ವರ್ಗದವರೇ.

ಗುರೂಜಿಯವರ ಬಳಿ ಹತ್ತು ವರ್ಷಗಳ ಕಾಲ ಕೆಲಸ ಮಾಡಿದ ಸಹೋದ್ಯೋಗಿಗಳೇ ಸ್ಕೆಚ್‌ ಮಾಡಿ ಗುರೂಜಿಯವರನ್ನು ಹೋಟೆಲ್ನಲ್ಲಿ ಮುಗಿಸಿರುವುದು ನಿಜಕ್ಕೂ ಬೇಸರದ ಸಂಗತಿ. ಗುರೂಜಿಯವರು ಪಬ್ಲಿಕ್ ಫಿಗರ್. ಇವರನ್ನು ಪಬ್ಲಿಕ್ ಜಾಗದಲ್ಲಿ ಮುಗಿಸೋದು ಸುಲಭದ ಕೆಲಸವಲ್ಲ. ಗುರೂಜಿಯವರನ್ನು ಮುಗಿಸಬೇಕೆಂದು ಮಂಜುನಾಥ್ ಮತ್ತು ಮಹಾಂತೇಶ್ ತುಂಬಾ ಸಲ ಪ್ಲಾನ್ ಮಾಡಿದ್ದರು. ಇನ್ನೊಂದು ಬಾರಿ ಕೂಡ ಗುರೂಜಿಯವರನ್ನು ಮುಗಿಸೋಕೆ ಪ್ಲ್ಯಾನ್ ಮಾಡಿ ಕೂದಲೆಳೆಯ ಅಂತರದಲ್ಲಿ ಗುರೂಜಿ ತಪ್ಪಿಸಿಕೊಂಡಿದ್ದರು.

ಹೌದು ಸ್ನೇಹಿತರೆ, ಬೆಂಗಳೂರಿನಲ್ಲಿಯೇ ಗುರೂಜಿ ಮುಗಿಸೋಕೆ ಪ್ಲ್ಯಾನ್ ಮಾಡಿ ಸ್ಕೆಚ್ ಹಾಕಿದ್ರು ಜೂನ್ ಮೂರನೇ ತಾರೀಕಿನಂದು ಗುರೂಜಿಯವರನ್ನು ಇಹಲೋಕಕ್ಕೆ ಕಳಿಸೋಕ್ಕೆ ಎಲ್ಲಾ ಪ್ಲಾನ್ ಮಾಡಿಕೊಂಡಿದ್ದರ. ಜುಲೈ 3 ರಂದು ಗೋಕುಲ ರಸ್ತೆಯ ಗುರೂಜಿ ಅಪಾರ್ಟ್‌ಮೆಂಟ್ ನಲ್ಲಿ ಮಹಂತೇಶ್ ಗುರೂಜಿಯವರನ್ನು ಭೇಟಿಯಾಗಿದ್ದ. ಅದೇ ದಿನವೇ ಗುರೂಜಿಯವರನ್ನು ಕಾರ್ಯಕ್ರಮವೊಂದರಲ್ಲಿ ಮುಗಿಸೋಕೆ ಸಂಚು ಹಾಕಿದ್ದ ಆದರೆ ಅದೃಷ್ಟವಶಾತ್ ಗುರು ಜಿ ಆ ದಿನ ಪಾರಾದರು.ಅದೇ ದಿನ ಗುರೂಜಿಯವರ ಮೊಮ್ಮಗ ತೀರಿಕೊಂಡಿದ್ದ .

ಮೊಮ್ಮಗ ತೀರಿಕೊಂಡಿದ್ದರಿಂದ ಕಾರ್ಯಕ್ರಮವನ್ನು ರದ್ದು ಮಾಡಿದರು. ಈ ಕಾರಣದಿಂದ ಗುರೂಜಿ ಆ ದಿನ ಬಚಾವಾಗಿದ್ದರು.ನಂತರ ಮರುದಿನ ಜೂನ್ ನಾಲ್ಕರಂದು ಗುರೂಜಿಯವರು ಹುಬ್ಬಳ್ಳಿಯ ಪ್ರೆಸಿಡೆಂಟ್ ಹೋಟೆಲ್ ಗೆ ಹೋಗಿ ವಾಸವಾಗಿದ್ರು. ಮಹಂತೇಶ್ ಕೂಡ ಬೆಂಗಳೂರಿನಿಂದ ನೇರವಾಗಿ ಹುಬ್ಬಳ್ಳಿಗೆ ಬಂದು ಹೋಟೆಲ್ ನಲ್ಲಿ ಮೋಸ ಮಾಡಿದ್ದ. ಜೂನ್ 3ನೇ ತಾರೀಕಿನಿಂದ ಸಂಚು ಹಾಕುತ್ತಿದ್ದ ಮಹಂತೇಶ್ ಜೂನ್ ನಾಲ್ಕನೇ ತಾರೀಕಿನ ದು ಗುರೂಜಿ ಅವರ ಬಳಿ 40ನಿಮಿಷಗಳ ಕಾಲ ಹಣಕಾಸಿನ ವಿಚಾರವಾಗಿ ವಾದ ಮಾಡಿದ್ದಾನೆ. ಮಹಂತೇಶ್ ಗುರೂಜಿಯವರ ಬಳಿ ತನಗೆ ಅರುವತ್ತು ಲಕ್ಷ₹ ಮತ್ತು ಫ್ಲ್ಯಾಟ್ ಕೊಡುವಂತೆ ಜಗಳ ಮಾಡಿದ್ದ ಆದರೆ..

ಗುರೂಜಿಯವರು ಏಕವಚನದಲ್ಲಿಯೇ ಮಹಂತೇಶ್ ಬೈದು ಅವಮಾನ ಮಾಡಿ ಕಳುಹಿಸುತ್ತಾರೆ. ಇದರಿಂದ ಮಹಂತೇಶ್ ತೀವ್ರವಾಗಿ ಬೇಸರಗೊಂಡಿದ್ದ. ಮರುದಿನ ಅಂದರೆ ಜುಲೈ ಐದನೇ ತಾರೀಕಿನಂದು ತನ್ನ ಸ್ನೇಹಿತ ಮಂಜುನಾಥ್ ಜೊತೆ ಮಹಂತೇಶ್ ಪ್ರೆಸಿಡೆಂಟ್ ಹೋಟೆಲ್ ಗೆ ಬಂದು ಗುರೂಜಿ ಅವರನ್ನು ಕರೆದು ಕಾಲಿಗೆ ನಮಸ್ಕಾರ ಮಾಡುವ ನೆಪ ಮಾಡಿ ಗುರೂಜಿಯವರನ್ನು ಮುಗಿಸಿದ್ದಾನೆ. ಒಟ್ಟಿನಲ್ಲಿ ಕಳೆದ ಒಂದೆರಡು ವಾರಗಳಿಂದ ಏನಾದ್ರೂ ಮಾಡಿ ಗುರೂಜಿಯವರನ್ನು ಮುಗಿಸಲೇಬೇಕು ಎಂದು ಮಹಂತೇಶ್ ಹೊಂಚು ಹಾಕುತ್ತಿರುವುದು ತನಿಖೆಯ ಪ್ರಾಥಮಿಕ ಹಂತದಲ್ಲಿಯೇ ಸೂಚನೆ ಸಿಕ್ಕಿದೆ.

Leave a Comment

error: Content is protected !!