ಐದು ದಿನಗಳ ಹಿಂದೆಯೇ ಚಂದ್ರಶೇಖರ್ ಗುರೂಜಿ ಅವರಿಗೆ ಕೊ’ಲೆ ಮಾಡುವ ಸುಳಿವು ನೀಡಿದ್ದ ಮಹಂತೇಶ್ ಶಿರೂರ್

ಸರಳ ವಾಸ್ತು ತಜ್ಞ ಚಂದ್ರಶೇಖರ್ ಗುರೂಜಿ ಅವರ ಕೊ’ಲೆ ಆಗಿರುವುದು ರಾಜ್ಯಾದ್ಯಂತ ಸಂಚಲನ ಮೂಡಿಸಿದೆ. ಚಂದ್ರಶೇಖರ ಗುರೂಜಿ ಅವರ ಕೊನೆಯ ಘಳಿಗೆ ಹೀಗಿರುತ್ತೆ ಅಂತ ಯಾರು ಊಹಿಸಿರಲಿಕ್ಕಿಲ್ಲ. ತಮ್ಮ ಪತ್ನಿ ಅಂಕಿತ ಜೊತೆ ಹುಬ್ಬಳ್ಳಿಯ ಹೋಟೆಲಲ್ಲಿ ತಂದಿದ್ದ ಚಂದ್ರಶೇಖರ್ ಗುರೂಜಿಯವರನ್ನು ಮಂಜುನಾಥ ಮತ್ತು ಮಹಾಂತೇಶ್ ಎಂಬ ಇಬ್ಬರು ಪುರುಷರು ಚಾಕುವಿನಿಂದ ಇರಿದು ಕೃತ್ಯ ಎಸಗಿದ್ದಾರೆ. ಸುಮಾರು 60 ಬಾರಿ ಚಾಕುವಿನಿಂದ ಇಬ್ಬರು ಚು’ಚ್ಚಿದ ವಿಡಿಯೋ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ. ಇನ್ನು ಈ ಕೃತ್ಯ ಎಸಗಿರುವ ಮಹಾಂತೇಶ್ ಗುರೂಜಿಯವರಿಗೆ ಒಂದು ಕಾಲದಲ್ಲಿ ಆಪ್ತನಾಗಿದ್ದ ಎನ್ನುವುದು ಮಾತ್ರ ನಿಜಕ್ಕೂ ಆಶ್ಚರ್ಯಕರ ಸಂಗತಿ.

ಹೌದು ಯಾವ ಸಂಬಂಧಗಳು ಯಾವಾಗ ಹೇಗಿರುತ್ತೆ ಅಂತ ಹೇಳುವುದೇ ಕಷ್ಟ ಅಂದು ಅತ್ಯುತ್ತಮ ಸ್ನೇಹಿತರಾಗಿದ್ದವರು ಇಂದು ಇನ್ನಿಲ್ಲದಷ್ಟು ವೈರಿಗಳು ಆಗಬಹುದು. ಇದಕ್ಕೆ ಜ್ವಲಂತ ಉದಾಹರಣೆಯೇ ಚಂದ್ರಶೇಖರ್ ಗುರೂಜಿ ಹಾಗೂ ಮಹಾಂತೇಶ್ ಶಿರೂರು ಅವರ ಸಂಬಂಧ. ಮಹಾಂತೇಶ್ ಇದುವರಿಗೆ ಇಷ್ಟರ ಮಟ್ಟಿಗೆ ಬೆಳೆದಿದ್ದಾರೆ ಎಂದರೆ ಅದರ ಹಿಂದೆ ಚಂದ್ರಶೇಖರ್ ಗುರೂಜಿ ಅವರು ಇದ್ದಾರೆ. ಚಂದ್ರಶೇಖರ್ ಗುರೂಜಿಯವರ ಎಲ್ಲಾ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದ ವ್ಯಕ್ತಿ ಮಹಾಂತೇಶ್.

ಚಂದ್ರಶೇಖರ್ ಗುರೂಜಿ ಅವರು ಸರಳ ವಾಸ್ತುವಿನ ಮೂಲಕವೇ ಪ್ರಸಿದ್ಧರಾದವರು. ಸರಳ ವಾಸ್ತು ಕಂಪನಿಯ ಬ್ರಾಂಚ್ ಆಫೀಸನ್ನ ಹುಬ್ಬಳ್ಳಿ ಬೆಂಗಳೂರು ಮುಂಬೈ, ಮೊದಲಾದ ಕಡೆ ಆರಂಭಿಸಿದ್ದರು ಗುರೂಜಿ. ಮುಂಬೈನ ವಾಸ್ತು ಕಚೇರಿಯನ್ನು ನಿಭಾಯಿಸುತ್ತಿದ್ದದ್ದು ಈ ಮಹಾಂತೇಶ್. ಮಾತ್ರವಲ್ಲ ಗುರುಜಿಯವರ ಎಲ್ಲಾ ಆಫೀಸ್ ಗಳಿಗೂ ಆತನೇ ಹೆಡ್ ಆಗಿದ್ದ. ಇನ್ನು ಮಹಾಂತೇಶ ಹಾಗೂ ಆತನ ಜೊತೆಗಾರರ ಹೆಸರಿನಲ್ಲಿ ಚಂದ್ರಶೇಖರ್ ಗುರೂಜಿ ಸಾಕಷ್ಟು ಆಸ್ತಿಯನ್ನು ಮಾಡಿಕೊಟ್ಟಿದ್ದರು ಎಂದು ಹೇಳಲಾಗುತ್ತದೆ. ಈಗಾಗಲೇ ಸುಮಾರು ಐದು ಕೋಟಿ ಎಷ್ಟು ಆಸ್ತಿಯನ್ನು ಮಹಾಂತೇಶ್ ಮಾರಿದ್ದ ಹುಬ್ಬಳ್ಳಿಯಲ್ಲಿ ಒಂದು ಫ್ಲಾಟ್ ಅನ್ನು ಕೂಡ ಖರೀದಿ ಮಾಡಿದ್ದ ಮಹಾಂತೇಶ್ ತನ್ನ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಅಲ್ಲಿ ವಾಸವಾಗಿದ್ದ. ಇನ್ನು ಈ ಫ್ಲಾಟ್ ಅನ್ನು ಸಾಲ ಮಾಡಿ ಮಹಾಂತೇಶ ಕೊಂಡುಕೊಂಡಿದ್ದ ಎಂದು ಹೇಳಲಾಗುತ್ತಿದೆ.

ಇದಕ್ಕಿಂತ ಇನ್ನೊಂದು ಇಂಟರೆಸ್ಟಿಂಗ್ ಮಾಹಿತಿ ಎಂದರೆ ಮಹಾಂತೇಶ ಹಾಗೂ ಅವರ ಪತ್ನಿ ವನಜಾಕ್ಷಿ ಇಬ್ಬರೂ ಚಂದ್ರಶೇಖರ್ ಗುರೂಜಿ ಅವರಿಗೆ ಆಪ್ತರಾಗಿದ್ದು ಅವರ ಬಳಿಯೇ ಕೆಲಸ ಮಾಡುತ್ತಿದ್ದರು. ಮಹಾಂತೇಶ ಗಿಂತಲೂ ಮೊದಲೇ ವನುಜಾಕ್ಷಿ ಚಂದ್ರಶೇಖರ್ ಗುರೂಜಿ ಅವರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿಯ ವನಜಾಕ್ಷಿ ಹಾಗೂ ಮಹಾಂತೇಶ ಅವರಿಗೆ ಪ್ರೇಮಾಂಕರವಾಗಿದೆ. ಮನೆಯವರಿಗೂ ಗೊತ್ತಿಲ್ಲದ ಹಾಗೆ ಚಂದ್ರಶೇಖರ್ ಗುರೂಜಿಯವರೇ ಇವರಿಬ್ಬರಿಗೂ ವಿವಾಹವನ್ನು ಮಾಡಿಸಿದ್ದರು. ಇಷ್ಟರ ಮಟ್ಟಿಗೆ ಗುರುಜಿ ಹಾಗೂ ಮಹಾಂತೇಶ್ ದಂಪತಿಗಳ ವಿಶ್ವಾಸವಿತ್ತು. ಆದರೆ ಇತ್ತೀಚಿಗೆ ಕೆಲವು ವರ್ಷಗಳಿಂದ ಮಹಾಂತೇಶ್ ಹಾಗೂ ಗುರೂಜಿಯವರ ನಡುವೆ ವಿವಾದಗಳು ತಲೆಯೆತ್ತಿದ್ದವು. ಬೆನಾಮಿ ಆಸ್ತಿ ವಿಚಾರಕ್ಕೆ ಸಾಕಷ್ಟು ತಗಾದೆಗಳು ಶುರುವಾಗಿದ್ದು, ತನ್ನ ಆಸ್ತಿಯನ್ನು ಹಿಂದಿರುಗಿಸುವಂತೆ ಮಹಾಂತೇಶ್ ಗೆ ಗುರೂಜಿ ಆಗಾಗ ಕರೆ ಮಾಡಿ ತೊಂದರೆ ಕೊಡುತ್ತಿದ್ದರು ಎಂದು ಹೇಳಲಾಗಿದೆ.

ಗುರೂಜಿಯವರು ಹೀಗೆ ಆಗಾಗ ಹಣವನ್ನ ಕೇಳುತ್ತಿದ್ದಕ್ಕೆ ಬೇಸತ್ತು ಅವರ ಮೇಲೆ ದ್ವೇಷವನ್ನ ಬೆಳೆಸಿಕೊಂಡಿದ್ದ ಮಹಾಂತೇಶ್. ಇನ್ನು ಮಹಾಂತೇಶ ತನ್ನ ಜೊತೆಗಾರರೊಂದಿಗೆ ಮುಂಬೈ ಕಚೇರಿಯಲ್ಲಿ ಸಾಕಷ್ಟು ವಂಚನೆ ಮಾಡಿದ ಎನ್ನುವ ಕಾರಣಕ್ಕೆ ಆತನನ್ನು ಕೆಲಸದಿಂದ ತೆಗೆದು ಹಾಕಲಾಗಿತ್ತು. ಜೊತೆಗೆ ಆತನ ಮೇಲೆ ಕೇಸ್ ಕೂಡ ಮಾಡಲಾಗಿತ್ತು. ಈ ಎಲ್ಲಾ ಕಾರಣಗಳಿಂದ ಮಹಾಂತೇಶ ಗುರೂಜಿಯ ಮೇಲೆ ಹಗೆ ಸಾಧಿಸುತ್ತಿದ್ದ ಸರಿಯಾದ ಸಮಯಕ್ಕಾಗಿ ಕಾಯುತ್ತಿದ್ದ.

ಕೊನೆಗೂ ತನ್ನ ಪ್ಲಾನ್ ನಂತೆ ಗುರೂಜಿಯವರನ್ನ ಮುಗಿಸಿದ ಮಹಾಂತೇಶ್. ಇನ್ನು ಗುರುಜಿಯವರನ್ನ ಮುಗಿಸುವುದಕ್ಕೂ ಐದು ದಿನದ ಮುಂಚೆ ಮಹಾಂತೇಶ ಅವರ ಸಾಮಾಜಿಕ ಜಾಲತಾಣವನ್ನು ನೋಡಿದರೆ ಮಹಾಂತೇಶನ ಪ್ಲಾನ್ ನ ಬಗ್ಗೆ ಸ್ವಲ್ಪ ಹಿಂಟ್ ಸಿಗುತ್ತಿತ್ತೋ ಏನೋ! ಹೌದು ಕಳೆದ ಐದು ದಿನಗಳ ಹಿಂದೆ ಮಹಾಂತೇಶ ಫೇಸ್ಬುಕ್ ನಲ್ಲಿ ಈ ರೀತಿ ಒಂದು ಪೋಸ್ಟನ್ನು ಹಾಕಿಕೊಂಡಿದ್ದ. ‘ಅಧರ್ಮ ತಾಂಡವ ಮಾಡುತ್ತಿರುವಾಗ ದುಷ್ಟರನ್ನು ನಾಶಮಾಡಲು ಮತ್ತು ಧರ್ಮವನ್ನು ಪುನಃ ಸ್ಥಾಪಿಸಲು ನೀನು ಬರುವುದಾಗಿ ವಚನ ನೀಡಿರುವೆ ಪ್ರಭು. ಇನ್ನೂ ವಿಳಂಬವೇಕೆ ಭಗವಂತ! ಆದಷ್ಟು ಬೇಗ ಅವತರಿಸು ಪ್ರಭು ಸಂಭವಾಮಿ ಯುಗೇ ಯುಗೇ ‘ ಕೃಷ್ಣ ಹೇಳಿರುವ ಮಾತನ್ನು ಹಂಚಿಕೊಂಡಿದ್ದ ಮಹಾಂತೇಶ್. ಈ ಪೋಸ್ಟನ ನೋಡಿದರೆ ಮಹಾಂತೇಶ ಫ್ರೀ ಪ್ಲಾಂಟ್ ಆಗಿ ಈ ಹತ್ತಿಯನ್ನು ಮಾಡುವುದಕ್ಕೆ ಸಂಚು ರೂಪಿಸಿದ ಎನ್ನುವುದು ಮೇಲ್ನೋಟಕ್ಕೆ ತಿಳಿಯುತ್ತದೆ.

ಇದೀಗ ಪೊಲೀಸರ ಅತಿಥಿಯಾಗಿರುವ ಮಹಾಂತೇಶ್ ತಾನು ಬೇನಾಮಿ ಆಸ್ತಿಗೋಸ್ಕರ ಸ್ನೇಹಿತನ ಜೊತೆ ಸೇರಿ ಈ ಕೃತ್ಯ ವನ್ನು ಮಾಡಿರುವುದಾಗಿ ಹೇಳಿಕೆ ನೀಡಿದ್ದಾನೆ. ಇನ್ನು ಎಲ್ಲೆಲ್ಲಿ ಇವರುಗಳ ಆಸ್ತಿ ಎಷ್ಟು ಇದೆ ಎನ್ನುವುದರ ಬಗ್ಗೆ ಮಾಹಿತಿ ತಿಳಿಯಬೇಕಷ್ಟೆ. ಇನ್ನು ಗುರೂಜಿಯ ಕೃತ್ಯ ಎಸಗಿರುವ ಬಗ್ಗೆ ಮಾತನಾಡಿದ ವನಜಾಕ್ಷಿ ತನ್ನ ಗಂಡ ಮಾಡಿದ್ದು ಖಂಡಿತವಾಗಿಯೂ ತಪ್ಪು ಇದು ಆಸ್ತಿಕೆ ಸಂಬಂಧಪಟ್ಟ ವಿಷಯವಲ್ಲ ಎಂದು ಹೇಳಿಕೆ ನೀಡಿದ್ದಾರೆ. ಈ ಎಲ್ಲಾ ವಿಷಯಗಳ ಸುತ್ತ ಪೊಲೀಸರು ತನಿಖೆ ಆರಂಭಿಸಿದ್ದಾರೆ.

Leave a Comment

error: Content is protected !!