ಈ ಲಕ್ಷಣಗಳು ಇದ್ರೆ ಅದು ಪಿತ್ತದೋಷ ಸಮಸ್ಯೆ ಇರಬಹುದು

“ಯಾಕ್ಲೇ ತಮ್ಮ ಎಡಮಗ್ಲಲ್ ಎದ್ದಿದಿಯೇನ್ಲೇ ಪಿತ್ತ ನೆತ್ತಿಗೇರೈತೇನ್” ಎಂದು ಹೇಳುವುದನ್ನು ನಾವು ಕೇಳಿರುತ್ತೇವೆ. ಅದಕ್ಕೆ ಕಾರಣ ಪಿತ್ತದೋಷ.ಆಸಿಡಿಟಿ ಇದು ಸುಮಾರು ಎಲ್ಲರೂ ಬಳಲುತ್ತಿರುವಂತದ್ದು. ಆಯುರ್ವೇದದ ಪ್ರಕಾರ ಹೇಳುವುದಾದರೆ “ಪಿತ್ತದೋಷ”.ಇದರ ಬಗ್ಗೆ ಮತ್ತು ಇದರ ದುಷ್ಪರಿಣಾಮದ ಬಗ್ಗೆ ನಾವು ಇಲ್ಲಿ ತಿಳಿಯೋಣ.

ಪಿತ್ತದೋಷದ ಲಕ್ಷಣಗಳೇನೆಂದರೆ ಅಂಗೈ ಉರಿಯುವುದು. ಪಾದ ಉರಿಯುವುದು. ಕಣ್ಣು ಉರಿಯುವುದು. ಕಿವಿಯಲ್ಲಿ ಗುಯ್ ಎನ್ನುವ ಶಬ್ದ ಬರುವುದು.ಅಲ್ಲಲ್ಲಿ ಪಿತ್ತದ ಹುಗುಳುಗಳು ಆಗುತ್ತದೆ. ಹುಗುಳುಗಳು ಆಗಿ ಮುಖ ಊದಿಕೊಳ್ಳುತ್ತದೆ. ಹೆಚ್ಚು ತಿನ್ನದೇ ತುಂಬಾ ದಪ್ಪ ಆಗುವುದು.

ಅನೇಕ ರೀತಿಯ ಕಜ್ಜಿ ತುರಿಕೆ ಉಂಟಾಗುವುದು. ಚರ್ಮರೋಗಗಳು ಬರುವುದು. ಅಲ್ಸರ್ ಅಂದರೆ ಕರುಳಿನ ಒಳಭಾಗದಲ್ಲಿ ಗಾಯ ಮತ್ತು ಗುಳ್ಳೆಗಳು ಆಗುವುದು. ಕಣ್ಣಿನ ದೋಷ ಉಂಟಾಗುವುದು. ಚರ್ಮದ ಕ್ಯಾನ್ಸರ್ ಬರುವುದು. ಪಿತ್ತಕೋಶದಲ್ಲಿ ಗಡ್ಡೆಗಳು ಆಗುವುದು.

ಸಂಧಿವಾತ ಆಗುವುದು. ದೇಹದಲ್ಲೆಲ್ಲ ಬಿಸಿಯಾದ ಅನುಭವ ಆಗುವುದು. ಡಯಾಬಿಟಿಸ್ ಕೂಡ ಬರುವುದು. ಬೆಳಿಗ್ಗೆ ಎದ್ದ ಕೂಡಲೇ ವಾಂತಿ ಬರುವುದು. ತಲೆಸುತ್ತುವುದು. ಅರೆತಲೆನೋವು ಬರುವುದು. ದೇಹದಲ್ಲಿ ಎಷ್ಟು ಪಿತ್ತ ಇರಬೇಕೋ ಅಷ್ಟು ಇಟ್ಟುಕೊಳ್ಳಬೇಕು ಉಳಿದಿದ್ದನ್ನು ತೆಗೆದುಕೊಂಡರೆ ಈ ಎಲ್ಲಾ ಲಕ್ಷಣಗಳಿಂದ ದೂರ ಇರಬಹುದು. ಅರೆ ತಲೆನೋವು ಜಾಸ್ತಿಯಾದಾಗ ಹೆಚ್ಚು ನೀರು ಕುಡಿದು ವಾಂತಿ ಮಾಡುವುದು ಒಳ್ಳೆಯದು. ಇದರಿಂದ ದೇಹದ ಪಿತ್ತ ಹೊರ ಹೋಗುತ್ತದೆ. ಇದರಿಂದ ಅರೆ ತಲೆನೋವು ಕಡಿಮೆ ಆಗುತ್ತದೆ.

ದೇಹದಲ್ಲಿ ಪಿತ್ತದೋಷದಿಂದ 100ಕ್ಕಿಂತಲೂ ಹೆಚ್ಚು ರೋಗಗಳು ಬರುತ್ತದೆ. ಇದಕ್ಕೆ ಮಾತ್ರೆಗಳನ್ನು ತೆಗೆದುಕೊಳ್ಳುವುದು ತಪ್ಪು. ಈ ಪಿತ್ತದೋಷದಿಂದ ಒಳ್ಳೆಯ ಆರೋಗ್ಯ ಹೊಂದಲು ಸಾಧ್ಯವಿಲ್ಲ. ಇನ್ನು ಪಿತ್ತದೋಷದ ಪರಿಣಾಮವಾಗಿ ಮಾನಸಿಕವಾಗಿ ತೊಂದರೆ ಆಗುತ್ತದೆ. ದೇಹಕ್ಕಷ್ಟೇ ಅಲ್ಲ ಮನಸಿಗೂ ತೊಂದರೆ ಆಗುತ್ತದೆ.

ಮಾನಸಿಕವಾಗಿ ಅಂದರೆ ಬೇಗನೆ ಉದ್ವೇಕಕ್ಕೆ ಒಳಗಾಗುತ್ತಾರೆ. ಬೇಗನೆ ಸಿಟ್ಟು ಬರುತ್ತದೆ. ಸಹನೆಯ ಮಟ್ಟ ಕೆಳಗೆ ಇಳಿಯುತ್ತದೆ. ಬೇಗ ಖುಷಿಯಾಗುತ್ತದೆ. ಬೇಗ ದುಃಖ ಆಗುತ್ತದೆ. ಬೇಗ ಅಳು ಬರುತ್ತದೆ. ಚಿಕ್ಕ ಚಿಕ್ಕ ವಿಚಾರಗಲಾಗಳಿಗೂ ಬೇಗ ಸಿಟ್ಟು ಬರುತ್ತದೆ.ನಾನೇ ಶ್ರೇಷ್ಠ ಎಂಬ ಭ್ರಮೆ ಇರುತ್ತದೆ.ಇವೆಲ್ಲ ಪಿತ್ತದೋಷದ ಲಕ್ಷಣಗಳು ಮತ್ತು ದುಷ್ಪರಿಣಾಮಗಳು.

Leave a Comment

error: Content is protected !!