ಗೆಳೆಯ ಕರೆದ ಅಂತ ಹೋಟೆಲ್ ರೂಮಿಗೆ ಹೋದ ಯುವತಿ. ನಂತರ ವಾಟ್ಸ್ ಆ್ಯಪ್ ಸ್ಟೇಟಸ್ ನಿಂದ ಆದ ಅವಾಂತರ ಏನು ಗೊತ್ತಾ

ಗಂಡು ಮತ್ತು ಹೆಣ್ಣಿನ ನಡುವೆ ಇರುವ ಸಂಬಂಧದ ವ್ಯಾಮೋಹ ಅತಿರೇಕಕ್ಕೆ ಏರಿದರೆ ಯಾವ ಹಂತವನ್ನು ತಲುಪಬಹುದು. ಹಾಗೆ ವ್ಯಾಮೋಹದ ಮತ್ತಿನಲ್ಲಿ ಗಂಡು ಮತ್ತು ಹೆಣ್ಣು ಅರಿವಿಲ್ಲದೆ ತಪ್ಪುಗಳನ್ನು ಮಾಡುವ ಸಾಧ್ಯತೆ ಇರುತ್ತದೆ. ಕೇರಳದ ರಾಜಧಾನಿ ತಿರುವನಂತಪುರನ ಹೋಟೆಲ್ ಒಂದರಲ್ಲಿ ನಡೆದ ಪ್ರಕರಣ ಇದೀಗ ಇಡೀ ದೇಶವನ್ನೇ ಬೆರಗು ಮೂಡಿಸಿದೆ. ಹಾಗಾದ್ರೆ ಕೇರಳದ ಆ ಹೊಟೇಲಿನಲ್ಲಿ ನಡೆದ ಘಟನೆಯಾದರೂ ಏನೆಂದು ತಿಳಿದುಕೊಳ್ಳೋಣ ಬನ್ನಿ.

ಗಾಯತ್ರಿ ಎಂಬ ಮಹಿಳೆ ಕೇರಳದ ಕಟ್ಟಕಾಡು ಮೂಲದವಳು ಮತ್ತು ಪ್ರವೀಣ್ ಎಂಬ ಪುರುಷ ಕೊಲ್ಲಂ ಮೂಲದವನು ಪರಸ್ಪರ ಪ್ರೀತಿ ಮಾಡುತ್ತಿದ್ದರು. ಪ್ರವೀಣ್ ಎಂಬ ಪುರುಷನಿಗೆ ಮೊದಲೇ ಮದುವೆಯಾಗಿತ್ತು ಆದರೂ ಕೂಡ ಗಾಯತ್ರಿ ಈ ವ್ಯಕ್ತಿಯ ಜತೆ ಸಂಬಂಧ ಹೊಂದಿದ್ದಳು. ಕದ್ದು ಮುಚ್ಚಿ ಇಬ್ಬರು ಕೂಡ ದೇವಸ್ಥಾನದಲ್ಲಿ ಮದುವೆ ಆಗಿದ್ದರು. ಗಾಯತ್ರಿ ಪ್ರವೀಣ್ ನನ್ನು ತುಂಬಾ ಇಷ್ಟಪಡುತ್ತಿದ್ದಳು. ಪ್ರವೀಣ್ ನನ್ನು ಜೀವ ಎಂದು ಗಾಯತ್ರಿ ನಂಬಿದ್ದಳು. ಆದರೆ ಪ್ರವೀಣ್ ಆಗಲೇ ಮದುವೆಯಾಗಿ ಇನ್ನೊಂದು ಸಾಂಸಾರಿಕ ಜೀವನ ನಡೆಸುತ್ತಿದ್ದ.

ಆಗಾಗ ಇಬ್ಬರು ಕೂಡ ಕದ್ದುಮುಚ್ಚಿ ಭೇಟಿಯಾಗಿ ಸಂಬಂಧವನ್ನು ಹೊಂದಿದ್ದರು. ಪ್ರವೀಣ್ ಕರೆದಾಗಲೆಲ್ಲ ಗಾಯತ್ರಿ ಪ್ರವೀಣ್ ಕರೆದಲ್ಲಿಗೆ ಹೋಗುತ್ತಿದ್ದರು ಪ್ರವೀಣ್ ಆಗಾಗ ಗಾಯತ್ರಿಯನ್ನು ಹೋಟಲಿಗೆ ಕೂಡ ಕರೆಸಿ ಕೊಳ್ಳುತ್ತಿದ್ದ. ಇದೇ ತಿಂಗಳು ಮಾರ್ಚ್ 5 ನೇ ತಾರೀಕು ರವಿವಾರದ ದಿನ ಗಾಯತ್ರಿ ಬಳಿ ಪ್ರವೀಣ್ ತಿರುವನಂತಪುರದ ಹೋಟೆಲ್ ರೂಮ್ ಗೆ ಬರುವಂತೆ ಹೇಳಿದ್ದಾನೆ. ಗಾಯತ್ರಿ ರವಿವಾರ ರಾತ್ರಿ ಪ್ರವೀಣ್ ಹೇಳಿದ್ದ ಹೋಟೆಲ್ ರೂಮ್ ಗೆ ಹೋಗಿದ್ದಾಳೆ.

ಆ ರಾತ್ರಿ ಗಾಯತ್ರಿ ಪ್ರವೀಣ್ ಬಳಿ ನನ್ನನ್ನು ಮದುವೆಯಾಗು ಎಂದು ಹಟ ಹಿಡಿದು ಕುಳಿತುಕೊಳ್ಳುತ್ತಾಳೆ. ಆದರೆ ಪ್ರವೀಣ್ ಗಾಯತ್ರಿಯನ್ನು ಆ ದಿನ ಕರೆಸಿಕೊಂಡಿದ್ದು ತಮ್ಮಿಬ್ಬರ ಸಂಬಂಧವನ್ನು ಅಂತ್ಯ ಮಾಡುವುದಕ್ಕೆ. ಗಾಯತ್ರಿ ಪದೇಪದೆ ನನ್ನನ್ನು ನಿನ್ನ ಜೋತೆ ಕರೆದುಕೊಂಡು ಹೋಗಿ ಎಂದು ಪ್ರವೀಣನನ್ನು ಪೀಡಿಸುತ್ತಿದ್ದಳು. ಆದರೆ ಪ್ರವೀಣ್ ಮಾತ್ರ ನಾನು ಇನ್ನು ಮುಂದೆ ನಿನ್ನ ಜೊತೆ ಸಂಬಂಧವನ್ನು ಹೊಂದಲು ಸಾಧ್ಯವಿಲ್ಲ ನನಗೆ ಮದುವೆಯಾಗಿದೆ. ನಮ್ಮಿಬ್ಬರ ಸಂಬಂಧವನ್ನು ಇಲ್ಲಿಗೆ ಮುಗಿಸೋಣ ಎಂದು ಒತ್ತಾಯಿಸುತ್ತಿದ್ದ.

ಆಗ ಕೋಪಗೊಂಡ ಗಾಯತ್ರಿ ತನ್ನ ಮೊಬೈಲೆತ್ತಿಕೊಂಡು ಅವರಿಬ್ಬರೂ ದೇವಸ್ಥಾನದಲ್ಲಿ ಕದ್ದು ಮುಚ್ಚಿ ಮದುವೆಯಾದ ಫೋಟೋವನ್ನು ವಾಟ್ಸಪ್ ಸ್ಟೇಟಸ್ ನಲ್ಲಿ ಹಾಕಿ ಬಿಡುತ್ತಾಳೆ. ಆಗ ಪ್ರವೀಣ್ ಗೆ ತನ್ನ ಗುಟ್ಟನ್ನು ಬಯಲಾಯ್ತು ಎಂಬ ಕೋಪದಲ್ಲಿ ಗಾಯತ್ರಿಯನ್ನು ಕೊ ಲೆ ಮಾಡುತ್ತಾನೆ. ತಾನು ಮಾಡಿದ ತಪ್ಪನ್ನು ಮುಚ್ಚಿಹಾಕಲು ಪ್ರವೀಣ್ ಆ ರಾತ್ರಿ ಗಾಯತ್ರಿ ಮೊಬೈಲ್ ಗೆ ಬಂದಿದ್ದ ಎಲ್ಲಾ ಕರೆಗಳನ್ನು ಸ್ವೀಕರಿಸಿ ಗಾಯತ್ರಿ ಸಂಬಂಧಿಕರ ಬಳಿ ಮಾಡಿದ್ದಾನೆ. ಗಾಯತ್ರಿ ನನ್ನ ಜೊತೆಗೆ ಇದ್ದಾಳೆ ಎಂದು ಬಿಂಬಿಸಿದ್ದಾನೆ. ಅಷ್ಟೇ ಅಲ್ಲದೆ ಗಾಯತ್ರಿ ವಾಟ್ಸಪ್ ಸ್ಟೇಟಸ್ ನಲ್ಲಿ ಹಾಕಿದ್ದ ಫೋಟೋವನ್ನು ಪ್ರವೀಣ್ ತನ್ನ ಫೇಸ್ಬುಕ್ ಖಾತೆಯಲ್ಲಿ ಶೇರ್ ಮಾಡಿ “ಲವ್ ಯು ಟೂ” ಎಂದು ಬರೆದಿದ್ದಾನೆ.

ಬೆಳಿಗ್ಗೆ ಆಗುವುದರೊಳಗಡೆ ಪ್ರವೀಣ್ ಹೋಟೆಲ್ನಿಂದ ಪರಾರಿಯಾಗಿರುತ್ತಾನೆ. ತದನಂತರ ಹೋಟೆಲ್ ಸಿಬ್ಬಂದಿ ಗಾಯತ್ರಿಯ ಅನಾಥ ಶ ವವನ್ನು ನೋಡಿ ಪೊಲೀಸರಿಗೆ ಕರೆ ಮಾಡಿದ್ದಾರೆ. ಪ್ರಕರಣವನ್ನು ಚುರುಕು ಗೊಳಿಸುತ್ತಿದ್ದಂತೆ ಪ್ರವೀಣ್ ಗೆ ಭಯವಾಗುತ್ತದೆ. ತಕ್ಷಣ ತನ್ನ ವಕೀಲರ ಬಳಿ ಹೋಗಿ ಎಲ್ಲ ಸತ್ಯವನ್ನು ಬಾಯ್ಬಿಟ್ಟಿದ್ದಾನೆ. ಆಗ ವಕೀಲರು ನೀನು ತಪ್ಪನ್ನು ಒಪ್ಪಿಕೊಳ್ಳುವುದು ಒಳ್ಳೆಯದು ಎಂದು ಹೇಳಿದ್ದಾರೆ ತಕ್ಷಣ ಪ್ರವೀಣ್ ಪುನೀತ್ ಪ್ರವೀಣ್ ಪೊಲೀಸರ ಬಳಿ ಹೋಗಿ ತನ್ನ ಎಲ್ಲಾ ತಪ್ಪು ಒಪ್ಪಿಕೊಂಡಿದ್ದಾನೆ. ನೋಡಿ ಗೆಳೆಯರೆ ಒಂದೇ ಒಂದು ವಾಟ್ಸ್ ಆ್ಯಪ್ ಸ್ಟೇಟಸ್ ತಮ್ಮ ಜೀವನವನ್ನೇ ತಲೆಕೆಳಗೆ ಮಾಡುತ್ತಿದೆ ಎನ್ನುವುದಕ್ಕೆ ಇದು ಉದಾಹರಣೆ.

Leave a Comment

error: Content is protected !!