ಇಂಟಲಿಜೆನ್ಸ್‌ ಮಾಜಿ ಅಧಿಕಾರಿಯನ್ನೇ ಇಂಟಲಿಜೆಂಟ್‌ ಆಗಿ ಮುಗಿಸೋಕೆ ಹೋಗಿ ತಗಲಾಕ್ಕೊಂಡ ಅಪರಾಧಗಳು

ಈ ಕಲಿಯುಗದಲ್ಲಿ ಅದೆಷ್ಟು ಅಪರಾಧಗಳು ನಡೆಯುತ್ತದೆ ಎಂಬುದು ಲೆಕ್ಕಕ್ಕೆ ಸಿಗುವುದಿಲ್ಲ. ಕೊಲೆ, ಕಳ್ಳತನ, ದರೋಡೆಯಷ್ಟೇ ಅಲ್ಲ; ಭೂಮಿಯಲ್ಲಿನ ಸಂಪತ್ತನ್ನು ಹಾಳು ಮಾಡುವುದು, ಅರಣ್ಯವನ್ನು ನಾಶ ಮಾಡುವುದು, ಪರಿಸರವನ್ನು ಮಲಿನಗೊಳಿಸುವುದು, ಪ್ರಾಣಿ-ಪಕ್ಷಿಗಳ ಉಳಿವನ್ನು ಅಳಿಸುವುದು ಅಪರಾಧವೆ. ಲಂಚ, ಕಲುಷಿತ ಆಹಾರ ಪೂರೈಕೆ, ವ್ಯಾಪಾರ ವ್ಯವಹಾರಗಳಲ್ಲಿ ಮೋಸ, ವಂಚನೆ, ಕಳಪೆ ಕಾಮಗಾರಿ ಇದೊಂದು ವಿವಿಧ ಅಪರಾಧಗಳು.

ಅಪರಾಧಗಳನ್ನು ಎಸಗಿದವರು, ಕೈದಿಗಳು ಯಾವಾಗಲೂ ತಪ್ಪಿಸಿಕೊಳ್ಳಲು ಆಲೋಚಿಸುತ್ತಿರುತ್ತಾರೆ. ಇವರ ಬಗ್ಗೆ ಸುಳಿವು ನೀಡಿದವರನ್ನು, ಹಿಡಿದ ಪೊಲೀಸರನ್ನು, ಹಿಡಿಯಲು ಕಾರಣರಾದಾರರನ್ನು ಸಾಮಾನ್ಯವಾಗಿ ದ್ವೇಷಿಸುತ್ತಲೇ ಇರುತ್ತಾರೆ. ಹೀಗೆ ಮುಗ್ಧ ಜನರು, ಪೊಲೀಸರು, ಗುಪ್ತಚರ ಇಲಾಖೆಯವರು ಎಚ್ಚರಿಕೆಯಿಂದಲೇ ಇರಬೇಕಾಗುತ್ತದೆ. ಇದನ್ನು ಮೀರಿ ಕೆಲವೊಮ್ಮೆ ಕಹಿ ಘಟನೆಗಳು ನಡೆದು ಹೋಗುತ್ತವೆ. ಎಷ್ಟು ದಿನದ ನಂತರ ದ್ವೇಷ ಸಾಧಿಸಲು ಯಾರು ಏನನ್ನು ಮಾಡುತ್ತಾರೆ ಎಂಬುದನ್ನು ಹೇಳಲು ಸಾಧ್ಯವಿಲ್ಲ.

ಗುಪ್ತಚರ ಇಲಾಖೆಯಲ್ಲಿ ಕಾರ್ಯನಿರ್ವಹಿಸಿ ನಿವೃತ್ತಿ ಜೀವನವನ್ನು ಆನಂದಿಸುತ್ತಿದ್ದ ಮೈಸೂರಿನ ಹಿರಿಯರೊಬ್ಬರ ಕಥೆ ಇಲ್ಲಿದೆ. ಮೈಸೂರಿನಲ್ಲಿ ವಾಸಿಸುತ್ತಿದ್ದ ಹಿರಿಯರೊಬ್ಬರು ಮೊದಲು ಗುಪ್ತಚರ ಇಲಾಖೆಯಲ್ಲಿ ಸೇವೆಗೈದ್ದಿದ್ದರು. ಅವರಿಗೆ ಇಬ್ಬರು ಮಕ್ಕಳು. ಮಗ ಮಗಳಿಬ್ಬರಿಗೂ ಒಳ್ಳೆಯ ವಿದ್ಯಾಭ್ಯಾಸ ನೀಡಿದ್ದು, ಅವರು ದೂರದ ಅಮೇರಿಕಾದಲ್ಲಿ ತಮ್ಮ ಜೀವನವನ್ನು ನಡೆಸುತ್ತಿದ್ದಾರಂತೆ. ಗಂಡ ಹೆಂಡತಿ ಇಬ್ಬರೇ ಮೈಸೂರಿನ ಮನೆಯಲ್ಲಿ ವಾಸವಾಗಿದ್ದರು. ಬೆಳಿಗ್ಗೆ ಸಂಜೆ ಎರಡು ಹೊತ್ತು ಆರೋಗ್ಯದ ದೃಷ್ಟಿಯಿಂದ ನಿಯಮಿತವಾದ ನಡಿಗೆ, ಉಳಿದ ಹೊತ್ತಿನಲ್ಲಿ ಮಡದಿಯೊಂದಿಗೆ ಮನೆ ಕೆಲಸ, ಅಕ್ಕ ಪಕ್ಕದವರೊಂದಿಗೆ ಮಾತು ಹೀಗೆ ನಿವೃತ್ತಿ ಜೀವನವನ್ನು ಆನಂದದಿಂದ ಕಳೆಯುತ್ತಿದ್ದರು.

ಅದೊಂದು ದಿನ ಎಂದಿನಂತೆ ವಾಕಿಂಗ್ ಹೋಗಿದ್ದಾಗ ಕಾರೊಂದು ಬಂದು ಡಿಕ್ಕಿ ಹೊಡೆದು, ಆಸ್ಪತ್ರೆಗೆ ದಾಖಲಾದರೂ ಜೀವ ಉಳಿಯಲು ಸಾಧ್ಯವಾಗಲಿಲ್ಲ. ಇದೊಂದು ಆಕ್ಸಿಡೆಂಟ್ ನಿಂದಾದ ಸಾವು ಎಂದಷ್ಟೇ ನಂಬಲಾಗಿತ್ತು. ಆದರೆ ಮಾಜಿ ಅಧಿಕಾರಿಗಳ ಅಳಿಯ ಪೊಲೀಸರಿಗೆ, ಅವರೊಂದಿಗೆ ವಾಗ್ದಾಳಿ ನಡೆಸಿ ಕಿರಿಕಿರಿ ಮಾಡುತ್ತಿದ್ದ ಕುಟುಂಬವೊಂದರ ಬಗ್ಗೆ ಸುಳಿವು ನೀಡಿದ್ದರು. ತನಿಖೆ ನಡೆಸುತ್ತಾ ಹೋದಂತೆ ಪೊಲೀಸರಿಗೆ ಇದೊಂದು ಉದ್ದೇಶಪೂರ್ವಕವಾದ ಕೊಲೆ ಎಂಬುದು ಅರಿವಿಗೆ ಬರುತ್ತಾ ಹೋಯಿತು. ಅದೊಂದು ಕಿತ್ತಾಟದ ಸುಳಿವು ಸಾವಿನ ಹಿಂದಿನ ಕಾರಣವನ್ನು ಬಹಿರಂಗಪಡಿಸುತ್ತಾ ಕೇಸ್ಗೆ ಹೊಸ ತಿರುವು ನೀಡಿದೆಯಂತೆ.

Leave a Comment

error: Content is protected !!