ಭಾರತದಲ್ಲಿ ದೇವಸ್ಥಾನಗಳು ಎತ್ತರದಲ್ಲಿರುತ್ತವೆ ಯಾಕೆ ಗೊತ್ತೇ

ನಾವೆಲ್ಲರೂ ಇಂದು ನೋಡುವ ಹಾಗೆ ದೇವಸ್ಥಾನಗಳನ್ನು ಎಲ್ಲೆಂದರಲ್ಲಿ ನಿರ್ಮಿಸುತ್ತಾರೆ ಹಳ್ಳ ಕೊಳ್ಳಗಳಲ್ಲಿ ರಸ್ತೆಯ ಬದಿಗಳಲ್ಲಿ ಇನ್ನೂ ಹತ್ತು ಹಲವಾರು ಕಟ್ಟಬಾರದ ಜಾಗಗಳಲ್ಲಿ ದೇವಸ್ಥಾನಗಳನ್ನು ನಿರ್ಮಿಸುತ್ತಿದ್ದಾರೆ ಆದರೆ ದೇವಸ್ಥಾನಗಳನ್ನು ಹಾಗೆ ನಿರ್ಮಿಸುವುದು ಸೂಕ್ತವಲ್ಲ ಈ ಕಾರಣದಿಂದಾಗಿಯೇ ಪ್ರಾಚೀನ ಕಾಲದಿಂದಲೂ ನಮ್ಮ ಪೂರ್ವಜರು ದೇವಸ್ಥಾನಗಳನ್ನು ಎತ್ತರದ ಜಾಗಗಳಲ್ಲಿ ಬೆಟ್ಟದ ಮೇಲ್ಭಾಗದಲ್ಲಿ ನಿರ್ಮಿಸುತ್ತಿದ್ದರು ಆ ಕಾರಣದಿಂದಾಗಿಯೇ ಇಂದಿಗೂ ಹಲವಾರು ನಮ್ಮ ಪ್ರಾಚೀನ ಶಕ್ತಿ ಸ್ಥಳಗಳು ದೇವಾಲಯಗಳು ಬೆಟ್ಟದ ಮೇಲೆಯೇ ಇರುವುದು ನಮ್ಮ ಪೂರ್ವಜರು ದೇವಸ್ಥಾನಗಳನ್ನು ಎತ್ತರದ ಸ್ಥಳಗಳಲ್ಲಿ ನಿರ್ಮಿಸುವುದಕ್ಕೂ ಹಲವಾರು ಕಾರಣಗಳಿವೆ ಹಾಗಾದ್ರೆ ಆ ಕಾರಣಗಳ ಬಗ್ಗೆ ಒಂದಷ್ಟು ಮಾಹಿತಿಯನ್ನು ಅರಿಯೋಣ ಬನ್ನಿ

ಸಾಮಾನ್ಯವಾಗಿ ದೇವಸ್ಥಾನಗಳನ್ನು ನಾವು ಎತ್ತರದ ಸ್ಥಳಗಳಲ್ಲಿ ಮತ್ತು ಬೆಟ್ಟದ ಮೇಲ್ಭಾಗದಲ್ಲಿ ನಿರ್ಮಿಸುವುದರಿಂದ ಜನರು ಕಷ್ಟ ಪಟ್ಟು ಆ ಬೆಟ್ಟವನ್ನು ಹತ್ತಿಕೊಂಡು ಬರುತ್ತಿದ್ದರು ಈ ಕಾರಣ ದೇವರನ್ನು ತಲುಪುವುದು ತಾವಂದುಕೊಂದಷ್ಟೂ ಸುಲಭವಲ್ಲ ಎಂಬುದು ಜನರಿಗೆ ಮಾನವರಿಕೆಯಾಗುತ್ತಿತ್ತು ಆದ್ದರಿಂದಲೇ ಜನರು ಕಷ್ಟ ಪಟ್ಟು ದೇವರನ್ನು ತಲುಪಲು ಬಹಳ ಭಕ್ತಿ ಭಾವಗಳಿಂದ ಮುಂದಡಿ ಇಡುತ್ತಿದ್ದರು

ಅಲ್ಲದೇ ಜನರು ದೇವರನ್ನು ದರ್ಶನ ಮಾಡಲು ಬೆಟ್ಟವನ್ನು ಹತ್ತಿ ಬರುತ್ತಿದ್ದರಾದ್ದರಿಂದ ಜನರ ದೇಹಕ್ಕೆ ಉತ್ತಮ ವ್ಯಾಯಾಮವಾದಂತೆ ಆಗುತ್ತಿತ್ತು ಅಲ್ಲದೇ ಈ ರೀತಿ ಬೆಟ್ಟದ ಮೇಲೆ ಬಂದು ತಲುಪಿದ ಮೇಲೆ ಅಲ್ಲಿ ಅವರಿಗೆ ಪರಿಶುದ್ಧವಾದ ಗಾಳಿ ದೊರಕುತ್ತಿತ್ತು ಹೀಗೆ ಮಾಡುವುದರಿಂದ ಬೆಟ್ಟದ ಮೇಲಿನ ದೇವಸ್ಥಾನದಲ್ಲಿ ದೇವರ ದರ್ಶನದ ನಂತರ ಧ್ಯಾನ ಮಾಡಲು ಏಕಾಗ್ರತೆ ಮೂಡುತ್ತಿತ್ತು ಮತ್ತು ಅವರ ಮನಸ್ಸು ಲೌಕಿಕತೆಯಿಂದ ಅಲೌಕಿಕತೆಯ ಕಡೆಗೆ ವಾಲಿ ಅವರು ಮಾಡುವ ಧ್ಯಾನ ದೇವರನ್ನು ತಲುಪುತ್ತಿತ್ತು

ಅಷ್ಟೇ ಅಲ್ಲದೇ ಪ್ರಾಚೀನ ಕಾಲದಲ್ಲಿ ಬೆಟ್ಟದ ಅಥವಾ ಎತ್ತರದ ಭಾಗದಲ್ಲಿರುವ ದೇವಸ್ಥಾನಗಳಲ್ಲಿ ಅತ್ಯಧಿಕ ಸಂಪತ್ತಿನ ಶೇಖರಣೆ ಇರುತ್ತಿತ್ತು ಆದ್ದರಿಂದ ಸಂಪತ್ತನ್ನು ಕದಿಯುವ ಕಳ್ಳರೂ ಸಹ ಹೆಚ್ಚಾಗಿರುತ್ತಿದ್ದರು ದೇವಸ್ಥಾನವು ಬೆಟ್ಟದ ಮೇಲೆ ಇರುವುದರಿಂದ ಕಳ್ಳರು ಬೆಟ್ಟದ ಮೇಲೆ ಬರುವುದರೊಳಗಾಗಿ ಅವರನ್ನು ನಾಶಪಡಿಸಬಹುದಿತ್ತು ಅಷ್ಟೇ ಅಲ್ಲದೇ ಪ್ರವಾಹದ ಸಂದಭದಲ್ಲಿ ಬೆಟ್ಟದ ಮೇಲೆ ಪ್ರವಾಹ ಪೀಡಿತರಿಗೆ ಆಶ್ರಯ ಕಲ್ಪಿಸಲಾಗುತ್ತಿತ್ತು

Leave a Comment

error: Content is protected !!