ಸ್ನೇಹಿತರೆ, ಸೆಲೆಬ್ರಿಟಿಗಳ ಬಗ್ಗೆ ಎಲ್ಲರಿಗೂ ಅವರದ್ದೇ ಆದ ಕಲ್ಪನೆಗಳು ಇರುತ್ತವೆ. ಅವರ ಜೀವನ ಶೈಲಿ ಎಷ್ಟು ಅದ್ದೂರಿಯಾಗಿ ಇರುತ್ತದೆ, ಪಾರ್ಟಿ, ಫನ್ ಅಂತ ಮಜಾ ಮಾಡ್ತಾರೆ ಎಂತೆಲ್ಲ ಜನ ಭಾವಿಸುತ್ತಾರೆ. ಇನ್ನು ಸೆಲೆಬ್ರಿಟಿಗಳು ಅಂದ್ರೆ ಸಿನಿಮಾ ಕ್ಷೇತ್ರದವರು ಮಾತ್ರವಲ್ಲ, ಕ್ರಿಕೆಟಿಗರ ಬಗೆಗೂ ಜನರಿಗೆ ಸಾಕಷ್ಟು ಕುತೂಹಲ ಇರುತ್ತೆ. ಕ್ರಿಕೆಟ್ ಆಟಗಾರರು ಸಹ ಸಾಕಷ್ಟು ಪಾರ್ಟಿಗಳಲ್ಲಿ ಭಾಗವಹಿಸಿರುವುದು, ಎಲ್ಲರೂ ಒಟ್ಟಾಗಿ ಸೇರಿ ಎಂಜಾಯ್ ಮಾಡಿರುವುದನ್ನು ನೋಡುತ್ತೇವೆ. ಇದೆಲ್ಲವೂ ತಕ್ಕಮಟ್ಟಿಗೆ ಸತ್ಯವೂ ಇರಬಹುದು. ಅವರವರ ವಯಕ್ತಿಕ ಜೀವನ. ಕ್ರಿಕೆಟ್ ಹೊರತೂ ಅವರಿಗೆ ಒಂದು ಜೀವನ ಇದೆ ಅನ್ನೋದನ್ನ ನಾವು ಮರೆಯೋಹಾಗಿಲ್ಲ. ಹಾಗಂತ ಎಲ್ಲಾ ಸ್ಟಾರ್ ಕ್ರಿಕೆಟಿಗರು ಧೂಮಪಾನ ಮಧ್ಯಪಾನ ಅಥವಾ ಇನ್ನಿತರ ಚಟಗಳನ್ನ ಹೊಂದಿರುತ್ತಾರೆ ಅಂತ ಭಾವಿಸಿದರೆ ಅದು ಖಂಡಿತ ತಪ್ಪು.

ಕ್ರಿಕೆಟ್ ಗಳಲ್ಲಿಯೂ ಸಾಕಷ್ಟು ಜನ ಹಾಟ್ ಡ್ರಿಂಕ್ ಇರಲಿ ಕನಿಷ್ಠಪಕ್ಷ ವೈನ್ ಕೂಡ ಕುಡಿಯದೇ ಇರುವವರು ಇದ್ದಾರೆ. ಹಾಗಾದ್ರೆ ಟೀಮ್ ಇಂಡಿಯಾ ಕ್ರಿಕೆಟ್ ನಲ್ಲಿ. ಆಟ ಆಡುವ ಯಾವ ಆಟಗಾರರು ಮದ್ಯಪಾನ, ಧೂಮಪಾನ ಯಾವುದನ್ನು ಮಾಡುವುದಿಲ್ಲ ಎನ್ನುವುದನ್ನು ಹೇಳುತ್ತೇವೆ ಈ ಲೇಖನವನ್ನು ಪೂರ್ತಿಯಾಗಿ ಓದಿ. ಭುವನೇಶ್ವರ ಕುಮಾರ್, ಟೀಮ್ ಇಂಡಿಯಾದ ಭರವಸೆಯ ಆಟಗಾರ ಇವರು. ಇವರು ಒಬ್ಬ ಅತ್ಯುತ್ತಮ ಸ್ವಿಂಗ್ ಬೌಲರ್. ಬಲ ಹಾಗೂ ಎಡ ಎರಡು ಕಡೆ ಚಂಡನ್ನು ಸ್ವಿಂಗ್ ಚಾಲಾಕಿ ಆಟಗಾರ. ವೇಗದ ಬೌಲರ್ ಕೂಡ ಆಗಿರುವ ಭುವನೇಶ್ವರ ಕುಮಾರ್, ಬಹಳ ಸರಳ ವ್ಯಕ್ತಿ. ಇವರು ಮದ್ಯಪಾನ, ಧೂಮಪಾನ ಇಂತಹ ಯಾವುದೇ ಹವ್ಯಾಸವನ್ನು ಇಟ್ಟುಕೊಂಡಿಲ್ಲ.

ಗೌತಮ್ ಗಂಭೀರ್. ದೆಹಲಿಯ ಎಂಪಿ ಆಗಿರುವ ಗೌತಮ್ ಗಂಭೀರ್ ಟೀಮ್ ಇಂಡಿಯಾದ ಅತ್ಯುತ್ತಮ ಆಟಗಾರರಲ್ಲಿ ಒಬ್ಬರು. ಟೀಮ್ ಇಂಡಿಯಾ ವಿಶ್ವಕಪ್ ಗೆಲುವಲ್ಲಿ ಗೌತಮ್ ಗಂಭೀರ ಅವರದ್ದು ಮಹತ್ವದ ಪಾತ್ರ. ಯಾಕಂದರೆ ಇವರು ಓಪನಿಂಗ್ ಬ್ಯಾಟ್ಸ್ ಮ್ಯಾನ್ ಆಗಿದ್ದವರು. ಎಡಗೈ ಬ್ಯಾಟ್ಸ್ ಮ್ಯಾನ್ ಕೂಡ ಹೌದು. ಇನ್ನು ಇವರು ಕೂಡ ಮಧ್ಯಪಾನವಾಗಲಿ ಧೂಮಪಾನವಾಗಲಿ ಮಾಡುವುದಿಲ್ಲ.

ರಾಹುಲ್ ದ್ರಾವಿಡ್. ಟೀಮ್ ಇಂಡಿಯಾದ ಕೋಚ್ ಆಗಿರುವ ರಾಹುಲ್ ದ್ರಾವಿಡ್, ಬ್ಯಾಟಿಂಗ್ ಗೋಡೆ ಎಂದು ಕರೆಸಿಕೊಂಡಿದ್ದಾರೆ. ಇವರು ಟೆಸ್ಟ್ ಕ್ರಿಕೆಟ್ ಆಡಲು ನಿಂತರೆ ಇವರನ್ನು ಔಟ್ ಮಾಡಲು ಬೌಲರ್ ಗಳು ಕಷ್ಟ ಪಡುತ್ತಿದ್ದರು. ಪಾಕಿಸ್ತಾನದ ಕ್ರಿಕೆಟ್ ಆಟಗಾರ ಶಾಹಿದ್ ಅಕ್ಬರ್ ಅವರನ್ನು ಪ್ರಶ್ನಿಸಿದಾಗ ನಮಗೆ ಔಟ್ ಮಾಡಲು ಅತ್ಯಂತ ಕಷ್ಟದ ಆಟಗಾರ ಅಂದ್ರೆ ರಾಹುಲ್ ದ್ರಾವಿಡ್ ಎಂದು ಹೇಳಿದರು. ಕೊಲ್ಕತ್ತಾ ಮ್ಯಾಚ್ ನಲ್ಲಿ ತಮ್ಮ ಅದ್ಭುತ ಆಟಗಾರಿಕೆಯನ್ನು ತೋರಿಸಿದ ರಾಹುಲ್ ದ್ರಾವಿಡ್ ಇಂದು ಅತ್ಯುತ್ತಮ ಕೋಚ್ ಎನಿಸಿಕೊಂಡಿದ್ದಾರೆ.

ಇನ್ನು ರಾಹುಲ್ ದ್ರಾವಿಡ್ ಕೂಡ ಯಾವುದೇ ಕಾರಣಕ್ಕೂ ಮದ್ಯಪಾನವನ್ನು ಮಾಡುವುದಿಲ್ಲ .ಪರ್ವೇಜ್ ರಸೂಲ್. ಇವರು ಟೀಮ್ ಇಂಡಿಯಾದ ವೇಗದ ಬೌಲರ್. ಕಾಶ್ಮೀರದ ಪರ್ವೇಜ್ ರಸೂಲ್ ಮದ್ಯಪಾನದಿಂದ ದೂರ ಉಳಿದಿದ್ದಾರೆ. ಯಾವತ್ತೂ ವೈನ್ ಅನ್ನು ಕೂಡ ಕುಡಿಯದ ಆಟಗಾರ ಇವರು. ನಿಮಗೆ ಈ ಮಾಹಿತಿ ಇಷ್ಟವಾಗಿದ್ದರೆ ತಪ್ಪದೇ ಈ ಮಾಹಿತಿಯನ್ನು ಶೇರ್ ಮಾಡಿ ಹಾಗೂ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮಾಡಿ ತಿಳಿಸಿ.

By admin

Leave a Reply

Your email address will not be published.