ಸಾಮಾನ್ಯವಾಗಿ ಐಎಎಸ್ ಅಧಿಕಾರಿಗಳು ಅಂದ್ರೆ ಅವರಿಗೆ ಇರುವ ಗತ್ತೇ ಬೇರೆ. ಜನರು ಅವರನ್ನು ನೋಡಿ ಹೆದರುತ್ತಾರೆ, ಅಲ್ಲದೇ ಸಾಮಾನ್ಯವಾಗಿ ಐಎಎಸ್ ಅಧಿಕಾರಿಗಳು ಕೂಡ ಜನರೊಂದಿಗೆ ಬಹಳ ಆತ್ಮೀಯವಾಗಿ ನಡೆದುಕೊಳ್ಳುವುದು ವಿರಳ. ಆದರೆ ಇಂಥವರ ನಡುವೆ ಅಖಿಲೇಶ್ ಮಿಶ್ರ ತರಹದ ಐಎಎಸ್ ಅಧಿಕಾರಿಗಳು ವಿಶೇಷವಾಗಿ ಕಾಣಿಸುತ್ತಾರೆ.

ಅಖಿಲೇಶ್ ಮಿಶ್ರಾ ಉತ್ತರಪ್ರದೇಶದ ಐಎಎಸ್ ಅಧಿಕಾರಿ. ಅವರು ಇತ್ತೀಚಿಗೆ ಅಜ್ಜಿಯೊಬ್ಬರಿಗೆ ಸಹಾಯ ಮಾಡಿ ಮಾನವೀಯತೆ ಮೆರೆದ ಘಟನೆ ನಡೆದಿದೆ. ಈ ಬಗ್ಗೆ ಅವರ ಫೇಸ್ಬುಕ್ ಖಾತೆಯಲ್ಲಿ ಫೋಟೋಗಳು ಶೇರ್ ಆಗಿದ್ದವು ಆದರೆ ಈ ಫೋಟೋಗಳನ್ನ ಶೇರ್ ಮಾಡಿದ್ದು ಅವರಲ್ಲ ಅವರ ಸ್ನೇಹಿತರು ಇನ್ನು ತಾವು ತರಕಾರಿ ಮಾಡಲು ಕುಳಿತಿದ್ದ ಫೋಟೋವನ್ನು ನೋಡಿ ಕೂಡಲೇ ಡಿಲೀಟ್ ಮಾಡಿದ್ದರೆ ಅಖಿಲೇಶ್ ಮಿಶ್ರ. ಇದಕ್ಕೆ ಕಾರಣ ಏನೆಂದರೆ ನಾನು ಪ್ರಚಾರಕ್ಕೋಸ್ಕರ ಹೀಗೆ ಮಾಡಿದ್ದಲ್ಲ ಅಂತ ಹೇಳಿದ್ದಾರೆ ಹಾಗಾದ್ರೆ ಅಧಿಕಾರಿ ಅಖಿಲೇಶ್ ಮಿಶ್ರ ಹೀಗೆ ರಸ್ತೆ ಬದಿಯಲ್ಲಿ ಕುಳಿತು ತರಕಾರಿ ಮಾರಿದಾದರೂ ಯಾಕೆ ಗೊತ್ತಾ!

ಉತ್ತರ ಪ್ರದೇಶದ ಐಎಎಸ್ ಅಧಿಕಾರಿ ಯಾಗಿರುವ ಅಖಿಲೇಶ್ ಮಿಶ್ರಾ ಅವರು ತಮ್ಮ ಅಧಿಕೃತ ಕೆಲಸಕ್ಕಾಗಿ ಪ್ರಯಾಗ್ ರಾಜಕೀಯ ತೆರಳಿದ್ದರು ಅಲ್ಲಿಂದ ಹಿಂತಿರುಗುವಾಗ ತರಕಾರಿ ಮಾರುತಿದ್ದ ಮಾರ್ಕೆಟ್ ಹತ್ತಿರ ವಾಹನವನ್ನು ನಿಲ್ಲಿಸುತ್ತಾರೆ ಒಂದು ನಿಮಿಷ ಅಂಗಡಿ ನೋಡಿಕೊಳ್ಳಿ ನಾನು ಈಗಲೇ ಬಂದೆ ಎಂದು ಅವರು ಐಎಎಸ್ ಅಧಿಕಾರಿ ಎಂಬುದು ತಿಳಿಯದೆ ತಮ್ಮ ಅಂಗಡಿಯ ಬಳಿ ಕುಳಿತುಕೊಳ್ಳಲು ಹೇಳುತ್ತಾಳೆ.

ತೊಂದರೆಯಲ್ಲಾ ನೀವು ಆರಾಮಾಗಿ ಹೋಗಿ ಬನ್ನಿ ಅಂತ ಐಎಎಸ್ ಅಧಿಕಾರಿ ಸ್ವಲ್ಪ ಸಮಯದವರೆಗೆ ವೃದ್ಧಿಯ ಜಾಗದಲ್ಲಿ ಕುಳಿತುಕೊಳ್ಳುತ್ತಾರೆ ಈ ಸಂದರ್ಭದಲ್ಲಿ ವ್ಯಾಪಾರ ಮಾಡಲು ಗ್ರಾಹಕರು ಕೂಡ ಬರುತ್ತಾರೆ. ತಾನು ಈ ಅಂಗಡಿಯ ಮಾಲೀಕನಲ್ಲ ಅಂತ ಹೇಳಿದರೆ ಎಲ್ಲಿ ತರಕಾರಿ ತೆಗೆದುಕೊಳ್ಳದೆ ಹಾಗೆ ಹೋಗಿ ಬಿಡುತ್ತಾರೋ ಅಂತ ತಿಳಿದು ಅಜ್ಜಿ ಬರುವವರೆಗೆ ಕಾಯದೆ ತಾವೇ ಬಂದ ಗ್ರಾಹಕರಿಗೆ ತರಕಾರಿಯನ್ನು ತೂಕ ಮಾಡಿ ಕೊಡುತ್ತಾರೆ ಅಖಿಲೇಶ್ ಮಿಶ್ರಾ.

ಅಖಿಲೇಶ ಮಿಶ್ರಾ ಅವರನ್ನು ನೋಡಿದ ಅವರ ಸ್ನೇಹಿತರು ತಮಾಷೆಯಾಗಿ ಈ ಫೋಟೋಗಳನ್ನು ತೆಗೆದು ಅವರದ್ದೇ ಫೇಸ್ಬುಕ್ ಖಾತೆಯಲ್ಲಿ ಶೇರ್ ಮಾಡಿದ್ದರು. ಈ ಫೋಟೋಗಳು ವೈರಲ್ ಆಗುತ್ತಿದ್ದ ಹಾಗೆ ಅಖಿಲೇಶ್ ಮಿಶ್ರ ಫೋಟೋಗಳನ್ನು ಡಿಲೀಟ್ ಮಾಡಿ ನಂತರ ತಾವು ತರಕಾರಿ ಮಾರುತಿದ್ದ ಬಗ್ಗೆ ಸ್ಪಷ್ಟನೆಯನ್ನು ಕೂಡ ನೀಡಿದ್ದಾರೆ.

ಇಂತಹ ಮಾನವೀಯತೆಯನ್ನು ಮೆರೆಯುವ ಅಧಿಕಾರಿಗಳು ಸಿಗುವುದು ಬಹಳ ಅಪರೂಪ ಯಾಕೆಂದರೆ ಅಧಿಕಾರದಲ್ಲಿ ಇರುವವರ ಯೋಚನಾ ಲಹರಿಯೇ ಬೇರೆ ಅವರಿಗೆ ಸಾಕಷ್ಟು ಬಾರಿ ಸಾಮಾನ್ಯ ಜನರು ಕಣ್ಣಿಗೆ ಬೀಳೋದೇ ಇಲ್ಲ ಅಂತದ್ರಲ್ಲಿ ಐಎಎಸ್ ಅಧಿಕಾರಿಯಾಗಿರುವ ದೊಡ್ಡ ಹುದ್ದೆಯಲ್ಲಿರುವ ಅಖಿಲೇಶ್ ಮಿಶ್ರಾ ಸಾಮಾನ್ಯರಲ್ಲಿ ಸಾಮಾನ್ಯರಂತೆ ಒಬ್ಬ ಅಜ್ಜಿಗಾಗಿ ಬೀದಿ ಬದಿಯಲ್ಲಿರುವ ತರಕಾರಿ ಅಂಗಡಿಯಲ್ಲಿ ತರಕಾರಿ ಮಾರಿದ್ದು ನಿಜಕ್ಕೂ ಗ್ರೇಟ್ ಅನ್ನಿಸುತ್ತೆ ಅಲ್ವಾ.

By admin

Leave a Reply

Your email address will not be published.