ವೈರಸ್ ಗಳಿಂದ ದೂರ ಮಾಡುವ ಮನೆಮದ್ದು

ಹಿಂದೆ ತ್ರೇತಾಯುಗ, ದ್ವಾಪರಯುಗ ಕಾಲಗಳಲ್ಲಿ ಮನು ಕುಲದ ನಾಶಕ್ಕಾಗಿ ಅಸುರರು ಹಲವಾರು ರೂಪಗಳಲ್ಲಿ ಬಂದು ಸಾಮಾನ್ಯ ಜನರು, ಋಷಿ ಮುನಿಗಳು, ಪ್ರಾಣಿ ಪಕ್ಷಿಗಳು ಕೊನೆಗೆ ಇಂದ್ರನಂತಹ ದೇವತೆಗಳಿಗೂ ಸಹ ಬಿಡದೆ ಕಾಟ ಕೊಟ್ಟು ಹಿಂಸಿಸುತ್ತಿದ್ದರು ಪೀಡಿಸುತ್ತಿದ್ದರು. ಈ ದುಷ್ಟರ ನಾಶಕ್ಕಾಗಿ ಶ್ರೀಮನ್ನಾರಾಯಣ ಒಮ್ಮೆ ಶ್ರೀ ರಾಮನಾಗಿಯೂ ಇನ್ನೊಮ್ಮೆ ಶ್ರೀ ಕೃಷ್ಣ ಆಗಿಯೂ ಈ ಭೂಮಿಯ ಮೇಲೆ ಅವತಾರ ಎತ್ತಿ ದುಷ್ಟರ ಸಂಹಾರ ಮಾಡಿರುವುದು ನಮಗೆಲ್ಲ ತಿಳಿದೇ ಇದೆ. ಈಗ ಕಲಿಯುಗ. ಪಾಪದ ಲೆಕ್ಕವೇ ಹೆಚ್ಚಾಗಿರುವ ಈ ಕಾಲದಲ್ಲಿ ದುಷ್ಟ ರಾಕ್ಷಸರ ಬದಲು ಅಸುರ ರೂಪಿ ರೋಗಗಳು ಹಲವಾರು ರೀತಿಯ ವೈರಸ್ ಗಳ ಮೂಲಕ ಮನುಕುಲದ ನಾಶಕ್ಕೆ ನಾ ಮುಂದು ತಾ ಮುಂದು ಎಂಬಂತೆ ಸಿದ್ಧವಾಗಿವೆ.

ಸಿಡಬು, ಕಾಲರಾ, ಡೆಂಗ್ಯೂ ಮಹಾಮಾರಿ ಗಳು ಬಂದು ಹೋದವು ಈಗ ಕರೋನ ವೈರಾಣುವಿನ ಸರಧಿ. ಮುಂದೊಂದು ದಿನ ಇನ್ನೂ ಅನೇಕ ವೈರಾಣುಗಳು ಹುಟ್ಟುತ್ತವೆ ಅಂದರು ತಪ್ಪಾಗಲಾರದು. ಚೀನಾ ದೇಶದಲ್ಲಿ ಬೆಳೆದ ಕರೋನ ಈಗ ದೇಶದೆಲ್ಲೆಡೆ ಹಬ್ಬಿ ಜಗತ್ತಿನ ನೆಮ್ಮದಿಯನ್ನು ಹಾಳು ಮಾಡುತ್ತಿದೆ. ಸಣ್ಣ ಶೀತದಿಂದ ಶುರುವಾಗಿ ಕ್ರಮೇಣ ಕೆಮ್ಮು ದಮ್ಮು ಜ್ವರದಿಂದ ನ್ಯುಮೋನಿಯಾ ಹಂತದ ವರೆಗೂ ಹೋಗಿ ಜೀವ ತೆಗೆಯುತ್ತದೆ. ಈ ವೈರುಸ್ ನ ವಿಷಕಾರಿ ಗುಣದಿಂದಾಗಿ ಚೇತರಿಸಿಕೊಳ್ಳುವ ಸಾಧ್ಯತೆ ಕಡಿಮೆ ಎನ್ನುತ್ತಾರೆ. ಯಾವುದೇ ಕೀಟಾಣು ಅಥವಾ ವೈರಾಣು ಮನುಷ್ಯನ ದೇಹ ಹೊಕ್ಕಿದೆ ಅಂದರೆ, ನಮ್ಮ ರೋಗ ನಿರೋಧಕ ಶಕ್ತಿ ಕಡಿಮೆ ಆಗಿದೆ ಎಂದು ಅರ್ಥ. ಈ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುವ ಆಹಾರ ವಿಹಾರ ಮನೆ ಮದ್ದುಗಳನ್ನ ಮಾಡೋದು ನಮ್ಮ ಮೊದಲ ಹೆಜ್ಜೆ ಆಗಬೇಕು. ಅಧಿಕ ಪೋಷಕಾಂಶಗಳನ್ನು ಹೊಂದಿರುವ ಹಾಗೂ ಸುಲಭವಾಗಿ ಜೀರ್ಣ ಆಗುವ ಆಹಾರಗಳನ್ನು ಸೇವಿಸಬೇಕು.

ಬೂದುಗುಂಬಳ, ಸೋರೆಕಾಯಿ, ನುಗ್ಗೆ ಸೊಪ್ಪು, ಮೆಂತೆ ಸೊಪ್ಪು, ಹಾಗಲ ಕಾಯಿ, ನಿಂಬೆ ಹಣ್ಣುಗಳನ್ನು ಸೇವಿಸಬೇಕು. ಘನ ಆಹಾರ ಪದಾರ್ಥಗಳನ್ನು, ಜೀರ್ಣಿಸಲು ಕಷ್ಟವಾದ ಆಹಾರಗಳಾದ ಮೈದಾ, ಎಣ್ಣೆಯಲ್ಲಿ ಕರಿದ ತಿಂಡಿಗಳು, ಮಾಂಸಾಹಾರ, ಆಗಾಗ ತಿನ್ನುವುದು, ಅತಿಯಾಗಿ ತಿನ್ನುವುದು ಹಾಗೂ ಅತೀ ಕಡಿಮೆ ನೀರನ್ನು ಕುಡಿಯುವುದನ್ನು ನಿಲ್ಲಿಸಬೇಕು.

ಸಂಶೋಧನೆಗಳ ಪ್ರಕಾರ, ಈ ಕರೋನ ವೈರಸ್ ಚಳಿ ಪ್ರದೇಶಗಳು, ತಂಪು ಸ್ಥಳಗಳು ಹಾಗೂ ತಂಪು ಪಾನೀಯಗಳಿಂದ ಹೆಚ್ಚು ಪ್ರಭಲ ಆಗುತ್ತವೆ ಎಂದು ಹೇಳುತ್ತದೆ. ಈ ತಂಪು ಪಾನೀಯ, ಐಸ್ ಕ್ರೀಂ, ಹಸಿ ಮಾಂಸ, ಬೇಯಿಸದ ಹಾಗೂ ತಣ್ಣಗಿರುವ ಆಹಾರಗಳನ್ನು ತಿನ್ನಬಾರದು.

ಆಹಾರದಲ್ಲಿ ಹೆಚ್ಚು ಹೆಚ್ಚು ಅರಿಶಿಣ, ಶುಂಠಿ, ಕಾಳು ಮೆಣಸು ಹಾಗೂ ನಿಂಬೆ ಹಣ್ಣುಗಳನ್ನು ಬಳಸಬೇಕು. ಕಾಫೀ ಚಹಾದ ಬದಲು ಶುಂಠಿ, ಕಾಳು ಮೆಣಸು ಹಾಗೂ ನಿಂಬೆ ಹಣ್ಣುಗಳನ್ನು ಬಳಸಿ ಮಾಡಿದ ಕಶಾಯಗಳನ್ನು ಆಗಾಗ ಕುದಿಯುತ್ತಿರಬೇಕು. ಬಿಸಿ ಬಿಸಿ ತಿಂಡಿ, ಊಟ, ಬಿಸಿ ಪಾನೀಯ ಹಾಗೂ ಬಿಸಿ ನೀರನ್ನೇ ಕುಡಿಯಬೇಕು. ಹಣ್ಣುಗಳಲ್ಲಿ ಮೂಸುಂಬೇ, ಕಿತ್ತಳೆ, ನೆಲ್ಲಿಕಾಯಿ, ಪೈನಾಪಲ್, ಚಿಕ್ಕು ಹಣ್ಣುಗಳನ್ನು ತಿನ್ನುವುದು ಉತ್ತಮ.

ಇವುಗಳ ಜೊತೆಗೆ ಕೆಲವು ಮನೆ ಮದ್ದುಗಳನ್ನು ಮಾಡುವುದರಿಂದ ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು. ಒಂದು ಚಮಚ ಜೀರಿಗೆಯನ್ನು ಎರಡು ಲೀಟರ್ ನೀರಿಗೆ ಬೆರೆಸಿ ಕುದಿಸಿ ಕುಡಿಯಬೇಕು. ಕಾಲು ಚಮಚ ಶುಠಿ ರಸವನ್ನು ಸ್ವಲ್ಪ ಉಪ್ಪಿನಲ್ಲಿ ಬೆರೆಸಿ ಕುಡಿಯಬೇಕು.

ಐದು ಕೂಡಿ ಕಿರಾತ ಕಡ್ಡಿ, ಐದು ಕುಡಿ ನೆಲ ನೆಲ್ಲಿ, ನಾಲ್ಕು ಇಂಚು ಅಮೃತ ಬಳ್ಳಿ ಮತ್ತು ಇಂದು ಚಮಚ ಜೀರಿಗೆಯನ್ನ ನಾಲ್ಕು ಲೋಟ ನೀರಿಗೆ ಹಾಕಿ ಕುದಿಸಿ, ಒಂದು ಲೋಟಕ್ಕೆ ಬತ್ತಿಸಿದ ಕಷಾಯವನ್ನು ಭಾಗ ಮಾಡಿ ದಿನಕ್ಕೆ ಅಷ್ಟಷ್ಟು ಸೇವಿಸಿ. ಒಂದು ಲೋಟ ಬಿಸಿ ನೀರಿಗೆ ಒಂದು ಚಮಚ ಅರಿಶಿಣ ಹಾಗೂ ನಿಂಬೆ ಹಣ್ಣನ್ನು ಬೆರೆಸಿ ಪ್ರತಿನಿತ್ಯ ಬೆಳಗ್ಗೆ ಕುಡಿಯಬೇಕು. ಚಳಿಗಾಲದಲ್ಲಿ ಪ್ರತಿನಿತ್ಯ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಚಮನ್ ಫ್ರಶ್ ಲೇಹವನ್ನು ಇಂದು ಚಮಚ ತೆಗೆದುಕೊಳ್ಳಬೇಕು ನಂತರ ಒಂದು ಲೋಟ ಬಿಸಿ ನೀರನ್ನು ಕುಡಿಯಬೇಕು. ಇದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.

ಈ ಎಲ್ಲ ಮನೆ ಮದ್ಧುಗಳು ಕರೋನ ವೈರಸ್ ವಿರುದ್ಧ ಹೋರಾಡಲು ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಸಹಾಯಕಾರಿ ಆಗುತ್ತದೆ. ಮಕ್ಕಳಲ್ಲಿ, ವೃದ್ಧರಲ್ಲಿ, ಗರ್ಭಿಣಿಯರಲ್ಲಿ ಹಾಗೂ ದೀರ್ಘ ಕಾಲ ರೋಗದಿಂದ ಬಳಲುತ್ತಿದ್ದ. ವ್ಯಕ್ತಿಗಳಲ್ಲಿ ಶೀತ ಜ್ವರ ಬಂದಲ್ಲಿ ಹೆಚ್ಚಿನ ಜಾಗೃತಿ ವಹಿಸಬೇಕು ಹಾಗೂ ಕೂಡಲೇ ಚಿಕಿತ್ಸೆಯನ್ನು ಪಡೆಯಬೇಕು. ಕರೋನ ವೈರಸ್ ಭಾರತದಲ್ಲಿ ವ್ಯಾಪಕವಾಗಿ ಹರಡುವ ಮುನ್ನ ನಮ್ಮ ಆಹಾರ ವಿಹಾರಗಳಿಂದ ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಂಡು ಸುರಕ್ಷಿತವಾಗಿ ಇರೋಣ.

Leave a Comment

error: Content is protected !!