ಕರ್ನಾಟಕದ ಇತಿಹಾಸದಲ್ಲಿ ಛಾಪು ಮೂಡಿಸಿದಇಮ್ಮಡಿ ಪುಲಕೇಶಿಯ ಜೀವನ ಹೇಗಿತ್ತು ಗೊತ್ತೇ

ಕರ್ನಾಟಕದ ಇತಿಹಾಸದಲ್ಲಿ ಛಾಪು ಮೂಡಿಸಿದ, ತಮ್ಮ ಆಡಳಿತದಿಂದ ಪ್ರಸಿದ್ಧವಾದ, ಉತ್ತರ ಭಾರತದ ಸಾಮ್ರಾಟನಿಗೆ ಸೋಲಿನ ರುಚಿ ತೋರಿಸಿದ, ಹೆಮ್ಮಯ ಸಾಮ್ರಾಜ್ಯದ ಸಾಮ್ರಾಟ ಇಮ್ಮಡಿ ಪುಲಕೇಶಿಯ ಜೀವನ, ಅವನ ದಿಗ್ವಿಜಯಗಳ ಬಗ್ಗೆ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ದಕ್ಷಿಣಾ ಪಥೇಶ್ವರ, ಪರಮೇಶ್ವರ ಬಿರುದಾಂಕಿತ ಇಮ್ಮಡಿ ಪುಲಕೇಶಿಯನ್ನು ಇತಿಹಾಸಕಾರರು ರಣವಿಕ್ರಮ ಎಂದು ಕರೆಯುತ್ತಾರೆ. ಇಮ್ಮಡಿ ಪುಲಕೇಶಿಯ ಮೂಲ ಹೆಸರು ಎರೆಯಂತಾ. ಇವನು ಅಜ್ಜಿಯ ಮಾರ್ಗದರ್ಶನದಲ್ಲಿ ರಾಜಧಾನಿ ಬಾದಾಮಿಯಿಂದ ದೂರದಲ್ಲಿ ಬೆಳೆಯುತ್ತಾನೆ. ಪುಲಕೇಶಿ ಪ್ರೌಡವಸ್ಥೆಗೆ ಬಂದಾಗ ತನ್ನ ಚಿಕ್ಕಪ್ಪನಾದ ಮಂಗಳೇಶನೊಡನೆ ಯುದ್ಧ ಮಾಡಬೇಕಾಯಿತು. ಕ್ರಿ.ಶ 609 ರಲ್ಲಿ ಈಗಿನ ಆಂಧ್ರದ ಅನಂತಪುರಂನಲ್ಲಿ ಮಂಗಳೇಶನನ್ನು ಕೊಂ’ದು ವಾತಾಪಿ ಸಿಂಹಾಸನವನ್ನು ಏರುತ್ತಾನೆ. ನಂತರ ಸಾಕಷ್ಟು ಬಂಡಾಯಗಳನ್ನು, ವಿರೋಧವನ್ನು ಎದುರಿಸಬೇಕಾಯಿತು. ಸಾಮಂತರಾಗಿದ್ದ ಅಪ್ಪಾಯಿಕ ಹಾಗೂ ಗೋವಿಂದ ತಮ್ಮನ್ನು ತಾವು ಸ್ವತಂತ್ರರು ಎಂದು ಘೋಷಿಸಿಕೊಂಡು ಪುಲಕೇಶಿಯ ವಿರುದ್ಧ ತಿರುಗಿಬಿದ್ದರು.ಪುಲಕೇಶಿ ಭೀಮಾ ತೀರದಲ್ಲಿ ನಡೆದ ಯುದ್ಧದಲ್ಲಿ ಅವರನ್ನು ಸೋಲಿಸುತ್ತಾನೆ. 36 ವರ್ಷಗಳ ಕಾಲ ಸಮರ್ಥವಾಗಿ ಚಾಲುಕ್ಯ ಸಾಮ್ರಾಜ್ಯದ ಚುಕ್ಕಾಣಿಯನ್ನು ಹಿಡಿದಿದ್ದ. ಬನವಾಸಿ ಕದಂಬರ, ತಲಕಾಡಿನ ಗಂಗರ, ದಕ್ಷಿಣ ಕನ್ನಡದ ಆಲೂಪರನ್ನು ಚಾಲುಕ್ಯರ ಸೇನೆ ಸೋಲಿಸಿತು. ನಂತರ ಕಂಚಿಯ ಪಲ್ಲವ ದೊರೆ ಒಂದನೇ ಮಹೇಂದ್ರವರ್ಮನ ಮೇಲೆ ಚಾಲುಕ್ಯ ಸೇನೆ ಮುಗಿಬಿತ್ತು. ಪಲ್ಲವರ ರಾಜಧಾನಿ ಕಂಚಿಪುರಂನಿಂದ 25 ಕಿ.ಮೀ ದೂರದಲ್ಲಿರುವ ಪುಲ್ಲಲೂರಿನಲ್ಲಿ ಭೀಕರ ಕಾಳಗ ನಡೆದು ಒಂದನೇ ಮಹೇಂದ್ರ ವರ್ಮ ಸೋತನು ಆದರೆ ತನ್ನ ರಾಜಧಾನಿಯನ್ನು ಉಳಿಸಿಕೊಳ್ಳುತ್ತಾನೆ. ಚಾಲುಕ್ಯರು ಪಲ್ಲವ ರಾಜ್ಯದ ಉತ್ತರ ಭಾಗದ ಪ್ರದೇಶವನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುತ್ತಾರೆ. ಆ ನಂತರ ದಖನ್ ಪ್ರದೇಶವನ್ನು ವಶಪಡಿಸಿ ಗುಜರಾತಿನ ಗೂರ್ಜರರು ಹಾಗೂ ಮಾ ದ ಮೇಲೆ ದಿಗ್ವಿಜಯ ಸಾಧಿಸುತ್ತಾನೆ. ಆಗ ಚಾಲುಕ್ಯ ಸಾಮ್ರಾಜ್ಯ ಕಾವೇರಿ ತೀರದಿಂದ ನರ್ಮದಾ ತೀರದವರೆಗೆ ವಿಸ್ತಾರವಾಗುತ್ತದೆ. ಪುಲಕೇಶಿ ತನ್ನ ತಮ್ಮ ಕುಬ್ಜ ವಿಷ್ಣುವರ್ಧನನನ್ನು ವೆಂಗಿಯ ರಾಜನನ್ನಾಗಿ ಮಾಡುತ್ತಾನೆ. ಈ ಸಮಯದಲ್ಲಿ ಉತ್ತರ ಭಾರತದ ಸಾಮ್ರಾಟ ಹರ್ಷವರ್ಧನನು ಚಾಲುಕ್ಯ ಸಾಮ್ರಾಜ್ಯದ ಮೇಲೆ ಮುಗಿಬೀಳುತ್ತಾನೆ. ನರ್ಮದಾ ನದಿಯ ತೀರದಲ್ಲಿ ನಡೆದ ಭೀಕರ ಕಾಳಗದಲ್ಲಿ ಹರ್ಷವರ್ಧನ ಸೋತು ಪುಲಕೇಶಿಯೊಂದಿಗೆ ಸಂಧಾನಕ್ಕೆ ಮುಂದಾಗುತ್ತಾನೆ ಪುಲಕೇಶಿ ಹರ್ಷನನ್ನು ಆದರದಿಂದ ಸ್ವಾಗತಿಸುತ್ತಾನೆ. ಪುಲಕೇಶಿಗೆ ದಕ್ಷಿಣಾ ಪಥೇಶ್ವರ ಎಂಬ ಬಿರುದು ಕೊಟ್ಟನು.

ನಂತರ ಚಾಲುಕ್ಯರು ಬಾದಾಮಿ ಚಾಲುಕ್ಯರು ಹಾಗೂ ವೆಂಗಿ ಚಾಲುಕ್ಯರು ಎಂಬ ಎರಡು ಕವಲುಗಳಾಗಿ ಆಡಳಿತ ನಡೆಸುತ್ತಾರೆ. ಪುಲಕೇಶಿ ವಯಸ್ಸಾದಂತೆ ಅವನ ಮಕ್ಕಳು ರಾಜ್ಯಕ್ಕಾಗಿ ಕಿತ್ತಾಡಿದರು. ಪುಲಕೇಶಿಯ ಆರೋಗ್ಯ ಹದಗೆಟ್ಟಿತು. ಈ ಸಂದರ್ಭದಲ್ಲಿ ಕ್ರಿ.ಶ 640 ರಲ್ಲಿ ಪಲ್ಲವರ ರಾಜ ಒಂದನೇ ನರಸಿಂಹ ವರ್ಮ ಪುಲಕೇಶಿಯ ಮೇಲೆ ಧಾಳಿ ಮಾಡಿದ ಆ ಯುದ್ಧದಲ್ಲಿ ಕುಬ್ಜ ವಿಷ್ಣುವರ್ಧನ ಸಾವಿ’ಗೀಡಾಗುತ್ತಾನೆ. ಅವನ ಮಕ್ಕಳು ವಿ’ರೋಧಿಗಳ ಜೊತೆ ಕೈ ಜೋಡಿಸುತ್ತಾರೆ. ದಾಯಾದಿ ಕಲಹಕ್ಕೆ ಬೇಸತ್ತು ಪುಲಕೇಶಿಯ ಮಗ ಮೂರನೇ ವಿಕ್ರಮಾದಿತ್ಯ ರಾಜಧಾನಿ ತೊರೆದು ಹೋಗುತ್ತಾನೆ ಆ ಸಮಯದಲ್ಲಿ ನರಸಿಂಹ ವರ್ಮಾ ಧಾ’ಳಿ ಮಾಡುತ್ತಾನೆ. ನರಸಿಂಹನೊಂದಿಗೆ ಹೋರಾಡುತ್ತಾ ರಣರಂಗದಲ್ಲಿ ಪುಲಕೇಶಿ ವೀರಸ್ವರ್ಗ ಸೇರುತ್ತಾನೆ. ಪುಲಕೇಶಿ ಗಂಗರು ಹಾಗೂ ಆಲೂಪರೊಂದಿಗೆ ವಿವಾಹ ಸಂಬಂಧ ಹೊಂದಿದ್ದ. ಅವನೊಬ್ಬ ಅತ್ಯುನ್ನತ ಆಡಳಿತಗಾರನಾಗಿದ್ದ ಎಂದು ಹ್ಯೂಯೆನ್ ತ್ಸಾಂಗ್ ತನ್ನ ಪುಸ್ತಕದಲ್ಲಿ ಬರೆದಿದ್ದಾನೆ. ಅಲ್ಲದೇ ಪುಲಕೇಶಿ ಉತ್ತಮ ಅಶ್ವದಳ, ಗಜಪಡೆ ಹೊಂದಿದ್ದನು, ಚಾಲುಕ್ಯರು ನೌಕಾಪಡೆಯನ್ನು ಹೊಂದಿದ್ದು ಅದರ ಸಹಾಯದಿಂದ ರೇವತಿ ದ್ವೀಪವನ್ನು ವಶಪಡಿಸಿಕೊಂಡರು ಎಂದು ಹೇಳಿದ್ದಾನೆ. ಪುಲಿಕೇಶಿ ನಂತರ ಚಾಲುಕ್ಯರ ರಾಜಧಾನಿ ಬಾದಾಮಿ 13 ವರ್ಷಗಳ ಕಾಲ ಪಲ್ಲವರ ವಶದಲ್ಲಿದ್ದು ನಂತರ ಒಂದನೇ ವಿಕ್ರಮಾದಿತ್ಯ ಬಾದಾಮಿಯನ್ನು ತನ್ನ ವಶಕ್ಕೆ ಪಡೆದ ಅವನು ಚಾಲುಕ್ಯರ ಸಾಮ್ರಾಜ್ಯವನ್ನು ಪುನಃ ಸ್ಥಾಪಿಸುತ್ತಾನೆ

Leave a Comment

error: Content is protected !!