ದೇಹದ ಮೂಳೆಗಳಿಗೆ ಬಲ ನೀಡುವ ಆರೋಗ್ಯಕಾರಿ ಆಹಾರಗಳಿವು


ನಮ್ಮ ದೇಹದ ಅರೋಗ್ಯ ಉತ್ತಮ ರೀತಿಯಲ್ಲಿರಲು ಪ್ರತಿದಿನ ಹಣ್ಣು ತರಕಾರಿಗಳು ಹಾಗೂ ಪೌಷ್ಟಿಕಾಂಶ ಭರಿತವಾದ ಆಹಾರಗಳನ್ನು ಸೇವನೆ ಮಾಡಬೇಕು ಅಷ್ಟೇ ಅಲ್ಲದೆ ದೇಹವನ್ನು ಫಿಟ್ ಆಗಿ ಇಡಲು ಪ್ರತಿದಿನ ವ್ಯಾಯಾಮ ಮಾಡಬೇಕು ಆರೋಗ್ಯದ ದೃಷ್ಟಿಯಿಂದ ಯೋಗ ಧ್ಯಾನ ಈ ಎಲ್ಲವನ್ನು ಮಾಡುವುದರಿಂದ ಉತ್ತಮ ಆರೋಗ್ಯವನ್ನು ಪಡೆದುಕೊಳ್ಳಬಹುದಾಗಿದೆ.

ಪ್ರತಿದಿನ ಇಂತಹ ಆಹಾರಗಳನ್ನು ಸೇವನೆ ಮಾಡುವುದರಿಂದ ದೇಹದ ಮೂಳೆಗಳಿಗೆ ಬಲ ಒದಗುವ ಜೊತೆಗೆ ಸ್ನಾಯುಗಳ ಬೆಳವಣಿಗೆಗೆ ಹೆಚ್ಚು ಪೂರಕವಾಗಿದೆ, ಸಾಕಷ್ಟು ಪ್ರಮಾಣದಲ್ಲಿ ದೇಹಕ್ಕೆ ಪೋಷಕಾಂಶಗಳು ಅಗತ್ಯವಿರುವ ಕಾರಣ ಇಂತಹ ಹಣ್ಣುಗಳನ್ನು ಸೇವನೆ ಮಾಡಬೇಕು

ಮೊದಲನೆಯದಾಗಿ ವಿಟಮಿನ್ ಸಿ ಅಂಶವನ್ನು ಹೇರಳವಾಗಿ ಹೊಂದಿರುವಂತ ಹಣ್ಣು ಕಿತ್ತಳೆ, ಈ ಕಿತ್ತಳೆ ಹಣ್ಣು ಸೇವನೆ ಮಾಡುವುದರಿಂದ ದೇಹಕ್ಕೆ ವಿಟಮಿನ್ ಪ್ರೊಟೀನ್ ಹಾಗೂ ಕ್ಯಾಲ್ಶಿಯಂ ಅಂಶ ದೊರೆಯುತ್ತದೆ. ಇದು ದೇಹದ ಮೂಳೆಗಳನ್ನು ದೃಢವಾಗಿ ಗಟ್ಟಿಮುಟ್ಟಾಗಿ ಬೆಳೆಯುವಂತೆ ಮಾಡುತ್ತದೆ. ಅಷ್ಟೇ ಅಲ್ದೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗುಣಗಳು ಕಿತ್ತಳೆಹಣ್ಣಿನಲ್ಲಿದೆ.

ಇನ್ನು ಎರಡನೆಯದಾಗಿ ಬಾದಾಮಿ ಬೀಜ ಇದನ್ನು ನೀರಲ್ಲಿ ನೆನಸಿ ಕೂಡ ಸೇವನೆ ಮಾಡಬಹುದು ಹಾಗೂ ಬರಿ ಬಾದಾಮಿ ಬೀಜವನ್ನು ಕೂಡ ಪ್ರತಿದಿನ ೫ ರಿಂದ ೬ ಸೇವನೆ ಮಾಡಬಹದು ಒಟ್ಟಾರೆಯಾಗಿ ಬಾದಾಮಿ ಹಾಲು ಬಾದಾಮಿ ಬೀಜ ಇವುಗಳ ಸೇವನೆ ದೇಹಕ್ಕೆ ಪ್ರೊಟೀನ್ ಅಂಶವನ್ನು ದೊರಕಿಸಿ ಕೊಡುತ್ತದೆ, ಅಷ್ಟೇ ಅಲ್ಲದೆ ದೇಹಕ್ಕೆ ಬಲವನ್ನು ನೀಡುವ ಜೊತೆಗೆ ಮೆದುಳಿನ ಆರೋಗ್ಯಕ್ಕೂ ಉಪಯೋಗಕಾರಿಯಾಗಿದೆ.

ಮೂರನೆಯದಾಗಿ ಅಂಜೂರ ಹಣ್ಣು ಇದು ಮಾರುಕಟ್ಟೆಯಲ್ಲಿ ಸಿಗುವಂತ ಹಣ್ಣಾಗಿದ್ದು ಇದರಲ್ಲಿ ಎರಡು ಬಗೆಯನ್ನು ಕಾಣಬಹುದು ಒಂದು ಅಂಜೂರ ಹಣ್ಣು ಇನ್ನೊಂದು ಒಣ ಅಂಜೂರ ಎರಡು ಕೂಡ ದೇಹಕ್ಕೆ ಉತ್ತಮ ಆರೋಗ್ಯವನ್ನು ವೃದ್ಧಿಸುವಂತ ಹಣ್ಣುಗಳಾಗಿದ್ದು ದೇಹದ ಮೂಳೆಗಳನ್ನು ಬಲವಾಗಿ ಬೆಳೆಯುವಂತೆ ಮಾಡುತ್ತದೆ, ಇನ್ನು ಈ ಹಣ್ಣನ್ನು ಮಕ್ಕಳಿಂದ ವಯಸ್ಸಾದ ಮುದುಕನವರೆಗೆ ಕೂಡ ಸೇವನೆ ಮಾಡಬಹುದಾಗಿದೆ. ಉತ್ತಮ ಆರೋಗ್ಯವನ್ನು ವೃದ್ಧಿಸುವಂತ ಹಣ್ಣಾಗಿದೆ.

ನಾಲ್ಕನೆಯದಾಗಿ ಮೊಸರು ಈ ಮೊಸರು ಹಲವು ಆರೋಗ್ಯಕಾರಿ ಅಂಶಗಳನ್ನು ಹೊಂದಿದ್ದು ಇದರಲ್ಲಿ ಅಡಗಿರುವಂತ ಆರೋಗ್ಯಕಾರಿ ಗುಣಗಳನ್ನು ಪ್ರತಿಯೊಬ್ಬರೂ ಕೂಡ ಇದರ ಸೇವನೆಯಿಂದ ಪಡೆದುಕೊಳ್ಳಬಹುದಾಗಿದೆ. ಮೊಸರು ಸೇವನೆಯಿಂದ ದೇಹಕ್ಕೆ ಕ್ಯಾಲ್ಶಿಯಂ ಹಾಗೂ ಪ್ರೊಟೀನ್ ಅಂಶಗಳನ್ನು ಪಡೆಯಬಹುದಾಗಿದೆ. ಕ್ಯಾಷಿಯಮ್ ಅಂಶವನ್ನು ಹೊಂದಿರುವಂತ ಮೊಸರು ಸೇವನೆ ಮಾಡುವುದರಿಂದ ದೇಹದ ಮೂಳೆಗಳಿಗೆ ಯಾವುದು ಸಮಸ್ಯೆ ಇಲ್ಲದೆ ಉತ್ತಮ ಆರೋಗ್ಯವನ್ನು ಬೆಳೆಯಲು ಪೂರಕವಾಗಿದೆ.


Leave A Reply

Your email address will not be published.