ನಿಮ್ಮ ನಾಲಿಗೆ ನಿಮ್ಮ ಅರೋಗ್ಯ ಹೇಗಿದೆ ಅನ್ನೋದನ್ನ ತಿಳಿಸುತ್ತೆ ನೋಡಿ

ನಾಲಿಗೆ ಒಳ್ಳೆಯದಾದರೆ ನಾಡೆಲ್ಲ ಒಳ್ಳೆಯದು” ಎಂಬ ಗಾದೆ ಮಾತು ಇದೆ. ಮನುಷ್ಯನ ದೇಹದ ಆರೋಗ್ಯದಲ್ಲಿ ನಾಲಿಗೆಯದು ತುಂಬಾ ಪ್ರಮುಖ ಪಾತ್ರ ವಹಿಸುತ್ತದೆ. ಹಲ್ಲು ಮತ್ತು ವಸಡುಗಳಿಗೆ ತೋರುವಷ್ಟು ಕಾಳಜಿಯನ್ನು ನಾಲಿಗೆಗು ತೋರಬೇಕು ಎಂದು ವೈದ್ಯರು ಹೇಳುತ್ತಾರೆ. ಆಚಾರ ಇಲ್ಲದ ನಾಲಿಗೆ ನಿನ್ನ ನೀಚ ಬುದ್ಧಿಯ ಬಿಡು ಎಂದು ದಾಸರು ಹೇಳಿದ್ದಾರೆ. ಆಚಾರದ ಜೊತೆ ಆರೋಗ್ಯವೂ ಇದ್ದಲ್ಲಿ ನಾಲಿಗೆಯ ಆರೋಗ್ಯವನ್ನು ನಾವು ಕಾಪಾಡಿಕೊಳ್ಳಬಹುದು. ಅಂತಹ ನಾಲಿಗೆಯ ಆರೋಗ್ಯವನ್ನು ನಾವು ಹೇಗೆ ಕಾಪಾಡಿಕೊಳ್ಳಬೇಕು? ಯಾವ ಲಕ್ಷಣಗಳೂ ನಮ್ಮಲ್ಲಿ ಕಾಣಿಸಿಕೊಳ್ಳುತ್ತವೆ ಅನ್ನೋದರ ಬಗ್ಗೆ ಈ ಲೇಖನದಲ್ಲಿ ತಿಳಿದುಕೊಳ್ಳೋಣ.

ನಮಗೆ ಮೈ ಹುಷಾರು ಇಲ್ಲದೆ ಇದ್ದಾಗ ವೈದ್ಯರು ನಿಮ್ಮ ನಾಲಿಗೆಯನ್ನು ತೋರಿಸಿ ಎಂದು ಯಾಕೆ ಹೇಳುತ್ತಾರೆ ಗೊತ್ತಾ? ನಾಲಿಗೆಯನ್ನು ತೋರಿಸುವುದರಿಂದ ರೋಗಲಕ್ಷಣಗಳು ಗೋಚರವಾಗಿ ಯಾವ ರೋಗ ಇದೆ ಎನ್ನುವುದನ್ನು ಕಂಡು ಹಿಡಿಯಲು ಸುಲಭ ಆಗುತ್ತದೆ. ಅಷ್ಟೇ ಅಲ್ಲದೇ ಖಾಯಿಲೆ ಯಾವ ಹಂತದಲ್ಲಿ ಇದೆ ಎನ್ನುವುದನ್ನು ಕಂಡು ಹಿಡಿಯಲು ಸಹ ಇದು ಒಂದು ಸುಲಭವಾದ ವಿಧಾನ. ನಮ್ಮ ನಾಲಿಗೆ ಏನನ್ನ ಸೂಚಿಸುತ್ತದೆ ? ಆರೋಗ್ಯವಂತ ನಾಲಿಗೆ ಗುಲಾಬಿ ಬಣ್ಣದಿಂದ ಕೂಡಿರುತ್ತದೆ. ಸಣ್ಣ ಸಣ್ಣ ಗಂಟುಗಳನ್ನು ಹೊಂದಿರುತ್ತದೆ. ನಾಲಿಗೆಗೆ ನೋವಾಗಿದ್ದರೆ, ಅದರ ಬಣ್ಣ ಬದಲಾಗಿದ್ದಾರೆ ಅದು ರೋಗದ ಸೂಚನೆ ಎಂದು ತಿಳಿಯಬೇಕು.

ಬಿಳಿ ನಾಲಿಗೆ ನಾಲಿಗೆ ಬಿಳಿ ಆಗಿದ್ದಾರೆ ಯೀಸ್ಟ್ ಸೋಂಕು ಆಗಿದೆ ಎಂದು ಅರ್ಥ. ಸಕ್ಕರೆ ಕಾಯಿಲೆ, ಶ್ವಾಸಕೋಶದ ಕಾಯಿಲೆಯಿಂದ ಬಳಲುತ್ತಾ ಇದ್ದರೆ, ನಾಲಿಗೆ ಬಿಳಿ ಬಣ್ಣ ಆಗಿರುತ್ತದೆ. ಕೆಂಪು ಬಣ್ಣದ ನಾಲಿಗೆ…. ಪೋಲಿಕ್ ಆಸಿಡ್, B12 ಕೊರತೆ ಇರುವುದನ್ನು ಕೆಂಪು ಬಣ್ಣದ ನಾಲಿಗೆ ತೋರಿಸುತ್ತದೆ. ಕೆಲವು ಬಾರಿ ನಾವು ಜ್ವರದಿಂದ ಬಳಲುತ್ತಿದ್ದರೂ ಸಹ ನಾಲಿಗೆ ಕೆಂಪು ಬಣ್ಣಕ್ಕೆ ತಿರುಗುತ್ತದೆ. ಕಪ್ಪು ಬಣ್ಣದ ನಾಲಿಗೆ :- ಸಿಗರೇಟ್ ಸೇದುವರು ಬಾಯಿಯನ್ನು ಸ್ವಚವಾಗಿ ಇಟ್ಟುಕೊಳ್ಳದೆ ಇದ್ದರೆ ಕಪ್ಪು ಬಣ್ಣದಿಂದ ಕೂಡಿರುತ್ತದೆ. ಇದು ಅನಾರೋಗ್ಯದ ಸೂಚನೆಯನ್ನು ತೋರಿಸುತ್ತದೆ.

ನಮ್ಮ ನಾಲಿಗೆಯ ಪಾತ್ರ ಏನು ಅನ್ನೋದು ಕೆಲವರಿಗೆ ಗೊತ್ತೇ ಇರುವುದಿಲ್ಲ. ಬಾಯಿಯ ಆರೋಗ್ಯದಲ್ಲಿ ನಾಲಿಗೆಯದು ಬಹಳ ಪ್ರಮುಖ ಪಾತ್ರ. ನಮ್ಮ ನಾಲಿಗೆ ಸ್ವಾಚವಾಗಿ ಇಲ್ಲ ಆದರೆ ಬ್ಯಾಕ್ಟೀರಿಯಾಗಳು ನಮ್ಮ ನಾಲಿಗೆಯ ಮೂಲಕ ಹೊಟ್ಟೆಯನ್ನು ಪ್ರವೇಶಿಸಿ, ದೇಹದ ಆರೋಗ್ಯ ವ್ಯವಸ್ಥೆಯನ್ನು ಈ ಬ್ಯಾಕ್ಟೀರಿಯಾಗಳು ಹಾಳು ಮಾಡುತ್ತವೆ. ಹಾಗಿದ್ರೆ ನಾವು ನಮ್ಮ ನಾಲಿಗೆಯ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕು? ನಮ್ಮ ನಾಲಿಗೆಯನ್ನು ಸ್ವಚ ಮಾಡಲು ಟoಗ್ ಕ್ಲೀನರ್ ಅನ್ನು ಬಳಸಬೇಕು. ಇದು ಮೃದುವಾದ ದಾರದಿಂದ ಮಾಡಲ್ಪಟ್ಟಿರುತ್ತದೆ. ನಾಲಗೆಯನ್ನು ಮೃದುವಾಗಿ ಸ್ವಚ್ಚಗೊಳಿಸುತ್ತದೆ. ನಾವು ನಾಲಿಗೆಯನ್ನು ಸ್ವಚ್ಛ ಗಳಿಸಿದ ಬಳಿಕ ಟoಗ್ ಕ್ಲೀನರ್ ಅನ್ನು ಬಿಸಿ ನೀರಿನಲ್ಲಿ ಸ್ವಚ್ಛ ಮಾಡಬೇಕು. ಬೆಳಿಗ್ಗೆ ಹಲ್ಲು ಉಜ್ಜಿದ ಬಳಿಕ ನಾವು ನಾಲಗೆಯನ್ನು ಸಹ ಸ್ವಚ್ಛ ಮಾಡಬೇಕಾಗುತ್ತದೆ. ಹಾಗೆ ರಾತ್ರಿ ಮಲಗುವಾಗ ಕೂಡ ಬಾಯಿ ಮತ್ತು ನಾಲಿಗೆಯನ್ನು ಸ್ವಚ್ಛ ಮಾಡಿಕೊಳ್ಳುವುದು ಆರೋಗ್ಯಕ್ಕೆ ಒಳ್ಳೆಯದು.

ನಾಲಿಗೆಯಿಂದ ಉಸಿರಾಟದ ತೊಂದರೆ ಆಗುತ್ತದಾ? ನಾಲಿಗೆಯ ಮೂಲಕ ಬ್ಯಾಕ್ಟೀರಿಯಾ ದೇಹದ ಒಳಗೆ ಸೇರಿ ಶ್ವಾಸಕೋಶದಲ್ಲಿ ಸೋಂಕು ಉಂಟು ಮಾಡುತ್ತದೆ. ಇದರಿಂದ ಉಸಿರಾಟ ಮತ್ತು ಶ್ವಾಸಕೋಶದ ತೊಂದರೆ ಉಂಟಾಗುತ್ತದೆ. ಅಂತವರಿಗೆ ಬಾಯಿಯ ಹುಣ್ಣು ಕೂಡ ಆಗುತ್ತದೆ. ಔಷಧಿ ಮಾಡಿದರೆ ಒಂದೆರಡು ವಾರದಲ್ಲಿ ಕಡಿಮೆ ಆಗುತ್ತದೆ. ವಿಟಮಿನ್ ಕೊರತೆ ಇರುವವರಲ್ಲಿ ಸಹ ಬಾಯಿಯ ಹುಣ್ಣು ಆಗುತ್ತದೆ. ನಾಲಿಗೆಯಲ್ಲಿ ೨/೩ ವಾರಕ್ಕಿಂತಲು ನೋವು ಇದ್ದರೆ ಅದು ಬಾಯಿಯ ಕ್ಯಾನ್ಸರ್ ಅನ್ನು ಸೂಚಿಸುತ್ತದೆ. ನಮ್ಮ ಬಾಯಿ ಮತ್ತು ನಾಲಿಗೆಯನ್ನು ಸ್ವಚ್ಛ ಮಾಡಿಕೊಳ್ಳದೆ ಇದ್ದರೆ ಹೃದಯ ಸಂಬಂಧಿ ಕಾಯಿಲೆ ಬರುತ್ತದೆ. ಬಾಯಿ ವಸಡ್ಗಳಲ್ಲಿ ಸೋಂಕು ಇದ್ದರೆ ಮಹಿಳೆಯರಿಗೆ ಅವಧಿ ಪೂರ್ಣ ಶಿಶು ಜನನ ಆಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ನಮ್ಮ ಬಾಯಿಯನ್ನು ಸ್ವಚ್ಛ ಮಾಡಿಕೊಳ್ಳುವಾಗ ನಾಮ ನಾಲಗೆಯನ್ನು ಸಹ ಸರಿಯಾಗಿ ಸ್ವಚ್ಛ ಮಾಡಿಕೊಳ್ಳಬೇಕು

Leave a Comment

error: Content is protected !!