ಮೊಟ್ಟೆ ತಿನ್ನುವ ಅಭ್ಯಾಸ ಇದ್ರೆ ಇದನೊಮ್ಮೆ ತಿಳಿಯಿರಿ

ದೇಹಕ್ಕೆ ಬೇಕಾಗುವ ಪೋಷ್ಠಿಕಾಂಶ ನೀಡುವ ಮೊಟ್ಟೆಯನ್ನು ಹೆಚ್ಚು ಇಷ್ಟುಪಟ್ಟು ಸೇವನೆ ಮಾಡಲಾಗುತ್ತದೆ. ಮೊಟ್ಟೆಯಿಂದ ಅನೇಕ ವಿಧ ವಿಧ ರೀತಿಯಾದ ಖಾದ್ಯಗಳನ್ನ ತಯಾರಿಸಬಹುದು ಅದರಲ್ಲೂ ಮೊಟ್ಟೆ ಎಂದರೆ ಚಿಕ್ಕಮಕ್ಕಳಿಗೆ ಹೆಚ್ಚು ಇಷ್ಟವಾಗುವ ಆಹಾರ ಪದಾರ್ಥವಾಗಿದೆ ಆದರೆ ರೇಗ್ಯುಲಯ್ ಮೊಟ್ಟೆ ತಿನ್ನುವವರು ಮೊಟ್ಟೆಯೊಂದಿಗೆ ಇತರೆ ಪದಾರ್ಥಗಳನ್ನು ಸೇವಸಬಾರದು ಇದರಿಂದ ದೇಹದಲ್ಲಿ ಇನ್ನಿತರೆ ಬದಲಾವಣೆಗಳಾಗಿ ಅನಾರೋಗ್ಯಕ್ಕೆ ತುತ್ತಾಗಬೇಕಾಗುತ್ತದೆ.

ಯಾವೆಲ್ಲಾ ಪದಾರ್ಥಗಳೊಂದಿಗೆ ಮೊಟ್ಟೆ ಯನ್ನು ಸೇವಿಸಿಬಾರದೆಂದರೆ ಮಾಫಿಯಾ ಮೀನಿನೊಂದಿಗೆ ಮೊಟ್ಟೆ ಸೇವಿಸುವುದರಿಂದ ಹಲವಾರು ಅನಾರೋಗ್ಯಕರ ಸಮಸ್ಯೆಗಳು ಭಾದಿಸುತ್ತವೆ. ಚರ್ಮದ ಅಲರ್ಜಿ, ಮುಖದ ಮೇಲೆ ಗುಳ್ಳೆಗಳಾಗುವುದು, ಉರಿಊತ ಸಮಸ್ಯೆಗಳು ಹೆಚ್ಚಾಗಿ ಕಾಡುವ ಸಾಧ್ಯತೆಯಿರುತ್ತದೆ.ಹಾಗಾಗಿ ಮೊಟ್ಟೆಯೊಂದಿಗೆ ಈ ಮೀನಿನ ಸೇವನೆ ಅಷ್ಟು ಸೂಕ್ತವಲ್ಲ.

ಇನ್ನು ಮೊಟ್ಟೆಯೊಂದಿಗೆ ನಿಂಬೆರಸ ಸೇವಿಸುವುದು ಅಪಾಯಕಾರಿ. ಬೇಯಿಸಿ ಕಟ್ ಮಾಡಿದ ಮೊಟ್ಟೆಯ ನಿಂಬೆರಸ ಹಾಕಿ ತಿನ್ನುವುದರಿಂದ ಹೆಚ್ಚು ರಿಯಾಕ್ಟ್ ಆಗುವ ಸಂಭವವಿರುತ್ತದೆ. ಮೊಟ್ಟೆ ತಿಂದ ಮೇಲೆ ಕನಿಷ್ಠ 2 ಗಂಟೆ ವಿರಾಮ ತೆಗೆದುಕೊಂಡು ಆಹಾರ ಸೇವಿಸಬೇಕು. ಬೇಯಿಸಿದ ಮೊಟ್ಟೆಯೊಂದಿಗೆ ಬಾಳೆಹಣ್ಣಿನ ಸೇವನೆ ತಕ್ಕುದಲ್ಲ.ಇದರಿಂದ ಹೊಟ್ಟೆನೋವು ಅಲರ್ಜಿ ಯಂತಹ ಸಮಸ್ಯೆಗಳು ಉದ್ಭವವಾಗಬಹುದು.

ಮೊಟ್ಟೆಯನ್ನು ತಿನ್ನುವಾಗ ತೆಗೆದುಕೊಳ್ಳ ಬೇಕಾದ ಕ್ರಮಗಳು: ಪೂರ್ತಿಯಾಗಿ ಬೇಯಿಸಿದ ಮೊಟ್ಟೆ ಆರೋಗ್ಯಕ್ಕೆ ಒಳ್ಳೆಯದು. ಆದರೆ ಆರ್ಧ ಬೆಂದ ಮೊಟ್ಟೆ ಸೇವನೆ ಸರಿಯಲ್ಲ ಇದರಿಂದ ಹೊಟ್ಟೆ ನೋವು , ವಾಂತಿಯಂತಹ ಅನಾರೋಗ್ಯದ ಸಮಸ್ಯೆ ಬರುವ ಸಾಧ್ಯತೆ ಇದೆ. ಮೊಟ್ಟೆಯಲ್ಲಿನ ಹಳದಿ ಬಣ್ಣದ ಪದಾರ್ಥ ಸೇವಿಸದಿರೋದು ಒಳ್ಳೆಯದು, ಪ್ರಮುಖವಾಗಿ ಚಿಕ್ಕ ಮಕ್ಕಳು, ವಯೋ ವೃದ್ಧರು ಈ ಹಳದಿ ಬಣ್ಣದ ಪದಾರ್ಥ ಸೇವಿಸಬಾರದು.

ಮೊಟ್ಟೆ ಖರೀದಿಸುವಾಗ ಫ್ರೇಶ್ ಆಗಿದೆಯೋ ಇಲ್ಲವೋ ಎಂಬುದನ್ನ ಪರಿಶೀಲಿಸಿ ಖರೀದಿಸುವುದು ಉತ್ತಮ. ಇನ್ನು ಮೊಟ್ಟೆ ತಿನ್ನುವಾಗ ಅಥವಾ ಬೇಯಿಸಿದ ಮೊಟ್ಟೆಯೊಂದಿಗೆ ಇಂತಹ ಪದಾರ್ಥ ಸೇವಿಸುವುದರಿಂದ ಅನೇಕ ರೀತಿಯಾದ ಅನಾರೋಗ್ಯ ಸಮಸ್ಯೆಗಳು ಕಾಡುತ್ತವೆ. ಅತಿಯಾದರೆ ಅಮೃತವೂ ವಿಷ ಎಂಬಂತೆ ನಾವು ತಿನ್ನುವ ಆಹಾರ ಪದಾರ್ಥಗಳಲ್ಲಿ ಯಾವಾಗಲೂ ಸಮತೋಲನವನ್ನು ಕಾಪಾಡಿಕೊಳ್ಳುವುದು ಒಳ್ಳೆಯದು

Leave a Comment

error: Content is protected !!