ಪ್ರತಿದಿನ ಎರಡು ಖರ್ಜುರ ತಿನ್ನೋದ್ರಿಂದ ಶರೀರಕ್ಕೆ ಇಂತಹ ಸಮಸ್ಯೆ ಕಾಡೋದಿಲ್ಲ

ದೇಹಕ್ಕೆ ಬೇಕಾಗುವ ಪೋಷಕಾಂಶಗಳು ಕೇವಲ ಊಟದಿಂದ ಮಾತ್ರ ಸಿಗುವುದಿಲ್ಲ. ಹಣ್ಣುಗಳು, ತರಕಾರಿಗಳು, ಸೊಪ್ಪುಗಳು, ಡ್ರೈ ಪ್ರುಟ್ಸ್ ಇವುಗಳಿಂದನೂ ನಮಗೆ ಬೇಕಾದ ಪೋಷಕಾಂಶಗಳು ಇರುತ್ತವೆ. ಅಂತವುಗಳಲ್ಲಿ ಖರ್ಜೂರವೂ ಒಂದು. ಖರ್ಜೂರದಿಂದ ನಮಗೆ ಸಿಗುವ ಪೋಷಕಾಂಶಗಳು ಯಾವುದು? ಖರ್ಜೂರವನ್ನು ಪ್ರತಿನಿತ್ಯ ತಿಂದರೆ ಏನಾಗುವುದು? ಇದರ ಲಾಭ ಎನು? ಎನ್ನುವುದರ ಬಗ್ಗೆ ನಾವು ಈ ಲೇಖನದಲ್ಲಿ ಮಾಹಿತಿಯನ್ನು ನೀಡಿದ್ದೇವೆ ನೋಡಿ ತಿಳಿದುಕೊಳ್ಳಿ.

ಖರ್ಜೂರ ತಿನ್ನುವುದರಿಂದ ನಮ್ಮ ದೇಹದ ಮೂಳೆಗಳನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ಏಕೆಂದರೆ ಖರ್ಜೂರದಲ್ಲಿ ದೇಹದ ಮೂಳೆಗಳಿಗೆ ಬೇಕಾದ ಬೋರಾನ್ ಅಂಶವಿದೆ. ಬೋರಾನ್, ರಂಜಕ, ಮಾಗ್ನಿಸಿಯಂ, ಕ್ಯಾಲ್ಸಿಯಂ, ಪೊಟ್ಯಾಸಿಯಂ ಅಂಶ ಇರುವುದರಿಂದ ಇದನ್ನು ಖನಿಜವೆಂದೂ ಕರೆಯಲಾಗುತ್ತದೆ. ಖರ್ಜೂರವು ನಮ್ಮ ದೇಹದ ಜೀರ್ಣ ವ್ಯವಸ್ಥೆಯನ್ನು ಸದೃಢ ಮಾಡುತ್ತದೆ. ನಮ್ಮ ದೇಹದ ಜೀರ್ಣ ವ್ಯವಸ್ಥೆಗೆ ಬೇಕಾದ ನಾರಿನಾಂಶ ಅಂದರೆ ಪೈಬರ್ ಈ ಖರ್ಜೂರದಲ್ಲಿ ಇದೆ. ಖರ್ಜೂರದ ನಾರಿನಾಂಶ ಮಲಬದ್ಧತೆ ತಡೆಯುವುದರೊಂದಿಗೆ, ಕರುಳಿನ ಒಳಗೆ ಆಗುವ ಆಹಾರದ ಚಲನೆಗೆ ಉತ್ತೇಜನ ನೀಡುತ್ತದೆ. ಖರ್ಜೂರ ತನ್ನ ಮಾಗ್ನಿಸಿಯಂ, ಪೊಟ್ಯಾಸಿಯಮ್‌, ವಿಟಮಿನ್ ಗಳ ಸಹಾಯದಿಂದ ದೇಹದಲ್ಲಿ ಶಕ್ತಿ ವೃದ್ದಿಸುವಲ್ಲಿ ಸಹಕಾರಿಯಾಗಿದೆ.

ಪ್ರತಿದಿನ ಎರಡು ಖರ್ಜೂರ ತಿನ್ನುವುದರಿಂದ ಇದು ನಮ್ಮ ದೇಹದಲ್ಲಿ ಆಯಾಸ ಹಾಗೂ ಒತ್ತಡವನ್ನು ಕಡಿಮೆ ಮಾಡುತ್ತದೆ. ಖರ್ಜೂರದಲ್ಲಿನ ವಿಟಮಿನ್ ಗಳು ರಕ್ತದಲ್ಲಿನ ಒತ್ತಡವನ್ನೂ ಕಡಿಮೆಗೊಳಿಸಿ, ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳಿಂದ ದೂರವಿರುವಂತೆ ಮಾಡುತ್ತದೆ. ನಮ್ಮ ಕರುಳು ಹಾಗೂ ಜಠರದಲ್ಲಿರುವ ಹಾನಿಕಾರಕ ವೈರಾಣುಗಳಿಂದ ಖರ್ಜೂರ ನಮ್ಮನ್ನು ರಕ್ಷಿಸುತ್ತದೆ. ಹಾಗೆಯೆ ಖರ್ಜೂರ ದೇಹದ ತೂಕ ಇಳಿಸಿಕೊಳ್ಳುವವರಿಗೆ ಉತ್ತಮ ಉಪಾಯ. ಖರ್ಜೂರದಲ್ಲಿನ ನಾರಿನಾಂಶದಿಂದ ದೇಹದ ತೂಕ ಇಳಿಕೆಯಾಗುತ್ತದೆ. ಇತರ ಸಕ್ಕರೆಯ ವಸ್ತುಗಳಿಂದ ರಕ್ತದಲ್ಲಿ ಬೇಗ ಸಕ್ಕರೆ ಪ್ರಮಾಣ ಏರುವುದನ್ನು ತಡೆಯುತ್ತದೆ. ಖರ್ಜೂರ ನಮ್ಮ ಕಣ್ಣಿಗೆ ತುಂಬಾ ಒಳ್ಳೆಯದು ಏಕೆಂದರೆ ಇದರಲ್ಲಿ ವಿಟಮಿನ್ ಎ ಸತ್ವ ಹೆಚ್ಚಿರುತ್ತದೆ. ದಿನ ನಿತ್ಯ ಎರಡು ಖರ್ಜೂರದ ಸೇವನೆಯಿಂದ ಮುಖದಲ್ಲಿ ವಯಸ್ಸು ಸಹಜ ನೆರಿಗೆ ಬೀಳುವುದನ್ನು ತಪ್ಪಿಸುತ್ತದೆ. ಚರ್ಮವನ್ನೂ ಸ್ವಚ್ಛವಾಗಿ, ಕಾಂತಿಯುತವಾಗಿ, ಮೃದುವಾಗಿ ಮಾಡುವುದಲ್ಲದೆ, ಎಣ್ಣೆ ಚರ್ಮವನ್ನು ಹೋಗಲಾಡಿಸುತ್ತದೆ. ಮಧುಮೇಹ ಇರುವವರು ಖರ್ಜೂರ ಕಡಿಮೆ ಸೇವಿಸಿವುದು ಒಳ್ಳೆಯದು. ಏಕೆಂದರೆ ಖರ್ಜೂರದಲ್ಲಿ ಸಕ್ಕರೆಯ ಪ್ರಮಾಣವು ಹೆಚ್ಚಾಗಿರುತ್ತದೆ. ಹಾಲಿನಲ್ಲಿ ಕುದಿಸಿ, ಅಥವಾ ಹಾಲಿನೊಂದಿಗೆ ಬೀಸಿಕೊಂಡು ಕುಡಿದರೂ ಒಳ್ಳೆಯದು. ದಿನಕ್ಕೆ ಎರಡರಿಂದ ಮೂರು ಖರ್ಜೂರ ಸೇವನೆ ಉತ್ತಮ. ಆದರೆ ಇದರಂದೇವನೆ ಹೆಚ್ಚಾದಲರೂ ಕೂಡಾ ತೊಂದರೆ ಆಗಬಹುದು.

Leave a Comment

error: Content is protected !!