ಕಣ್ಣಿನ ಉರಿ, ನವೆ ನಿವಾರಿಸುವ ಜೊತೆಗೆ ಹಲವು ಸಮಸ್ಯೆಗಳ ನಿವಾರಕೆ ಸಪೋಟ

ಸಪೋಟ ಹಣ್ಣು ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ, ಬಹಳಷ್ಟು ಜನ ಹೆಚ್ಚು ಇಷ್ಟ ಪಡುವಂತ ಹಣ್ಣಾಗಿದೆ ಇದರಲ್ಲಿ ನೂರಾರು ಆರೋಗ್ಯಕಾರಿ ಗುಣಗಳನ್ನು ಪಡೆಯಬಹುದು. ಇದರ ಜ್ಯುಸ್ ಮಾಡಿ ಮನೆಯಲ್ಲೇ ಕುಡಿಯಬಹುದು. ಸಪೋಟ ಹಣ್ಣು ಸೇವನೆ ಮಾಡುವುದರಿಂದ ದೇಹಕ್ಕೆ ಎಷ್ಟೆಲ್ಲ ಪ್ರಯೋಜನವಿದೆ ಹಾಗೂ ಇದರಲ್ಲಿ ಯಾವೆಲ್ಲ ಔಷದಿಯ ಗುಣಗಳನ್ನು ನೋಡಬಹುದು ಅನ್ನೋದನ್ನ ಹೇಳುವುದಾದರೆ. ಸಪೋಟ ಹಣ್ಣು ಕಬ್ಬಿಣ ಸತ್ವ ಕ್ಯಾಲ್ಶಿಯಂ ಇತ್ಯಾದಿಗಳಿಂದ ಸಮೃದ್ದವಾಗಿರುವುದರಿಂದ ಗರ್ಭಿಣಿ ಮತ್ತು ಬಾಣಂತಿಯರಿಗೆ ಉತ್ತಮ ಹರವಾಗಿದೆ.

ಕಜ್ಜಿ ತುರಿಕೆಗೆ ಔಷದಿ: ಸಪೋಟ ಹಣ್ಣಿನ ಬೀಜದ ಪೊಪ್ಪನ್ನು ಕೊಬ್ಬರಿ ಎಣ್ಣೆಯ ಜತೆಗೆ ಮಿಶ್ರ ಮಾಡಿ ತುರಿಕೆ ಕಜ್ಜಿ ಇರುವಂತ ಜಾಗಕ್ಕೆ ಹಚ್ಚಿದರೆ ಅವು ಗುಣವಾಗುತ್ತವೆ. ಅಷ್ಟೇ ಅಲ್ಲದೆ ತಲೆಯಲ್ಲಿನ ಹೊಟ್ಟು ಸಮಸ್ಯೆ, ಕೂದಲು ಉದುರುವ ಸಮಸ್ಯೆಗಳಿಗೆ ಕೂಡ ಔಷಧಿಯಾಗಿ ಕೆಲಸ ಮಾಡುತ್ತದೆ. ಹೇಗೆ ಅಂದರೆ ಹರಳೆಣ್ಣೆಯಲ್ಲಿ ಸಪೋಟ ಹಣ್ಣಿನ ಬೀಜದ ಪೊಪ್ಪನ್ನು ಕುದಿಸಿ ತೈಲ ತಯಾರಿಸಬಹುದು ಈ ತೈಲವನ್ನು ನಿತ್ಯವೂ ಹಚ್ಚಿದರೆ ಹೊತ್ತು ಹಾಗೂ ಕೂದಲು ಉದುರುವಿಕೆಯ ಸಮಸ್ಯೆಗಳಿಂದ ಪಾರಾಗಬಹುದು.

ಕಣ್ಣನ ಉರಿ, ನವೆ ಸಮಸ್ಯೆಗಳಿಗೆ ಸಪೋಟ ಹಣ್ಣಿನ ಬೀಜಗಳ ಕಷಾಯದಿಂದ ತೊಳೆದರೆ ಕಣ್ಣಿನ ಉರಿ, ನವೆ ಮುಂತಾದ ಸಮಸ್ಯೆಗಳು ಗುಣವಾಗುತ್ತದೆ. ಇನ್ನು ಸಪೋಟ ಹಣ್ಣಿನ ಬೀಜದಿಂದ ತಯಾರಿಸಿದ ಔಷಧಿಯನ್ನು ಮೆಕ್ಸಿಕೋದಲ್ಲಿ ಸಂಧಿನೋವು, ಮೂತ್ರದಲ್ಲಿ ಕಲ್ಲು, ಹೃದಯ ದೌರ್ಬಲ್ಯ ಮತ್ತು ಮೂರ್ಛೆ ರೋಗಗಳ ಚಿಕಿತ್ಸೆಯಲ್ಲಿ ಬಳಸುತ್ತಾರೆ.

ಸಪೋಟ ಹಣ್ಣನ್ನು ಪ್ರತಿದಿನ ಸೇವನೆ ಮಾಡುವುದರಿಂದ ದೇಹಕ್ಕೆ ತಂಪು ಸಿಗುತ್ತದೆ ಹಾಗೂ ದೇಹಕ್ಕೆ ರಕ್ತ ಹಾಗೂ ವೀರ್ಯವರ್ಧಕವಾಗಿ ಕೆಲಸ ಮಾಡುತ್ತದೆ, ಸಪೋಟ ಹಣ್ಣಿನ ರಸಕ್ಕೆ ಹಾಲು, ಸಕ್ಕರೆ ಬೆರಸಿ ಕುಡಿದರೆ ಹೊಟ್ಟೆ ಉರಿ ಶಮನವಾಗುತ್ತದೆ. ಹೀಗೆ ಹತ್ತಾರು ಪ್ರಯೋಜನಗಳನ್ನು ಸಪೋಟ ಹಣ್ಣಿನಿಂದ ಹಾಗೂ ಅದರ ಬೀಜಗಳಿಂದ ಪಡೆದುಕೊಳ್ಳಬಹುದು. ನಿಮಗೆ ಈ ಹಣ್ಣಿನ ಆರೋಗ್ಯಕಾರಿ ಪ್ರಯೋಜನಗಳು ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೂ ಹಂಚಿಕೊಳ್ಳಿ ಇದರ ಸದುಪಯೋಗವನ್ನು ಪಡೆದುಕೊಳ್ಳಲಿ.

Leave a Comment

error: Content is protected !!