ನಿಮ್ಮ ಶತ್ರುಗಳ ಆಟ ಏನು ನಡೆಯಬಾರದು ಅಂದ್ರೆ ಚಾಣಿಕ್ಯ ಹೇಳಿದ ಈ 2 ಮಾತು ಕೇಳಿ

ಚಾಣಕ್ಯನ ಹೆಸರು ಭಾರತೀಯ ಇತಿಹಾಸದಲ್ಲಿ ಇದೆ. ಚಾಣಕ್ಯನ ಅರ್ಥಶಾಸ್ತ್ರ, ನೀತಿಶಾಸ್ತ್ರ ನಮ್ಮ ಜೀವನಕ್ಕೆ ಈಗಲೂ ಸಂಬಂಧಿಸಿದೆ ಚಾಣಕ್ಯನಿಗೆ ಕೌಟಿಲ್ಯ ಎಂಬ ಹೆಸರಿದೆ. ಚಾಣಕ್ಯ ಜೀವನದಲ್ಲಿ ತಿಳಿದುಕೊಳ್ಳಬೇಕಾದ ಕೆಲವು ಸೂತ್ರಗಳನ್ನು ಸೂಚಿಸಿದ್ದಾರೆ ಅವುಗಳ ಬಗ್ಗೆ ಈ ಲೇಖನದಲ್ಲಿ ತಿಳಿದುಕೊಳ್ಳೋಣ.

ಚಾಣಕ್ಯನನ್ನು ಶ್ರೇಷ್ಠ ಪಂಡಿತ ಎಂದೆ ಕರೆಯುತ್ತಾರೆ. ಪ್ರಖ್ಯಾತ ಮೌರ್ಯ ಸಾಮ್ರಾಜ್ಯದ ಸ್ಥಾಪನೆಗೆ ಮೂಲ ಕಾರಣಿಕರ್ತ ಚಾಣಕ್ಯ. ಸಾಧನೆಗೆ, ಸೇಡಿಗೆ, ಗೆಲುವಿಗೆ, ಮನಶ್ಶಾಂತಿಗೆ, ಸುಖಕ್ಕೆ, ಶತ್ರುನಾಶಕ್ಕೆ ಹೀಗೆ ಹಲವಾರು ವಿಷಯಗಳ ಮೇಲೆ ಚಾಣಕ್ಯನ ತಂತ್ರ ಕಾಣಿಸುತ್ತದೆ. ಚಾಣಕ್ಯ ಬರೆದ ನೀತಿ ಪಾಠ ಈಗಲೂ ಪ್ರಚಲಿತದಲ್ಲಿದೆ. ನಾವು ಜೀವನದಲ್ಲಿ ಸಫಲರಾಗಬೇಕು ಎಂದರೆ ಚಾಣಕ್ಯನ ನೀತಿ ಪಾಠವನ್ನು ಪಾಲಿಸಬೇಕು. ಸಹೋದರ ಅಥವಾ ಸಂಬಂಧಿಗಳ ನಿಜಸ್ವರೂಪ ಗೊತ್ತಾಗುವುದು ಕಷ್ಟದ ಕಾಲದಲ್ಲಿ ಅಂದರೆ ನಾವು ಕಷ್ಟದಲ್ಲಿದ್ದಾಗ ಅವರ ಬಗ್ಗೆ ನಮಗೆ ತಿಳಿಯುತ್ತದೆ. ನಮ್ಮ ಮೇಲೆ ಅವರಿಗೆ ನಿಜವಾಗಿಯೂ ಪ್ರೀತಿ, ಅನುಕಂಪ ಇದೆಯೊ ಇಲ್ಲವೊ ಎನ್ನುವುದು ನಾವು ಕಷ್ಟದಲ್ಲಿದ್ದಾಗ ಗೊತ್ತಾಗುತ್ತದೆ.

ನಾವು ಕಷ್ಟದಲ್ಲಿದ್ದಾಗ ಅವರು ನಮ್ಮ ಹತ್ತಿರವೂ ಸುಳಿಯುವುದಿಲ್ಲ. ನಾವು ಕಷ್ಟದಲ್ಲಿದ್ದಾಗ ಯಾರು ನಮ್ಮ ಕೈ ಹಿಡಿಯುತ್ತಾರೆ ಅವರೆ ನಮ್ಮ ನಿಜವಾದ ಗೆಳೆಯರು. ಸಕ್ಕರೆಗೆ ಬರುವ ಇರುವೆ ರೀತಿ ನಾವು ಸಂತೋಷವಾಗಿದ್ದಾಗ ಯಾರು ಬೇಕಾದರೂ ನಮ್ಮ ಹತ್ತಿರ ಬರುತ್ತಾರೆ. ನಾವು ದುಖದಲ್ಲಿದ್ದಾಗ ಯಾರು ಬಂದು ಸಹಾಯ ಮಾಡುತ್ತಾರೊ ಅವರೆ ನಿಜವಾದ ಸಂಬಂಧಿಗಳು ಎಂದು ಚಾಣಕ್ಯ ಹೇಳಿದ್ದಾನೆ. ನಮ್ಮ ಬಾಳ ಸಂಗಾತಿ ನಮ್ಮ ಇತಿ ಮಿತಿಗಳನ್ನು ಅರಿತುಕೊಂಡು ನಮ್ಮ ಜೊತೆ ನಡೆಯುವಲ್ಲಿ ವಿಫಲವಾದರೆ ಅಂತಹ ಸಂಗಾತಿ ಜೊತೆ ಜೀವನ ನಡೆಸುವುದು ಕಷ್ಟ. ಅಂತಹ ಬಾಳಸಂಗಾತಿ ನಮ್ಮ ಜೊತೆ ಜೀವನ ನಡೆಸಲು ಯೋಗ್ಯತೆಯನ್ನು ಕಳೆದುಕೊಂಡಂತಾಗುತ್ತದೆ. ಅಂತವರ ಜೊತೆ ಜೀವನ ಮಾಡಿದರೆ ಜೀವನ ಪೂರ್ತಿ ಕಷ್ಟದಲ್ಲಿ ಕೈ ತೊಳೆಯಬೇಕಾಗುತ್ತದೆ ಎಂದು ಚಾಣಕ್ಯ ಹೇಳಿದ್ದಾರೆ.

ಗಂಡನಿಗೆ ಕೆಲಸ ಹೋದರೆ ಹೆಂಡತಿ ಕಾಲು ಕಸದಂತೆ ನೋಡಬಾರದು ಸುಖವಿರಲಿ, ಕಷ್ಟವಿರಲಿ ಗಂಡನ ಸುಖ ದುಃಖಕ್ಕೆ ಹೆಂಡತಿ, ಹೆಂಡತಿಯ ಸುಖ ದುಃಖಕ್ಕೆ ಗಂಡ ಆಸರೆಯಾಗಿರಬೇಕು. ಯಾವುದೆ ಸಮಯದಲ್ಲಿ ಮನಸಿನ ಗುಟ್ಟನ್ನು ಯಾರಿಗೂ ಹೇಳಬಾರದು ಈ ಒಂದು ಸ್ವಭಾವ ನಮ್ಮ ಜೀವನವನ್ನು ಹಾಳು ಮಾಡುತ್ತಿದೆ ಎಂದು ಚಾಣಕ್ಯ ಹೇಳುತ್ತಾನೆ. ನಾವು ಯಾರೊಂದಿಗಾದರೂ ನಮ್ಮ ಮನಸ್ಸಿನ ಗುಟ್ಟನ್ನು ಹಂಚಿಕೊಂಡರೆ ಅದು ಬೆಂಕಿಯಂತೆ ಹರಡುತ್ತದೆ.

ನೀವು ಹೊಸ ಬ್ಯುಸಿನೆಸ್ ಪ್ರಾರಂಭಿಸಲು ಪ್ಲಾನ್ ಮಾಡುತ್ತಿದ್ದರೆ ಅದನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳುತ್ತೀರಾ ಎಲ್ಲರೂ ನಿಮ್ಮ ಒಳಿತನ್ನೆ ಬಯಸುವುದಿಲ್ಲ ನಿಮ್ಮ ಪ್ಲಾನ್ ತಿಳಿದು ನಿಮ್ಮ ಕೆಲಸವನ್ನು ಹಾಳು ಮಾಡಬಹುದು. ನಿಮ್ಮ ಯೋಜನೆಗೆ ಅಡ್ಡಗಾಲು ಹಾಕಬಹುದು. ಯಾವುದೆ ಮನುಷ್ಯ ತನ್ನ ಸ್ವಂತ ವಸ್ತುಗಳ ಮೇಲೆ ಮಾತ್ರ ಹಕ್ಕನ್ನು ಚಲಾಯಿಸಬಹುದು. ಬೇರೆಯವರ ವಸ್ತುಗಳನ್ನು ಬಳಸುತ್ತಿದ್ದರೆ ನಾವು ಅವರ ಋಣದಲ್ಲಿ ಬದುಕುತ್ತಿದ್ದೇವೆ ಎಂದು ಅರ್ಥ.

ಎಷ್ಟೆ ಕಷ್ಟ ಇದ್ದರೂ ಅದನ್ನು ಮೆಟ್ಟಿ ನಿಂತು ಸ್ವಾಭಿಮಾನದಿಂದ ನಮ್ಮ ಬದುಕನ್ನು ಕಟ್ಟಿಕೊಳ್ಳಬೇಕು ಎಂದು ಚಾಣಕ್ಯ ಹೇಳಿದ್ದಾನೆ. ಅತಿಯಾಗಿ ಪ್ರಾಮಾಣಿಕನಾಗಿರಬಾರದು ಎಂಬುದು ಚಾಣಕ್ಯ ಹೇಳಿರುವ ಪ್ರಸಿದ್ಧ ನೀತಿಗಳಲ್ಲಿ ಒಂದಾಗಿದೆ. ಕಲಿಯುಗದಲ್ಲಿ ಪ್ರಾಮಾಣಿಕತೆಗೆ ಕಷ್ಟ ಜಾಸ್ತಿ. ವರ್ತಮಾನದಲ್ಲಿ ಬದುಕುವ ಮಾರ್ಗವನ್ನು ಕಂಡುಕೊಳ್ಳಿ ಕಳೆದು ಹೋದ ಸಮಯ, ಗತಿಸಿ ಹೋದ ಘಟನೆಯನ್ನು ನೆನಪಿಸಿ ಕೊರಗುವುದಕ್ಕಿಂತ ನಿನ್ನೆ ಬಗ್ಗೆ ಯೋಚನೆ ಮಾಡದೆ ನಾಳೆಯ ಬಗ್ಗೆ ಯೋಚನೆ ಮಾಡಬೇಕು ಎಂದು ಚಾಣಕ್ಯ ಹೇಳಿದ್ದಾರೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.

Leave a Comment

error: Content is protected !!