ಬುದ್ಧನ ಬಗ್ಗೆ ಯಾರಿಗೆ ತಿಳಿದಿಲ್ಲ. ಹಿಂದೂ ಧರ್ಮದ ಎಲ್ಲರಿಗೂ ತಿಳಿದಿದೆ. ಬುದ್ಧನ ತತ್ವಗಳು, ಆಚಾರ ವಿಚಾರಗಳು ಎಲ್ಲರಿಗೂ ಜೀವನಕ್ಕೆ ಮಾದರಿಯಾಗಿದೆ. ಆದರೆ ನನಗೆ ಸಂತೋಷ ಬೇಕು ಎಂದು ಹೇಳಿದವನಿಗೆ ಬುದ್ಧ ಹೇಳಿದ ಬುದ್ಧಿವಾದ ಏನು ಗೊತ್ತಾ? ಹೆಚ್ಚಾಗಿ ಇದು ಯಾರಿಗೂ ತಿಳಿದಿಲ್ಲ.ಅದನ್ನು ನಾವು ಇಲ್ಲಿ ನೋಡೋಣ.

ಭಾರತದ ಪ್ರಾಚೀನ ಧರ್ಮಗಳಲ್ಲಿ ಹಲವಾರು ಧರ್ಮಗಳಿವೆ. ಅದರಲ್ಲಿ ಬೌದ್ಧ ಧರ್ಮವು ಒಂದು. ಬೌದ್ಧ ಧರ್ಮದ ಸ್ಥಾಪಕ ಬುದ್ಧ. ಏಷ್ಯಾದ ಬೆಳಕು ಎಂದೇ ಕರೆಯಲ್ಪಡುತ್ತಾನೆ ಈ ಬುದ್ಧ.ಇವನ ಹೆಸರು ಗೌತಮ. ಆದರೆ ಬೌದ್ಧ ಧರ್ಮವನ್ನು ಸ್ಥಾಪಿಸಿದ್ದರಿಂದ ಬುದ್ಧ ಎಂದು ಹೆಸರು ಬಂತು.

ಒಮ್ಮೆ ಬಹುದೂರದಿಂದ ಒಬ್ಬ ಯಾತ್ರಿಕನೊಬ್ಬ ಬುದ್ಧನನ್ನು ಕಾಣಲು ಬಂದ.ಧ್ಯಾನದಲ್ಲಿ ಮಗ್ನನಾಗಿದ್ದ ಬುದ್ಧನ ಮುಖದಲ್ಲಿ ಮುಗುಳ್ನಗು ಇತ್ತು.ಸ್ವಲ್ಪ ಹೊತ್ತಿನಲ್ಲಿ ಆತ ಧ್ಯಾನದಿಂದ ಎಚ್ಚೆತ್ತ.ಮುಖದ ಪ್ರಫುಲ್ಲತೆ ಹಾಗೇ ಇತ್ತು. ಯಾತ್ರಿಕನಿಗೆ ಬುದ್ಧನ ಪ್ರಶಾಂತ ಮುಖ, ಮುಗುಳ್ನಗೆ ಬಗ್ಗೆ ಸವಾಲಾಗಿ ಕಂಡಿತು. ಆತ ಬುದ್ಧನಲ್ಲಿ ಹೇಳಿದ “ನನಗೆ ಸಂತೋಷ ಬೇಕು” ಎಂದು. ಬುದ್ಧ ಮುಗುಳ್ನಗುತ್ತ “ನನ್ನ ಮತ್ತು ಬೇಕು” ಈ ಎರಡನ್ನು ತೆಗೆದುಹಾಕು ನನಗೆ ಸಂತೋಷ ಸಿಗುತ್ತದೆ ಎಂದ. ಇಲ್ಲಿ ನಾನು,ನನ್ನದು ಎನ್ನುವುದು ಅಹಂ, ಬೇಕು ಎನ್ನುವುದು ಆಸೆ ಇವೆರಡನ್ನೂ ತೊರೆದರೆ ಸಂತೋಷ ಸಿಗುತ್ತದೆ ಎನ್ನುವುದು ಬುಧ್ಧನ ಮಾತಿನ ಸಾರವಾಗಿದೆ.

ಇಂತಹ ಮಾತುಗಳು ಬುದ್ಧನನ್ನು ಬಿಟ್ಟು ಯಾರಿಂದಲೂ ಬರಲು ಸಾಧ್ಯವಿಲ್ಲ.ಇಂತಹ ಎಷ್ಟೋ ಘಟನೆಗಳಿಂದಲೇ ಬುದ್ಧನನ್ನು ಏಷ್ಯಾದ ಬೆಳಕು ಎಂದು ಕರೆಯಲಾಗಿದೆ. ಇಂತಹವರು ಮತ್ತೆ ಭೂಮಿಯಲ್ಲಿ ಹುಟ್ಟಿ ಬರಲೆಂದು ನಾವೆಲ್ಲ ಆಶಿಸೋಣ.

By admin

Leave a Reply

Your email address will not be published.